ದೆಹಲಿ: ಭಾರತದಲ್ಲಿಯೂ ಯುಕೆಯಂತಹ ಪರಿಸ್ಥಿತಿ ಎದುರಾದರೆ ಇಲ್ಲಿ ದಿನಕ್ಕೆ 14 ಲಕ್ಷ ಒಮಿಕ್ರಾನ್ ರೂಪಾಂತರ (Omicron Variant) ಪ್ರಕರಣಗಳು ಪತ್ತೆಯಾಗಬಹುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ. ಒಮಿಕ್ರಾನ್ ರೂಪಾಂತರದ ಪ್ರಸರಣ ವಿಶ್ವದೆಲ್ಲೆಡೆ ಶುರುವಾಗಿದೆ. ಅದರ ಬೆನ್ನಲ್ಲೇ ಯುಕೆ ಮತ್ತು ಫ್ರಾನ್ಸ್ನಲ್ಲಿ ಕೊವಿಡ್ 19 ಪ್ರಕರಣಗಳಲ್ಲಿ ಸಿಕ್ಕಾಪಟೆ ಹೆಚ್ಚಳ ಕಂಡುಬಂದಿದೆ. ಅಲ್ಲಿರುವ ಹರಡುವಿಕೆ ದರದಷ್ಟೇ ಭಾರತದಲ್ಲೂ ಪ್ರಸರಣವಾದರೆ, ಇಲ್ಲಿ ದಿನಕ್ಕೆ 14 ಲಕ್ಷದಷ್ಟು ಕೇಸ್ಗಳು ದಾಖಲಾಗುತ್ತವೆ. ಅದರಲ್ಲಿ ಪೂರ್ಣಪ್ರಮಾಣದ ಲಸಿಕೆ ಪಡೆದ ವಯಸ್ಕರಲ್ಲೂ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, ಆಫ್ರಿಕಾದ ಕೆಲವು ದೇಶಗಳಲ್ಲಿ ಮತ್ತು ಯುರೋಪ್ನ ಕೆಲ ದೇಶಗಳಲ್ಲಿ ಇದೀಗ ಕೊವಿಡ್ 19 ಪರಿಸ್ಥಿತಿ ಹದಗೆಟ್ಟಿದೆ ಎಂದು ನೀವು ಕೇಳಿರುತ್ತೀರಿ. ಕೊರೊನಾ ವೈರಸ್ ಮತ್ತು ಅದರ ಎಲ್ಲ ರೂಪಾಂತರಗಳ ಪ್ರಸರಣವೂ ಆಗುತ್ತಿದೆ. ಅದರಲ್ಲೂ ಒಮಿಕ್ರಾನ್ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಅಲ್ಲೆಲ್ಲ ಉಂಟಾಗುತ್ತಿರುವ ಕೆಟ್ಟ ಪರಿಸ್ಥಿತಿ ಭಾರತಕ್ಕೆ ಬರುವುದು ಬೇಡ ಎಂಬುದು ನಮ್ಮ ಆಶಯ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಹಾಗೊಮ್ಮೆ ಭಾರತದಲ್ಲೂ ಒಮಿಕ್ರಾನ್ ಪ್ರಸರಣ ಅತ್ಯಂತ ಹೆಚ್ಚಾಗಬಹುದು. ಎದುರಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಹಾಗೇ, ವಿಕೆ ಪೌಲ್ ಬ್ರಿಟನ್ನ ಉದಾಹರಣೆಯನ್ನು ಕೊಟ್ಟಿದ್ದಾರೆ. ಯುಕೆಯಲ್ಲಿ ಗುರುವಾರ ಒಂದೇ ದಿನ 80,000 ಕೊರೊನಾ ಕೇಸ್ಗಳು ದಾಖಲಾಗಿವೆ. ಹಾಗಂತ ಅಲ್ಲಿ ಲಸಿಕೆ ನೀಡಿಕೆಯೂ ವೇಗದಿಂದ ಸಾಗುತ್ತಿದೆ. ಇದೇ ಪರಿಸ್ಥಿತಿ ಭಾರತದಲ್ಲಿ ಎದುರಾದರೆ ತುಂಬ ಕಷ್ಟ. ನಮ್ಮಲ್ಲಿ ಜನಸಂಖ್ಯೆ ಅತ್ಯಂತ ಹೆಚ್ಚಾಗಿರುವುದರಿಂದ, ಈಗ ಇಂಗ್ಲೆಂಡ್ನಲ್ಲಿರುವ ಪ್ರಸರಣ ರೇಟ್ ಭಾರತದಲ್ಲೂ ಸೃಷ್ಟಿಯಾದರೆ ಇಲ್ಲಿ ದಿನಕ್ಕೆ 14 ಲಕ್ಷ ಕೇಸ್ ಗ್ಯಾರಂಟಿ. ಇನ್ನು ಫ್ರಾನ್ಸ್ನಲ್ಲಿ ಶೇ.80ರಷ್ಟು ಭಾಗಶಃ ಲಸಿಕೆ ನೀಡಿ ಮುಗಿದಿದೆ. ಆದರೆ ದಿನಕ್ಕೆ 65 ಸಾವಿರ ಕೇಸ್ಗಳು ದಾಖಲಾಗುತ್ತಿವೆ ಎಂದು ಹೇಳಿದ್ದಾರೆ.
#WATCH | “…If we look at the scale of spread in the UK & if there is a similar outbreak in India, then given our population, there will be 14 lakh cases every day…,” Dr. VK Paul, Member-Health, Niti Aayog said at a Health Ministry press briefing on #COVID19 pic.twitter.com/EBvZNUuHlD
— ANI (@ANI) December 17, 2021
ಬ್ರಿಟನ್ನಲ್ಲಿ ಕೆಟ್ಟ ಪರಿಸ್ಥಿತಿ
ಬ್ರಿಟನ್ನಲ್ಲಿ ಕಳೆದ 24ಗಂಟೆಯಲ್ಲಿ 93,045 ಕೊರೊನಾ ಕೇಸ್ಗಳು ದಾಖಲಾಗಿವೆ. ಕಳೆದ ಮೂರು ದಿನಗಳಿಂದ ಇದೇ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆ ದೇಶದಲ್ಲೀಗ 11,190,354 ಕೊರೊನಾ ಸೋಂಕಿತರಿದ್ದಾರೆ. ಇದರೊಂದಿಗೆ ನಿನ್ನೆ ಒಂದೇ ದಿನ ಒಟ್ಟು 3201 ಒಮಿಕ್ರಾನ್ ಕೇಸ್ಗಳು ದಾಖಲಾಗಿದ್ದು, ಅಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 14,909 ರಷ್ಟಾಗಿದೆ.
ಇದನ್ನೂ ಓದಿ: Greta Thunberg : ಅಭಿಜ್ಞಾನ ; ‘ಅಪ್ಪ, ನೀನು ನನ್ನನ್ನು ತಿದ್ದಬೇಡ, ಆ ಉದ್ಯಮಿಗಳನ್ನು ರಾಜಕಾರಣಿಗಳನ್ನು ತಿದ್ದು’
Published On - 9:13 am, Sat, 18 December 21