ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮುಂದಿನ 5 ದಿನಗಳಿಗಾಗುವಷ್ಟು ಕೊವಿಡ್ ಲಸಿಕೆ ಸಂಗ್ರಹದಲ್ಲಿದೆ. ದೇಶದಾದ್ಯಂತ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಿದ್ದು, ಲಸಿಕ ಕೊರತೆ ನೀಗಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಸದ್ಯ ಎರಡು ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಒಡಿಶಾದಲ್ಲಿ ನಾಲ್ಕು ದಿನಗಳಿಗಾಗುವಷ್ಟು ಲಸಿಕೆ ಬಾಕಿ ಇದೆ. ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ 3.6 ದಶಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 19.6 ದಶಲಕ್ಷ ಡೋಸ್ ಈಗ ಸಂಗ್ರಹದಲ್ಲಿದ್ದು ಇದು ಐದೂವರೆ ದಿನಕ್ಕಾಗುವಷ್ಟಾಗಿದೆ. ಮುಂದಿನ ವಾರದಲ್ಲಿ 24.5 ದಶಲಕ್ಷ ಡೋಸ್ ಲಸಿಕೆ ತಯಾರಾಗಲಿದ್ದು ಒಂದು ವಾರಕ್ಕಾಗುವಷ್ಟಿದೆ.
ಆರೋಗ್ಯ ಸಚಿವಾಲಯದ ಅಧಿಕಾರಿಗಳ ಮಾಹಿತಿ ಪ್ರಕಾರ ಲಸಿಕೆ ಸಂಗ್ರಹ ಮತ್ತು ಲಸಿಕೆ ವಿತರಣೆಯ ಕಾರ್ಯಕ್ಕೆ 4ರಿಂದ 8 ದಿನಗಳು ಬೇಕಾಗುತ್ತವೆ. ಪ್ರತಿದಿನವೂ ಎಲ್ಲ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿನ ಲಸಿಕೆ ವಿತರಣೆ, ಲಸಿಕೆ ಸಂಗ್ರಹದ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತದೆ.
ಆಂಧ್ರ ಪ್ರದೇಶದಲ್ಲಿ ಕೇವಲ 1.4 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದ. ಏಪ್ರಿಲ್ 1ರಿಂದ ಇಲ್ಲಿ ಪ್ರತಿ ದಿನ ಇಲ್ಲಿ ಸರಾಸರಿ 1.1 ಲಕ್ಷಕ್ಕಿಂತ ಡೋಸ್ ಲಸಿಕೆ ವಿತರಣೆ ನಡೆಯುತ್ತದೆ. 14.6 ಲಕ್ಷ ಡೋಸ್ ಲಸಿಕೆ ಆದಷ್ಟು ಬೇಗ ತಲುಪಲಿ ಎಂದು ಆಂಧ್ರ ಸರ್ಕಾರ ಕಾಯುತ್ತಿದೆ. ಬಿಹಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ರತಿದಿನವೂ ಸರಾಸರಿ 1.7ಲಕ್ಷ ಡೋಸ್ ಲಸಿಕೆ ವಿತರಣೆಯಾಗುತ್ತಿದ್ದು 2.6 ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಅತೀ ಹೆಚ್ಚು ಜನಸಂಖ್ಯೆಯಿರುವ ತಮಿಳುನಾಡಿನಲ್ಲಿ ಕಳೆದ ವಾರ ಇ ಲಸಿಕೆ ವಿತರಣೆ ಅತೀ ಕಡಿಮೆ ಎಂದರೆ 37,000 ಆಗಿದ್ದು, ಈಗಲೂ 17 ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವಾರಕ್ಕಾಗುವಷ್ಟೇ ಲಸಿಕೆ ಬಾಕಿ ಉಳಿದೆ.
ಮಹಾರಾಷ್ಟ್ರದಲ್ಲಿ ಪ್ರತಿ ದಿನ ಸರಾಸರಿ 3.9 ಲಕ್ಷ ಡೋಸ್ ಲಸಿಕೆ ವಿತರಣೆಯಾಗುತ್ತಿದೆ. ಇತರ ರಾಜ್ಯಗಳ ಪೈಕಿ ಅತೀ ಹೆಚ್ಚು ಡೋಸ್ ಲಸಿಕೆ ವಿತರಣೆಯಾಗುತ್ತಿರುವ ರಾಜ್ಯವಾಗಿದೆ ಮಹಾರಾಷ್ಟ್ರ. ಇಲ್ಲಿ 15ಲಕ್ಷ ಡೋಸ್ ಲಸಿಕೆ ಸಂಗ್ರಹದಲ್ಲಿದ್ದು, ನಾಲ್ಕು ದಿನಗಳಿಗಾಗುವಷ್ಟಾಗಿದೆ. ಉತ್ತರ ಪ್ರದೇಶ (2.5 ದಿನಗಳು ), ಉತ್ತರಾಖಂಡ (2.9), ಒಡಿಶಾ (3.2 ದಿನಗಳು), ಮಧ್ಯ ಪ್ರದೇಶದಲ್ಲಿ 3.5 ದಿನಗಳಿಗಾಗುವಷ್ಟು ಲಸಿಕೆ ಉಳಿದಿದೆ. ಮುಂದಿನ ದಿನಗಳಲ್ಲಿ ತಯಾರಾಗುವ ಲಸಿಕೆಗಳು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಕ್ಕೆ ಸರಿಯಾದ ಸಮಯದಲ್ಲಿ ತಲುಪುವುದಾದರೆ ಅಲ್ಲಿ ಲಸಿಕೆ ಕೊರತೆ ಇರಲಾರದು. ದೇಶದಲ್ಲಿ ಏಪ್ರಿಲ್ 8, ಬೆಳಗ್ಗೆ 8.00ಗಂಟೆಯವರೆಗಿನ ಮಾಹಿತಿ ಪ್ರಕಾರ ಒಟ್ಟು 9,40,96,689 ಕೊವಿಡ್ ಲಸಿಕೆ ನೀಡಲಾಗಿದೆ. ಏಪ್ರಿಲ್ 7ರಂದು 34,73,083 ಡೋಸ್ ಲಸಿಕೆ ನೀಡಲಾಗಿದೆ.
#IndiaFightsCorona:#COVID19Vaccination Status (As on 08th April, 2021, 08:00 PM)
✅Total Vaccine Doses administered: 9,40,96,689
✅Vaccine Doses administered: 34,73,083#We4Vaccine #LargestVaccinationDrive@ICMRDELHI @DBTIndia pic.twitter.com/JlcRk9TNXR
— #IndiaFightsCorona (@COVIDNewsByMIB) April 9, 2021
ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆಯ ಅಂಕಿ ಅಂಶಗಳನ್ನು ನೋಡಿದರೆ ಕರ್ನಾಟಕದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 54,63,774 . ಮೊದಲ ಡೋಸ್ – 49, 36,828, ಎರಡನೇ ಡೋಸ್ 5,26,946. ಕೇರಳದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 43,56,951 . ಮೊದಲ ಡೋಸ್ – 38,99,535 , ಎರಡನೇ ಡೋಸ್ 4,56,416. ತಮಿಳುನಾಡಿನಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 34,02,198 . ಮೊದಲ ಡೋಸ್ – 30,62,266, ಎರಡನೇ ಡೋಸ್ 3,39,932. ಆಂಧ್ರ ಪ್ರದೇಶದಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 34,97015 . ಮೊದಲ ಡೋಸ್ – 3020636, ಎರಡನೇ ಡೋಸ್ 4,76,379. ದೆಹಲಿಯಲ್ಲಿ ಒಟ್ಟು ಲಸಿಕೆ ಪಡೆದವರ ಸಂಖ್ಯೆ 18,97,553 . ಮೊದಲ ಡೋಸ್ – 15,65,598, ಎರಡನೇ ಡೋಸ್ 3,31,955 ಆಗಿದೆ.
There is NO SHORTAGE of #COVIDVaccines!
The government is continuously monitoring & enhancing supply. So, DON’T let FAKE NEWS mislead you.
Only trust authentic sources & be responsible while forwarding such reports.
For latest updates on #COVID19, visit https://t.co/CKhgW2LA7d. pic.twitter.com/wZLKaMOC86— MyGovIndia (@mygovindia) April 8, 2021
ಆದಾಗ್ಯೂ, ದೇಶದಲ್ಲಿ ಕೊವಿಡ್ ಲಸಿಕೆಯ ಕೊರತೆ ಇಲ್ಲ. ನಾವು ನಿರಂತರವಾಗಿ ನಿಗಾ ವಹಿಸಿ , ಲಸಿಕೆ ಪೂರೈಸುತ್ತಿದ್ದೇವೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: India Coronavirus Update: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,30,60,542 ಕೊರೊನಾ ಸೋಂಕಿತರು ಪತ್ತೆ; 780 ಜನರು ಸಾವು
Published On - 12:34 pm, Fri, 9 April 21