Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ಮಹಾರಾಷ್ಟ್ರದ ಚಂದ್ರಾಪುರದ ತೇಗದ ಮರ ಬಳಕೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಗಡ್​ಚಿರೋಲಿ ಜಿಲ್ಲೆಯ ಬೆಲೆಬಾಳುವ ತೇಗದ ಮರವನ್ನು ಭವ್ಯ ಮಂದಿರದ ಮುಖ್ಯದ್ವಾರಕ್ಕೆ ಬಳಸಲಾಗುವುದು.

Ayodhya Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ಮಹಾರಾಷ್ಟ್ರದ ಚಂದ್ರಾಪುರದ ತೇಗದ ಮರ ಬಳಕೆ
ಅಯೋಧ್ಯೆImage Credit source: Deccan Herald
Follow us
ನಯನಾ ರಾಜೀವ್
|

Updated on: Mar 29, 2023 | 7:59 AM

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಗಡ್​ಚಿರೋಲಿ ಜಿಲ್ಲೆಯ ಬೆಲೆಬಾಳುವ ತೇಗದ ಮರವನ್ನು ಭವ್ಯ ಮಂದಿರದ ಮುಖ್ಯದ್ವಾರಕ್ಕೆ ಬಳಸಲಾಗುವುದು. ಆಲಪಲ್ಲಿಯ ತೇಗದ ಮರಕ್ಕೆ ವಿಶ್ವಾದ್ಯಂತ ಬೇಡಿಕೆಯಿದೆ. ಈ ತೇಗದ ಮರವನ್ನು ಆಲಪಲ್ಲಿಯಿಂದ ಬಲ್ಲಾರ್‌ಪುರದ ಕಡೆಗೆ ರವಾನಿಸಲಾಗಿದೆ. ತೇಗ ಇಂದು ಬಳ್ಳಾರ್‌ಪುರದಲ್ಲಿರುವ ಅರಣ್ಯ ಅಭಿವೃದ್ಧಿ ಮಂಡಳಿಯ ಡಿಪೋಗೆ ಮರ ತಲುಪಲಿದ್ದು, ರಾಜ್ಯ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ತೇಗದ ಮರಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿ ನಂತರ ಬಲ್ಲಾರ್‌ಪುರದಿಂದ ಚಂದ್ರಾಪುರಕ್ಕೆ ಭವ್ಯ ಮೆರವಣಿಗೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಳೆ ಚಂದ್ರಾಪುರದಲ್ಲಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿನ್ನೆಲೆ ರಾಮಮಂದಿರಕ್ಕೆ ಮಹಾರಾಷ್ಟ್ರದ ಚಂದಾಪುರ ಅರಣ್ಯದ ಟೀಕ್ತೇಗದ ಮರಗಳ ಬಳಕ ಮಾಡಲಾಗುತ್ತಿದ್ದು 1.32 ಕೋಟಿ ರೂ. ಮೌಲ್ಯದ ತೇಗದ ಮರ ಖರೀದಿಗೆ ಮಹಾರಾಷ್ಟ್ರದ ಅರಣ್ಯ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಮತ್ತಷ್ಟು ಓದಿ:ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಯಾವ ಹಂತದಲ್ಲಿದೆ, ಏನು ವಿಶೇಷಗಳಿವೆ? ಇಲ್ಲಿದೆ ಟಿವಿ9 ಕನ್ನಡ ವಿಶೇಷ ವರದಿ

ದೇವಸ್ಥಾನಕ್ಕೆ 1800 ಕ್ಯೂಬಿಕ್ ಮೀಟರ್ ಮರದ ಅಗತ್ಯವಿದೆ, ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಮರವನ್ನು ಪೂರೈಸಲು ಬೇಕಾದ ಔಪಚಾರಿಕತೆಯನ್ನು ಪೂರ್ಣಗೊಳಿಸಿದೆ.

ಮಾರ್ಚ್ 29 ರಂದು ಎಫ್​ಡಿಸಿಎಂ ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ, ಕಳಿಸಿದ ಮರದ ಬೆಲೆ 1.32 ಕೋಟಿ ರೂ. ಎನ್ನಲಾಗಿದೆ. ಮೊದಲು ಚಂದ್ರಾಪುರದ ಮಾತಾ ಮಹಾಕಾಳಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಮಧ್ಯಾಹ್ನ 3.30ಕ್ಕೆ ಬಲ್ಲಾರಾಪುರ ಅಲ್ಲಪಲ್ಲಿ ರಸ್ತೆಯಲ್ಲಿ ಅರಣ್ಯ ಪ್ರವೇಶ ದ್ವಾರದಿಂದ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆಯು 6 ಗಂಟೆಗೆ ಮಾತಾ ಕಾಳಿ ಮಂದಿರಕ್ಕೆ ತಲುಪಲಿದ್ದು, ಅಲ್ಲಿ ಸರ್ವಧರ್ಮದ ಆರಾಧನೆ ಹಾಗೂ ಕಾರ್ಯಕ್ರಮಗಳು ಜರುಗಲಿವೆ.

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತೇಗದ ಮರಗಳನ್ನು ದೇವಾಲಯದ ಮುಖ್ಯ ದ್ವಾರವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ದೇವಾಲಯವನ್ನು ಅಲಂಕರಿಸಲು ಸೊಗಸಾದ ಕೆತ್ತನೆಯನ್ನು ಬಳಸಲು ಮರದ ಅಗತ್ಯವಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದವರು ಮುಖ್ಯದ್ವಾರ ಮತ್ತು ಇತರೆ ನಿರ್ಮಾಣಗಳಿಗೆ ಹೆಚ್ಚು ಹೆಚ್ಚು ಮರವನ್ನು ಬಳಸಬೇಕು ಎಂದು ದೇವಾಲಯ ನಿರ್ಮಾಣ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?