ದೆಹಲಿ: ಭಾರತದಲ್ಲಿ ಅತಿ ಹೆಚ್ಚು ಕೋವಿಡ್ -19 (Covid-19) ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ 2,151 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಕಳೆದ ವರ್ಷ ಅಕ್ಟೋಬರ್‌ನಿಂದ ಅತಿ ಹೆಚ್ಚು ಎಂದು ಹೇಳಲಾಗಿದೆ. ಭಾರತವು ಬುಧವಾರ 2,151 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಆದರೆ ಸಕ್ರಿಯ ಪ್ರಕರಣಗಳು 11,903 ಕ್ಕೆ ಏರಿದೆ ಎಂದು ಇಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್ಸೈಟ್ನಲ್ಲಿ ಅಂಕಿಅಂಶಗಳು ತಿಳಿಸಿವೆ. ಇದುವರೆಗೂ ಏಳು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 5,30,848 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಿಂದ ಮೂರು, ಕರ್ನಾಟಕದಿಂದ ಒಂದು ಮತ್ತು ಕೇರಳದಿಂದ ಮೂರು ಸಾವುಗಳು ವರದಿಯಾಗಿವೆ. ದೈನಂದಿನ ಪಾಸಿಟಿವ್ ಪ್ರಕರಣದ ದರವು 1.51 ಪ್ರತಿಶತ ಮತ್ತು ವಾರದ ಪಾಸಿಟಿವ್ ಪ್ರಕರಣ ದರವನ್ನು 1.53 ಪ್ರತಿಶತದಲ್ಲಿ ದಾಖಲಿಸಲಾಗಿದೆ.
ಹೊಸ ಪ್ರಕರಣಗಳು ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ದೇಶದಲ್ಲಿ ಒಟ್ಟು ಕೋವಿಡ್ ಸಂಖ್ಯೆ 4.47 ಕೋಟಿಯಾಗಿದೆ (4,47,09,676). ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ 0.03 ಪ್ರತಿಶತವನ್ನು ಒಳಗೊಂಡಿವೆ. ಕೋವಿಡ್‌ನಿಂದ ಚೇತರಿಕೆಗೊಂಡವರ ಸಂಖ್ಯೆ 98.78 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ: India Covid Updates: ಭಾರತದಲ್ಲಿ ಒಂದೇ ದಿನ 1,590 ಹೊಸ ಕೊರೊನಾ ಪ್ರಕರಣಗಳು ಪತ್ತೆ
India records 2,151 new COVID-19 cases, 1,222 recoveries in the last 24 hours; Active caseload stands at 11,903
— ANI (@ANI) March 29, 2023
1,200ಕ್ಕೂ ಹೆಚ್ಚು ಜನ ಕೊರೊನಾ ಹೊಸ ಚೇತರಿಸಿಕೊಳ್ಳುವುದರೊಂದಿಗೆ ಕೋವಿಡ್‌ನಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,41,66,925 ಕ್ಕೆ ಏರಿದೆ. ಕೋವಿಡ್ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 11,336 ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಇದುವರೆಗೆ 220.65 ಕೋಟಿ ಲಸಿಕೆ ಡೋಸ್ ಪಡೆದುಕೊಂಡಿದ್ದಾರೆ. 95.20 ಕೋಟಿ ಎರಡನೇ ಡೋಸ್‌ಗಳು ಮತ್ತು 22.86 ಕೋಟಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ.
Published On - 10:32 am, Wed, 29 March 23