35 ವರ್ಷ ದೇಶ ಸೇವೆ ಸಲ್ಲಿಸಿ ಊರಿಗೆ ವಾಪಸ್ ಆದ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ
ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 7 ರ ಬುಳ್ಳಹಳ್ಳಿ ಗೇಟ್ದಗೆ ಯೋಧ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ತಹಶೀಲ್ದಾರ್ ರಾಜ್ಗೋಪಾಲ್ ಅವರನ್ನು ಸನ್ಮಾನಿಸಿದರು. ನಂತರ ತೆರೆದ ಜೀಪ್ನಲ್ಲಿ 6 ಕೀಮಿ ಹಾರೋಹಳ್ಳಿ ಗ್ರಾಮದವರೆಗೂ ಯೋಧ ರಾಜ್ಗೋಪಾಲ್ ಅವರನ್ನು ಮೆರವಣಿಗೆ ಮಾಡಲಾಯಿತು.
ದೇವನಹಳ್ಳಿ: ದೇಶ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಾಗಿ ವಾಪಸ್ ಆಗಿರುವ ಯೋಧನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿರುವ ಯೋಧನಿಗೆ ಗ್ರಾಮಸ್ಥರು ಪುಷ್ಪಮಾಲೆ ಹಾಕಿ ಖುಷಿಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಗ್ರಾಮದ ನಿವಾಸಿ ರಾಜ್ಗೋಪಾಲ್ 35 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿ ಊರಿಗೆ ಮರಳಿ ಬಂದಿದ್ದಾರೆ.
ರಾಜ್ಗೋಪಾಲ್, 1986 ರಲ್ಲಿ ದೇಶ ಸೇವೆಗೆ ಸೇರಿಕೊಂಡಿದ್ದರು. ಸತತ 35 ವರ್ಷಗಳಿಂದ ಜಮ್ಮು ಕಾಶ್ಮಿರ, ಪಂಜಾಬ್, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ದೇಶವನ್ನು ಕಾದ ಯೋಧ ರಾಜ್ಗೋಪಾಲ್ಇದೀಗ ಸ್ವಯಂ ನಿವೃತ್ತಿ ಪಡೆದುಕೊಂಡು ರಾಜ್ಯಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಸೇರಿದಂತೆ ದೇವನಹಳ್ಳಿ ತಾಲೂಕು ಆಡಳಿತ ಮಂಡಳಿ ಯೋಧನನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ದೇಶ ಸೇವೆಗೆ ಸೈನಿಕರಾಗಿ ಸೇರುವ ಕೆಲ ಮಂದಿ 20 ರಿಂದ 25 ವರ್ಷಗಳಿಗೆ ನಿವೃತ್ತಿಯಾಗಿ ಕುಟುಂಬವನ್ನ ಕೆಲಕಾಲ ನೋಡಿಕೊಳ್ಳಲೆಂದೆ ವಾಪಸ್ ಬರುತ್ತಾರೆ. ಆದರೆ ಹಾರೋಹಳ್ಳಿ ಯೋಧ ರಾಜ್ಗೋಪಾಲ್ 35 ವರ್ಷಗಳ ಕಾಲ ದೇಶಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನ ಸಲ್ಲಿಸಿ ವಾಪಸ್ ಆಗಿದ್ದು, ಟೀಮ್ ಯೋಧ ನಮನ ತಂಡ ಹಾಗೂ ಗ್ರಾಮಸ್ಥರು ಅದ್ದೂರಿಯಾಗಿಯೇ ಯೋಧನನ್ನ ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ 7 ರ ಬುಳ್ಳಹಳ್ಳಿ ಗೇಟ್ಗೆ ಯೋಧ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ತಹಶೀಲ್ದಾರ್ ರಾಜ್ಗೋಪಾಲ್ ಅವರನ್ನು ಸನ್ಮಾನಿಸಿದರು. ನಂತರ ತೆರೆದ ಜೀಪ್ನಲ್ಲಿ 6 ಕೀಮಿ ಹಾರೋಹಳ್ಳಿ ಗ್ರಾಮದವರೆಗೂ ಯೋಧ ರಾಜ್ಗೋಪಾಲ್ಅವರನ್ನು ಮೆರವಣಿಗೆ ಮಾಡಲಾಯಿತು. ಇನ್ನು ಗ್ರಾಮಕ್ಕೆ ಯೋಧ ಬರುತ್ತಿದ್ದಂತೆ ಗ್ರಾಮದ ಮಹಿಳೆಯರು ಯೋಧನಿಗೆ ಆರತಿ ಬೆಳಗಿ ಪುಷ್ಪಮಾಲೆಯನ್ನ ಹಾಕಿ ಸ್ವಾಗತಿಸಿದರು. ಈ ವೇಳೆ ಜನರು ಯೋಧರ ಮೇಲೆ ಇಟ್ಟಿರುವ ಗೌರವ ಕಂಡು ಬಾವುಕರಾದ ಯೋಧ ರಾಜ್ಗೋಪಾಲ್ ನಾಡಿನ ಮಣ್ಣಿಗೆ ಮುತ್ತಿಟ್ಟುಅಲಗೆ ಏಟಿಗೆ ಸ್ಟೆಪ್ ಹಾಕಿ ಖುಷಿಪಟ್ಟರು.
ಒಟ್ಟಾರೆ 35 ವರ್ಷಗಳ ಕಾಲ ದೇಶವನ್ನ ರಕ್ಷಣೆ ಮಾಡಿ ತಾಯ್ನಾಡಿಗೆ ವಾಪಸ್ ಆದ ಯೋಧನಿಗೆ ಗ್ರಾಮಸ್ಥರು ಸೇರಿದಂತೆ, ವಿವಿಧ ಸಂಘ- ಸಂಸ್ಥೆಗಳು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಯೋಧರಾಗಿ ದೇಶ ಸೇವೆಗೆ ಸೇರುವ ಯುವಕರಿಗೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
(ವರದಿ: ನವೀನ್ -9980914152)
ಇದನ್ನೂ ಓದಿ:
20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ
( Villagers threw a lavish welcome to the soldier who served for the country for 35 years in Devanahalli Bangaluru)