Smart India Hackathon: ವಿದ್ಯಾರ್ಥಿಗಳನ್ನ ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ!
ದೆಹಲಿ: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್. ಇಲ್ಲಿ ವಿದ್ಯಾರ್ಥಿಗಳಿಗೆ ದಿನನಿತ್ಯ ಜೀವನದಲ್ಲಿ ಎದುರಾಗೋ ಸಮಸ್ಯೆಗಳನ್ನ ಪರಿಹರಿಸೋ ಚಾಲೆಂಜ್ ನೀಡಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನ ಪರಿಹರಿಸಿದ್ದಾರೆ. ಇಂದು ಇದರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಸಂಜೆ 4:30ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಅಂದ ಹಾಗೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮೂಲಕ ಅನ್ವೇಷಣೆ, ಸಮಸ್ಯೆ ಪರಿಹರಿಸೋ ಮನೋಭಾವ ಮತ್ತು ಔಟ್ ಆಫ್ ದಿ ಬಾಕ್ಸ್ ಆಲೋಚನೆ ಬೆಳೆಸುವುದೇ ಉದ್ದೇಶವಾಗಿದೆ. 2017ರಲ್ಲಿ […]
ದೆಹಲಿ: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್. ಇಲ್ಲಿ ವಿದ್ಯಾರ್ಥಿಗಳಿಗೆ ದಿನನಿತ್ಯ ಜೀವನದಲ್ಲಿ ಎದುರಾಗೋ ಸಮಸ್ಯೆಗಳನ್ನ ಪರಿಹರಿಸೋ ಚಾಲೆಂಜ್ ನೀಡಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನ ಪರಿಹರಿಸಿದ್ದಾರೆ. ಇಂದು ಇದರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಸಂಜೆ 4:30ಕ್ಕೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ.
ಅಂದ ಹಾಗೆ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮೂಲಕ ಅನ್ವೇಷಣೆ, ಸಮಸ್ಯೆ ಪರಿಹರಿಸೋ ಮನೋಭಾವ ಮತ್ತು ಔಟ್ ಆಫ್ ದಿ ಬಾಕ್ಸ್ ಆಲೋಚನೆ ಬೆಳೆಸುವುದೇ ಉದ್ದೇಶವಾಗಿದೆ. 2017ರಲ್ಲಿ ಮೊದಲು 42 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ರು. 2018ರಲ್ಲಿ ಇದು ಒಂದು ಲಕ್ಷಕ್ಕೆ ಏರಿಕೆಯಾದ್ರೆ, 2019ರಲ್ಲಿ ಎರಡು ಲಕ್ಷಕ್ಕೆ ಏರಿಕೆಯಾಗಿತ್ತು.
ಆದ್ರೆ ಈ ವರ್ಷ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಲ್ಲಿ ಬರೋಬ್ಬರಿ ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಆನ್ಲೈನ್ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ರು. 243 ಹೇಳಿಕೆಗಳ ಪೈಕಿ 37 ಕೇಂದ್ರ ಸರ್ಕಾರದ ಇಲಾಖೆಗಳ, 17 ರಾಜ್ಯ ಸರ್ಕಾರದ ಮತ್ತು 20 ಕೈಗಾರಿಕೆಗಳ ಸಮಸ್ಯೆಗಳು ಸೇರಿವೆ. ಇಂಥ ಕಠಿಣ ಸಮಸ್ಯೆ ಪರಿಹರಿಸೋ ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ.
ಒಟ್ನಲ್ಲಿ, ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಏನ್ ಹೇಳ್ತಾರೆ? ಹೇಗೆ ವಿದ್ಯಾರ್ಥಿಗಳಿಗೆ ಹುರಿದುಂಬಿಸ್ತಾರೆ ಅನ್ನೋದನ್ನ ತಿಳೀಬೇಕು ಅಂದ್ರೆ ಸಂಜೆ 4:30ರವರೆಗೆ ಕಾಯಲೇಬೇಕು.