ಡಿ.ಜೆ. ಹಳ್ಳಿ ಮಸೀದಿ ಆಡಳಿತ ಮಂಡಳಿ ವಿಚಾರವಾಗಿ ಮಚ್ಚು ಬೀಸಿದ ದುಷ್ಕರ್ಮಿಗಳು, ಕ್ಯಾಮೆರಾ ಮುಂದೆಯೇ ಕೊಲೆ
ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಓಣಿಯಲ್ಲಿ ನಡೆದುಹೋಗುತ್ತಿದ್ದ ಸುಹೈಲ್ ಮೇಲೆ ಏಕಾಏಕಿ ದಾಳಿ ಮಾಡಿ ಮನಸೋಯಿಚ್ಛೆ ಹಲ್ಲೆ ಎಸಗಿದ್ದಾರೆ. ನಂತರ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆಯೇ ದುಷ್ಕರ್ಮಿಗಳು ಮಚ್ಚು ಬೀಸುವ ಮೂಲಕ ಅಟ್ಟಹಾಸ ಪ್ರದರ್ಶಿಸಿದ್ದಾರೆ. ನಗರದ ಡಿ.ಜೆ.ಹಳ್ಳಿಯ ಮೋದಿ ರಸ್ತೆ ಬಳಿಯ ಗಲ್ಲಿಯೊಂದರಲ್ಲಿ ರೌಡಿಶೀಟರ್ ಸುಹೈಲ್ ಎಂಬಾತನನ್ನು ಕೊಲೆಗೈಯ್ಯಲಾಗಿದ್ದು, ಮಸೀದಿಯ ಆಡಳಿತ ಮಂಡಳಿ ವಿಚಾರವಾಗಿ ಶುರುವಾದ ವಿವಾದ ಕೊಲೆಯಲ್ಲಿ ಅಂತ್ಯವಾಗಿದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಓಣಿಯಲ್ಲಿ ನಡೆದುಹೋಗುತ್ತಿದ್ದ ಸುಹೈಲ್ ಮೇಲೆ ಏಕಾಏಕಿ ದಾಳಿ ಮಾಡಿ ಮನಸೋಯಿಚ್ಛೆ ಹಲ್ಲೆ ಎಸಗಿದ್ದಾರೆ. ನಂತರ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ತೀವ್ರ ಹಲ್ಲೆಗೊಳಗಾಗಿದ್ದ ಯುವಕ ಸಾವು ಚಿಕ್ಕಮಗಳೂರು: ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಬುಧವಾರ ರಾತ್ರಿ ತೀವ್ರ ಹಲ್ಲೆಗೊಳಗಾಗಿದ್ದ ಮನು (21) ಎಂಬ ವ್ಯಕ್ತಿ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅನ್ಯಕೋಮಿನ ಯುವಕರು ಮನು ಮೇಲೆ ಮಾರಕಾಸ್ತ್ರಗಳಿಂದ ದಾಳಿ ಎಸಗಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಬಾಡಿ ಬಿಲ್ಡರ್ ಆಗುವ ಆಸೆ ಹೊತ್ತಿದ್ದ ಯುವಕ ಸಾವಿಗೀಡಾಗಿದ್ದಾರೆ. ಯುವಕನ ಮೇಲೆ ಹಲ್ಲೆ ಮಾಡಿ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಶವಾಗಾರದ ಮುಂದೆ ಪ್ರತಿಭಟಿಸಿದ್ದಾರೆ.
ಇದನ್ನೂ ಓದಿ: ತುಮಕೂರಿನ ಪಾಗಲ್ ಪ್ರೇಮಿಯಿಂದ ಅಪ್ರಾಪ್ತೆ ಕೊಲೆ
ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್ ಪಾಲು