ಲಾಡ್ಜ್ನಲ್ಲಿ ವಿಷಸೇವಿಸಿ ತಾಯಿ ಆತ್ಮಹತ್ಯೆ, ಮಗನ ಸ್ಥಿತಿ ಗಂಭೀರ
‘ಸೊಸೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ’ ಎಂದು ಪ್ರಭಾವತಿ ಮರಣ ಪತ್ರ ಬರೆದಿಟ್ಟಿದ್ದಾರೆ. ಅಸ್ವಸ್ಥರಾಗಿರುವ ಸುಭಾಷ್ ಚಂಗಪ್ಪಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಡಿಕೇರಿ: ತಾಲ್ಲೂಕಿನ ಗೋಣಿಕೊಪ್ಪಲು ಪಟ್ಟಣದ ಲಾಡ್ಜ್ನಲ್ಲಿ ಸಿ.ಎಸ್.ಪ್ರಭಾವತಿ (70) ಎಂಬಾಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ತೋಲಂಡ ಸುಭಾಷ್ ಚಂಗಪ್ಪ (50) ಪರಿಸ್ಥಿತಿ ಗಂಭೀರವಾಗಿದೆ. ‘ಸೊಸೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ’ ಎಂದು ಪ್ರಭಾವತಿ ಮರಣ ಪತ್ರ ಬರೆದಿಟ್ಟಿದ್ದಾರೆ. ಅಸ್ವಸ್ಥರಾಗಿರುವ ಸುಭಾಷ್ ಚಂಗಪ್ಪಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಹೋಟೆಲ್ನಲ್ಲಿ ಸಿಲಿಂಡರ್ ಸ್ಫೋಟದಿಂದ ಇಬ್ಬರ ಸಾವು ವಿಜಯಪುರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಟೀ ಹೋಟೆಲ್ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಕೃಷ್ಣಪ್ಪ (28) ಮತ್ತು ಭೂಮಿಕಾ (11) ಮೃತಪಟ್ಟಿದ್ದಾರೆ. ಖಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಂಡಾ ಕಾಯ್ದೆಯಡಿ ರೌಡೀಶೀಟರ್ ಬಂಧನ ಬೆಂಗಳೂರು: ಸಿಸಿಬಿ ಪೊಲೀಸರು ಗೂಂಡಾಕಾಯ್ದೆಯಡಿ ರೌಡಿಶೀಟರ್ ಸ್ಯಾಮ್ಯುಯೆಲ್ನನ್ನು (24) ಬಂಧಿಸಿದ್ದಾರೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸ್ಯಾಮ್ಯುಯೆಲ್ ರೌಡಿಶೀಟರ್ ಆಗಿದ್ದ. 2008ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಆರೋಪಿ ವಿರುದ್ಧ ಕೊಲೆಯತ್ನ, ಸುಲಿಗೆ ಸೇರಿದಂತೆ 5 ಪ್ರಕರಣಗಳಿದ್ದವು. ನಿರೀಕ್ಷಣಾ ಜಾಮೀನು ಪಡೆದು ಪುನಃ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಸದ್ಯ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಡಿಲು ಬಡಿದು ಎರಡು ಎತ್ತು, ಒಂದು ಹಸು ದುರ್ಮರಣ ಧಾರವಾಡ: ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು, ಒಂದು ಹಸು ಸತ್ತುಹೋಗಿವೆ. ರೈತ ನಿಂಗಪ್ಪ ಕುಲಕರ್ಣಿಗೆ ಸೇರಿದ 3 ಜಾನುವಾರುಗಳು ಸಾವನ್ನಪ್ಪಿವೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಗಾಳಿಗೆ ಮರ ಉರುಳಿ ಮುರಿದು ಬಿದ್ದ 12 ವಿದ್ಯುತ್ ಕಂಬ ಬಾಗಲಕೋಟೆ: ಜಿಲ್ಲೆಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಭಾರಿ ಗಾಳಿಗೆ ಮರ ಉರುಳಿದ ಕಾರಣ 12 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಇದನ್ನೂ ಓದಿ: ಡಿ.ಜೆ. ಹಳ್ಳಿ ಮಸೀದಿ ಆಡಳಿತ ಮಂಡಳಿ ವಿಚಾರವಾಗಿ ಮಚ್ಚು ಬೀಸಿದ ದುಷ್ಕರ್ಮಿಗಳು, ಕ್ಯಾಮೆರಾ ಮುಂದೆಯೇ ಕೊಲೆ