AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಪ್ರೋತ್ಸಾಹ ಧನ ಘೋಷಣೆ

ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ 200 ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲೆ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಹೆಚ್​ ಮುಲ್ಲಾ ತಿಳಿಸಿದ್ದಾರೆ.

ಇಂದು ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಪ್ರೋತ್ಸಾಹ ಧನ ಘೋಷಣೆ
ಕರ್ತವ್ಯಕ್ಕೆ ಹಾಜರಾದವರಿಗೆ ಹೂಗುಚ್ಛ ನೀಡಿದ ಅಧಿಕಾರಿಗಳು
shruti hegde
| Edited By: |

Updated on: Apr 09, 2021 | 12:06 PM

Share

ಕೊಪ್ಪಳ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಮಂದಿಟ್ಟು ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಸಂಚರಿಸಲು ಬಸ್​ಗಳಿಲ್ಲದೇ ಮೂರು ದಿನಗಳಿಂದ ಪ್ರಯಾಣಿಕರೆಲ್ಲ ಪರದಾಡುವ ಪರಿಸ್ಥಿತಿ ಎದುರಾಗಿದೆ. ಮುಷ್ಕರ ಹಿನ್ನೆಲೆಯಲ್ಲಿ ಅದೆಷ್ಟೋ ಮಂದಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದಾರೆ. ಇನ್ನಿತರ ವಾಹನದಲ್ಲಿ ಪ್ರಯಾಣಿಸೋಣ ಎಂದರೆ ಡಬಲ್​ ಚಾರ್ಜ್​ ಕೇಳುವ ಆಟೋ ಚಾಲಕರು. ಹೀಗಿದ್ದಾಗ ಪ್ರಯಾಣಿಕರೆಲ್ಲ ದಿಕ್ಕು ತೋಚದೇ ಬಸ್​ನಿಲ್ದಾಣದಲ್ಲಿಯೇ ಕುಳಿತಿದ್ದಾರೆ. ಇಂದು ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ನಿಯಂತ್ರಣಾಧಿಕಾರಿ ಎ.ಹೆಚ್.ಮುಲ್ಲಾ ಹೇಳಿದ್ದಾರೆ.

ಇಂದು ಬೆಳಿಗ್ಗೆಯಿಂದ ಇಲ್ಲಿಯವರೆಗೆ ಕೊಪ್ಪಳ ಸಾರಿಗೆ ವಿಭಾಗದಿಂದ‌ 6 ಬಸ್​ಗಳು ಸಂಚಾರ ಆರಂಭಿಸಿವೆ. ಕೊಪ್ಪಳದಿಂದ-ಕುಷ್ಟಗಿ ಮತ್ತು ಹೈದರಾಬಾದ್ ಬಸ್​ ಸಂಚಾರಗೊಂಡಿದೆ. ನೌಕರರೆಲ್ಲ ಕರ್ತವ್ಯಕ್ಕೆ ಹಾಜರಾಗುವ ಉದ್ದೇಶದಿಂದ, ಇಂದು ಕರ್ತವ್ಯಕ್ಕೆ ಹಾಜರಾಗುವ ಚಾಲಕ ಮತ್ತು ನಿರ್ವಾಹಕರಿಗೆ 200 ರೂಪಾಯಿ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ನಿಯಂತ್ರಣಾಧಿಕಾರಿ ತೀರ್ಮಾನ ಕೈಗೊಂಡಿದ್ದಾರೆ.

ಕೊಪ್ಪಳದಿಂದ ವಿಜಯಪುರಕ್ಕೆ ತೆರಳಿದ ಕೆಎಸ್​ಆರ್​ಟಿಸಿ ಬಸ್ ಸಾರಿಗೆ ಮುಷ್ಕರದ ನಡುವೆ ಸಾರಿಗೆ ನೌಕರ ಕೆಲಸಕ್ಕೆ ಹಾಜರಾಗಿದ್ದಾರೆ. ಕೊಪ್ಪಳದಿಂದ ವಿಜಯಪುರಕ್ಕೆ ಒಂದೇ ಒಂದು ಬಸ್​ ಸಂಚರಿಸಿದೆ. ಕರ್ತವ್ಯಕ್ಕೆ ಹಾಜರಾದ್ದರಿಂದ ನಿಯಂತ್ರಣ ಅಧಿಕಾರಿ ಎ.ಹೆಚ್​ ಮುಲ್ಲಾ ಹೂಗುಚ್ಛ ನೀಡಿ ಗೌರವಿಸಿದ್ದಾರೆ.

ಜಿಲ್ಲೆಯಲ್ಲಿ ಮೂರನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಬಸ್​ನಿಲ್ದಾಣಗಳೆಲ್ಲಾ ಖಾಲಿ ಖಾಲಿಯಾಗಿದೆ. ಸಾರಿಗೆ ಬಸ್​ ಸಂಚಾರ ಇಂದೂ ಇಲ್ಲದ ಕಾರಣ ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇನ್ನು ಕೆಲವರು ಬಸ್​ ನಿಲ್ದಾಣದಲ್ಲಿಯೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ವೃದ್ಧೆಯರು ಬಸ್​ ನಿಲ್ದಾಣದಲ್ಲಿ ದಿಕ್ಕು ತೋಚದೆ ಕುಳಿತಿದ್ದಾರೆ. ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮಕ್ಕೆ ವೃದ್ಧೆಯರು ಹೋಗಬೇಕಾಗಿತ್ತು. ವೃದ್ಧೆಯರಾದ ಫಕೀರಮ್ಮ, ರೇಣುಕಮ್ಮ ಬಸ್ಸಿಗಾಗಿ ಕಾದು ಕುಳಿತಿದ್ದಾರೆ. ಆದರೆ ಯಾವುದೇ ಬಸ್​ಗಳು ಸಂಚರಿಸುತ್ತಿಲ್ಲವಾದ್ದರಿಂದ ಬಸ್​ನಿಲ್ದಾಣದಲ್ಲಿ ದಿಕ್ಕು ತೋಚದೇ ಕುಳಿತಿದ್ದಾರೆ.

ಇದನ್ನೂ ಓದಿ: Karnataka Bus Strike Live: ಸಾರಿಗೆ ನೌಕರರ ಮುಷ್ಕರಕ್ಕೆ ಮೂರನೇ ದಿನ.. ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಸಿಬ್ಬಂದಿ

Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ

‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು