ಆಗಷ್ಟ್‌ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿಲ್ಲ

|

Updated on: Jul 31, 2020 | 8:55 PM

ನವದೆಹಲಿ: ಭಾರತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ಆಗಷ್ಟ್‌ 31ರ ಮಧ್ಯರಾತ್ರಿಯವರೆಗೆ ಮುಂದುವರಿಸಿದೆ. ಕೊರೊನಾ ಹೆಮ್ಮಾರಿಯ ಆರ್ಭಟದಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಕೇಂದ್ರ ಸರ್ಕಾರ ಜುಲೈ 15ರ ವರೆಗೆ ನಿಷೇಧ ಹೇರಿತ್ತು. ಇದಾದ ನಂತರ ಅದನ್ನು ಜುಲೈ 31ರವರೆಗೆ ವಿಸ್ತರಿಸಿತ್ತು. ಈಗ ಅದನ್ನು ಆಗಸ್ಟ್‌ 31ರ ವರೆಗೆ ವಿಸ್ತರಿಸಿದೆ. ಆದ್ರೆ ವಿಶೇಷ ಸಂದರ್ಭಗಳಲ್ಲಿ ಏರ್‌ ಬಬಲ್‌ ಮಾರ್ಗದಡಿ ಭಾರತ ಅಮೆರಿಕ, ಫ್ರಾನ್ಸ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗಳ ಜತೆ ಒಪ್ಪಂದ ಮಾಡಿಕೊಂಡಿದ್ದ, ಈ ಮಾರ್ಗಗಳಲ್ಲಿ […]

ಆಗಷ್ಟ್‌ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿಲ್ಲ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಭಾರತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ಆಗಷ್ಟ್‌ 31ರ ಮಧ್ಯರಾತ್ರಿಯವರೆಗೆ ಮುಂದುವರಿಸಿದೆ.

ಕೊರೊನಾ ಹೆಮ್ಮಾರಿಯ ಆರ್ಭಟದಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಕೇಂದ್ರ ಸರ್ಕಾರ ಜುಲೈ 15ರ ವರೆಗೆ ನಿಷೇಧ ಹೇರಿತ್ತು. ಇದಾದ ನಂತರ ಅದನ್ನು ಜುಲೈ 31ರವರೆಗೆ ವಿಸ್ತರಿಸಿತ್ತು. ಈಗ ಅದನ್ನು ಆಗಸ್ಟ್‌ 31ರ ವರೆಗೆ ವಿಸ್ತರಿಸಿದೆ.

ಆದ್ರೆ ವಿಶೇಷ ಸಂದರ್ಭಗಳಲ್ಲಿ ಏರ್‌ ಬಬಲ್‌ ಮಾರ್ಗದಡಿ ಭಾರತ ಅಮೆರಿಕ, ಫ್ರಾನ್ಸ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗಳ ಜತೆ ಒಪ್ಪಂದ ಮಾಡಿಕೊಂಡಿದ್ದ, ಈ ಮಾರ್ಗಗಳಲ್ಲಿ ಮಾತ್ರ ವಿಶೇಷ ವಿಮಾನಗಳ ಹಾರಾಟ ವಿರುತ್ತೆ.