ತುಮಕೂರಿನ ಪಾಗಲ್ ಪ್ರೇಮಿಯಿಂದ ಅಪ್ರಾಪ್ತೆ ಕೊಲೆ

ಈರಣ್ಣ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಆದರೆ ಆಕೆ ನಿರಾಕರಿಸಿದ್ದಳು. ತಾಳಿ ಕಟ್ಟಲೂ ಪ್ರಯತ್ನಿಸಿದ್ದ ಈರಣ್ಣಗೆ ಅಪ್ರಾಪ್ತೆಯಿಂದ ಪ್ರತಿರೋಧ ಎದುರಾಗಿತ್ತು. ಇದರಿಂದ ಆಕೆಯನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ.

ತುಮಕೂರಿನ ಪಾಗಲ್ ಪ್ರೇಮಿಯಿಂದ ಅಪ್ರಾಪ್ತೆ ಕೊಲೆ
ಈರಣ್ಣ
Follow us
sandhya thejappa
|

Updated on: Apr 05, 2021 | 1:55 PM

ತುಮಕೂರು: ಪ್ರೀತಿಸಲು ಒಪ್ಪದಿದ್ದಕ್ಕೆ ಅಪ್ರಾಪ್ತೆಯನ್ನು ಪಾಗಲ್ ಪ್ರೇಮಿ ಹತ್ಯೆಗೈದಿದ್ದಾನೆ. ಈರಣ್ಣ ಎಂಬಾತ ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗುಳ್ಳ ಗ್ರಾಮದ ಬಳಿ ಮಾರಕಾಸ್ತ್ರದಿಂದ ಇರಿದು ಅಪ್ರಾಪ್ತೆಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿರುವ ಈರಣ್ಣ ಇದೀಗ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

ಈರಣ್ಣ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಆದರೆ ಆಕೆ ನಿರಾಕರಿಸಿದ್ದಳು. ತಾಳಿ ಕಟ್ಟಲೂ ಪ್ರಯತ್ನಿಸಿದ್ದ ಈರಣ್ಣಗೆ ಅಪ್ರಾಪ್ತೆಯಿಂದ ಪ್ರತಿರೋಧ ಎದುರಾಗಿತ್ತು. ಇದರಿಂದ ಆಕೆಯನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ. ಈರಣ್ಣ ಮತ್ತು ಅಪ್ರಾಪ್ತೆ ದೊಡ್ಡಗುಳ್ಳ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ

ನಾಲ್ಕನೆಯದ್ದೂ ಹೆಣ್ಣು ಮಗು ಆಯಿತೆಂದು ಸ್ನೇಹಿತರಿಗೆ ಮಾರಾಟ ಮಾಡಲು ಮುಂದಾದ ತಂದೆ; ಸುಳ್ಳು ಆರೋಪ ಎಂದು ಸ್ಪಷ್ಟನೆ

ಕಲಬುರಗಿಯಲ್ಲಿ ಅಗ್ನಿ ಅವಘಡ: ಅನಿಲ ಸೋರಿಕೆಯಿಂದ ಸುಟ್ಟು ಕರಕಲಾದ ಮನೆ

(Minor was murdered by lover in tumkur)