ದೆಹಲಿ: ಭಾರತವು 17 ಕೋಟಿ ಜನರಿಗೆ ಕೊವಿಡ್ ಲಸಿಕೆ ನೀಡಲು 114 ದಿನಗಳನ್ನು ಮಾತ್ರ ತೆಗೆದುಕೊಂಡಿದ್ದು, ಇದೇ ಪ್ರಮಾಣದ ಜನರಿಗೆ ಕೊವಿಡ್ ಲಸಿಕೆ ನೀಡಲು ಅಮೆರಿಕಾಕ್ಕೆ 115 ದಿನಗಳು ಬೇಕಾಗಿದ್ದವು. ಚೀನಾಕ್ಕೆ 119 ದಿನಗಳು ಬೇಕಾಗಿದ್ದವು. ಹೀಗಾಗಿ ಅತಿ ವೇಗವಾಗಿ ಕೊವಿಡ್ ಲಸಿಕೆ ವಿತರಣೆ ಮಾಡುವಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೊವಿಡ್ ಲಸಿಕೆ ವಿತರಣಾ ಅಭಿಯಾನ ಆರಂಭವಾಗಿ ಈವರೆಗೆ 118 ದಿನಗಳಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಈವರೆಗೆ ಒಟ್ಟಾರೆ 17.93 ಕೋಟಿ ಜನರಿಗೆ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೇ 16ರಿಂದ ಮೇ 31ರ ಅವಧಿಯಲ್ಲಿ 1 ಲಕ್ಷ 92 ಸಾವಿರ ಕೊವಿಡ್ ಲಸಿಕೆಯನ್ನು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸೇರಿ ಒದಗಿಸಲಾಗಿದೆ. ಇದರಲ್ಲಿ 162.5 ಲಕ್ಷ ಕೊವಿಸೀಲ್ಡ್ ಲಸಿಕೆ ಇದ್ದು, 29.49 ಲಕ್ಷ ಕೊವ್ಯಾಕ್ಸಿನ್ ಲಸಿಕೆ ಪೂರೈಸಲಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಶೀಘ್ರದಲ್ಲೇ ಕೊವಿಡ್ ಲಸಿಕೆ ಅಭಿವೃದ್ಧಿ
Covid-19 Karnataka Update: ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 41,779 ಜನರಿಗೆ ಕೊವಿಡ್ ದೃಢ, 373 ಜನರು ನಿಧನ
(India distributes 17 crore vaccine in 114 days faster than America and China)
Published On - 9:28 pm, Fri, 14 May 21