India Coronavirus Update: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,31,968 ಕೊರೊನಾ ಸೋಂಕಿತರು ಪತ್ತೆ; 780 ಜನರು ಸಾವು

India Covid-19 New cases: ಕಳೆದ 24 ಗಂಟೆಗಳಲ್ಲಿ ಒಟ್ಟು 780 ಜನರು ಮೃತಪಟ್ಟಿದ್ದಾರೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 13,64,205 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಮೊನ್ನೆಗಿಂತ ಲಕ್ಷಕ್ಕೂ ಹೆಚ್ಚು ಜನರಿಗೆ ನಿನ್ನೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

India Coronavirus Update: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,31,968 ಕೊರೊನಾ ಸೋಂಕಿತರು ಪತ್ತೆ; 780 ಜನರು ಸಾವು
ಪ್ರಾತಿನಿಧಿಕ ಚಿತ್ರ
Follow us
guruganesh bhat
|

Updated on:Apr 09, 2021 | 1:12 PM

ದೆಹಲಿ: ಭಾರತದಲ್ಲಿ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಗಗನಮುಖಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 1,31,968 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ದೇಶದ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 9,79,608ಕ್ಕೆ ತಲುಪಿದೆ. ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಕೊರೊನಾ ಸೋಂಕಿತರು ನಾಲ್ಕನೇ ಬಾರಿ ಪತ್ತೆಯಾದಂತಾಗಿದೆ. ಈ ಮೂಲಕ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13,060,542ಕ್ಕೇರಿದೆ.

ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 1,19,13,292 ಜನರು ಗುಣಮುಖರಾಗಿದ್ದಾರೆ. ಈವರೆಗೆ ದೇಶದ 9,43,34,262 ಜನರಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗಿದೆ. ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಕಡಿಮೆಯಿಲ್ಲ. ಕಳೆದ 24 ಗಂಟೆಗಳಲ್ಲಿ ಒಟ್ಟು 780 ಜನರು ಮೃತಪಟ್ಟಿದ್ದಾರೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ 13,64,205 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಮೊನ್ನೆಗಿಂತ ಲಕ್ಷಕ್ಕೂ ಹೆಚ್ಚು ಜನರಿಗೆ ನಿನ್ನೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪತ್ತೆಯಾಗುತ್ತಿರುವ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಎರಡನೆ ಸ್ಥಾನವನ್ನು ಛತ್ತೀಸ​ಗಡ ಪಡೆದುಕೊಂಡಿದೆ. ಅಲ್ಲದೇ ದೇಶದ ವಿವಿಧ ರಾಜ್ಯಗಳ ವಿವಿಧ ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಕರ್ನಾಟಕದಲ್ಲೂ ನೈಟ್ ಕರ್ಫ್ಯೂ ರಾಜ್ಯದ ಕೆಲ ನಗರಗಳಲ್ಲಿ ಇದೇ ಏಪ್ರಿಲ್ 10ರ ರಾತ್ರಿಯಿಂದ ಮುಂದಿನ 10 ದಿನಗಳ ಅವಧಿಗೆ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 10ರಿಂದ 20ರವರೆಗೆ ನೈಟ್​ ಕೊರೊನಾ ಕರ್ಫ್ಯೂ ಜಾರಿಯಲ್ಲಿರಲಿದೆ.

ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ, ಬೀದರ್, ತುಮಕೂರು, ಉಡುಪಿ ನಗರ, ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

ಈ ಜಿಲ್ಲೆಗಳ ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ. ನಾವು ಈಗ ಲಾಕ್​ಡೌನ್ ಮಾಡ್ತಿಲ್ಲ, ಆದರೆ ಪರಿಸ್ಥಿತಿ ಕೈಮೀರಿದರೆ ಅದನ್ನೂ ಮಾಡಬೇಕಾಗುತ್ತದೆ. ಈಗ ಪ್ರಾಯೋಗಿಕವಾಗಿ 10 ಕಡೆ ಕೊರೊನಾ ಕರ್ಫ್ಯೂ ಜಾರಿ ಮಾಡ್ತಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ನಿರ್ಬಂಧ ಹೆಚ್ಚಿಸಬೇಕಾಗುತ್ತದೆ. ಜನರು ಸಹಕರಿಸಿದರೆ ಬಹುಶಃ ಅಂಥ ಪರಿಸ್ಥಿತಿ ಬರುವುದಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಕೊಟ್ಟ ಸಲಹೆಯನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ಜಾರಿ ಮಾಡಿರುವ ನಿರ್ಬಂಧಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಕದವರಿಗೆ ಈಗ ₹ 250 ದಂಡ ವಿಧಿಸುತ್ತಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ರೂಪಿಸಿರುವ ಕ್ರಮಗಳನ್ನು ಬಿಗಿಯಾಗಿ ಜಾರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಅಗತ್ಯ ಸೇವೆಗಳು ಇರುತ್ತವೆ. ಬಸ್​ಗಳ ಓಡಾಟಕ್ಕೂ ನಿರ್ಬಂಧ ಇರುವುದಿಲ್ಲ. ಆದರೆ ಜನರು ಓಡಾಡಬಾರದು. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದರ ಬಗ್ಗೆ ಎಚ್ಚರವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಸಭೆ-ಸಮಾರಂಭ ಮಾಡಬಾರದು ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಪ್ರತಿದಿನ 1 ಲಕ್ಷ ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತೇವೆ‌; ಆರೋಗ್ಯ ಸಚಿವ ಡಾ ಸುಧಾಕರ್

ಕೊವಿಡ್ ಲಸಿಕೆ ಕೊರತೆ: ಮಹಾರಾಷ್ಟ್ರಕ್ಕೆ 17 ಲಕ್ಷ ಡೋಸ್ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧಾರ

(India records highest ever spike in 24 hours with 1 lakh 31 thousand covid 19 cases)

Published On - 11:26 am, Fri, 9 April 21

ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ