AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಮುಷ್ಕರ.. ಕರ್ನಾಟಕ ಮೂಲದ ಭಕ್ತರು ನೆರೆಯ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ, ಸರ್ಕಾರ ಮೌನವಾಗಿದೆ!

ರಾಜ್ಯಕ್ಕೆ ಬರುವುದಕ್ಕೆ ಬಸ್ ಸೌಲಭ್ಯವಿಲ್ಲ ಹೀಗಾಗಿ ಶ್ರೀಶೈಲಂಗೆ ತೆರಳಿದ್ದ ಭಕ್ತರು ವಾಪಾಸ್ ತಮ್ಮ ಊರುಗಳಿಗೆ ಬರಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾರಿಗೆ ಮುಷ್ಕರ.. ಕರ್ನಾಟಕ ಮೂಲದ ಭಕ್ತರು ನೆರೆಯ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ, ಸರ್ಕಾರ ಮೌನವಾಗಿದೆ!
ಬಸ್​ಗಾಗಿ ಕಾಯುತ್ತಿರುವ ಭಕ್ತರು
ಆಯೇಷಾ ಬಾನು
|

Updated on: Apr 09, 2021 | 12:17 PM

Share

ಶ್ರೀಶೈಲಂ: ಆಂಧ್ರ ಪ್ರದೇಶದ ಪ್ರಮುಖ ಪುಣ್ಯಕ್ಷೇತ್ರವಾದ ಶ್ರೀಶೈಲಂನಲ್ಲಿ ಕಳೆದ ಮೂರು ದಿನದಿಂದ ಕರ್ನಾಟಕದ ಭಕ್ತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಬಸ್ ಸಂಚಾರ ನಿಂತು ಹೋಗಿದೆ. ರಾಜ್ಯಕ್ಕೆ ಬರುವುದಕ್ಕೆ ಬಸ್ ಸೌಲಭ್ಯವಿಲ್ಲ. ಹೀಗಾಗಿ ಶ್ರೀಶೈಲಂಗೆ ತೆರಳಿದ್ದ ಭಕ್ತರು ವಾಪಾಸ್ ತಮ್ಮ ಊರುಗಳಿಗೆ ಬರಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ‌ ಬಸ್ ವ್ಯವಸ್ಥೆ ಇಲ್ಲದ್ದರಿಂದ‌‌ ಊರಿಗೆ ಹಿಂತಿರುಗಲಾಗದೇ ಮಹಿಳೆಯರು, ಮಕ್ಕಳು‌ ಸೇರಿ ಕರ್ನಾಟಕದ ಭಕ್ತರಿಗೆ ಭಾರಿ ತೊಂದರೆಯಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ಬಸ್ ಸೌಲಭ್ಯ ಕಲ್ಪಿಸಿ ಎಂದು ಸರಕಾರಕ್ಕೆ ಭಕ್ತರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲು ನಡುಗೆಯಲ್ಲಿ ಶ್ರೀಶೈಲಂಗೆ ಬಂದಿದ್ದ ಭಕ್ತರಿಗೆ ಹಿಂತಿರುಗಿ ಹೋಗಲು ಬಸ್​ಗಳ ವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ಸಾರಿಗೆ ಮುಷ್ಕರ ಬಿಸಿ ಹೆಚ್ಚಿದೆ. ಹೀಗಾಗಿ ಯಾವ ಬಸ್​ಗಳು ಕೂಡ ರಸ್ತೆಗೆ ಇಳಿದಿಲ್ಲ. ಅಲ್ಲದೆ ಆಂಧ್ರ ಪ್ರದೇಶದ ಸಾರಿಗೆ ನಿಗಮದ ಬಸ್​ಗಳನ್ನು ರಾಜ್ಯದಲ್ಲಿ ನಡೆಯುತ್ತಿರೋ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗಾಗಿ ಸರ್ಕಾರ ಬಳಸಿಕೊಂಡಿದೆ. ಹೀಗಾಗಿ ಆ ಭಾಗದ ಬಸ್​ಗಳ ಸೇವೆಯೂ ಭಕ್ತರಿಗೆ ಲಭ್ಯವಿಲ್ಲ. ಇದರಿಂದಾಗಿ ಬಸ್​ ಸಿಗದೆ ಕಳೆದ 2-3 ದಿನಗಳಿಂದ ಭಕ್ತರು ಕಾಯುತ್ತಿದ್ದಾರೆ.

Srishailam

ಸದ್ಯಕ್ಕೆ ಸಿಕ್ಕ ಬಸ್​ಗಳಿಗೆ ನೂಕು ನುಗ್ಗಲು

ಶ್ರೀಶೈಲಂನಲ್ಲಿ ಕಷ್ಟು ಅನುಭವಿಸುತ್ತಿರುವ ಕರ್ನಾಟಕ ಭಕ್ತರ ಪರಿಸ್ಥಿತಿ ನೋಡಲಾಗುತ್ತಿಲ್ಲ. ಬಸ್ ನಿಲ್ದಾಣಗಳಲ್ಲೇ ಭಕ್ತರು ತಂಗುತ್ತಿದ್ದಾರೆ. ಅವರ ಊಟ ಹಾಗೂ ದಿನ ನಿತ್ಯದ ಕರ್ಮಗಳಿಗೆ ತೊಂದರೆ ಉಂಟಾಗುತ್ತಿದೆ. ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಆದಷ್ಟು ಬೇಗ ಕರ್ನಾಟಕ ಸರ್ಕಾರ ಈ ಬಗ್ಗೆ ಗಮನ ಹರಿಸಿ ಬಸ್ ಸೇವೆ ಒದಗಿಸಬೇಕು. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ತಮ್ಮ ಮನೆ ಕುಟುಂಬದ ದರ್ಶನ ಮಾಡಿಸಬೇಕು ಎಂದು ಭಕ್ತರು ಮೊರೆ ಇಟ್ಟಿದ್ದಾರೆ.

Srishailam

ಬಸ್ ಸೇವೆ ಇಲ್ಲದೆ ನಿಲ್ದಾಣಗಳಲ್ಲೇ ತಂಗಿರುವ ಭಕ್ತರು

Srishailam

ಬಸ್ ಸೇವೆ ಇಲ್ಲದೆ ನಿಲ್ದಾಣಗಳಲ್ಲೇ ತಂಗಿರುವ ಭಕ್ತರು

Srishailam

ಬಸ್ ಸೇವೆ ಇಲ್ಲದೆ ನಿಲ್ದಾಣಗಳಲ್ಲೇ ತಗ್ಗಿರುವ ಭಕ್ತರು

ಇದನ್ನೂ ಓದಿ: ಡಿ.ಜೆ. ಹಳ್ಳಿ ಮಸೀದಿ ಆಡಳಿತ ಮಂಡಳಿ ವಿಚಾರವಾಗಿ ಮಚ್ಚು ಬೀಸಿದ ದುಷ್ಕರ್ಮಿಗಳು, ಕ್ಯಾಮೆರಾ ಮುಂದೆಯೇ ಕೊಲೆ

(Srishailam Devotees Suffering From No Bus Service in Andra Pradesh)

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ