ನರೇಗಾ ಯೋಜನೆಯಡಿ ದಿನಗೂಲಿ ರೂ 289ಕ್ಕೆ ಹೆಚ್ಚಳ: ಸಚಿವ ಕೆ.ಎಸ್.ಈಶ್ವರಪ್ಪ

Arun Belly

Arun Belly |

Updated on: Apr 09, 2021 | 9:37 PM

ಮೈಸೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಗೂಲಿಯನ್ನು ₹ 289ಕ್ಕೆ ಪರಿಷ್ಕರಿಸಲಾಗಿದೆಯೆಂದು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದ್ದಾರೆ. ಮೈಸೂರಿನಲ್ಲಿ ಪರಿಶೀಲನಾ ಸಭೆಯೊಂದರ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸಚಿವರು, ನರೆಗಾ ಯೋಜನೆಯಡಿ ದಿನಗೂಲಿಯನ್ನು ಈ ಹಿಂದೆ ₹ 245ರಿಂದ ₹ 275ಕ್ಕೆ ಹೆಚ್ಚಿಸಲಾಗಿದೆ. ಇದೀಗ ಈ ಮೊತ್ತವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ಏಪ್ರಿಲ್ 1, 2021ರಿಂದ ₹ 289 ನೀಡಲಾಗುವುದು ಎಂದು ಹೇಳಿದರು. ಕಾರ್ಮಿಕರ ಉಪಕರಣಗಳಿಗೆ […]

ನರೇಗಾ ಯೋಜನೆಯಡಿ ದಿನಗೂಲಿ ರೂ 289ಕ್ಕೆ ಹೆಚ್ಚಳ: ಸಚಿವ ಕೆ.ಎಸ್.ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಮೈಸೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಗೂಲಿಯನ್ನು ₹ 289ಕ್ಕೆ ಪರಿಷ್ಕರಿಸಲಾಗಿದೆಯೆಂದು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದ್ದಾರೆ. ಮೈಸೂರಿನಲ್ಲಿ ಪರಿಶೀಲನಾ ಸಭೆಯೊಂದರ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸಚಿವರು, ನರೆಗಾ ಯೋಜನೆಯಡಿ ದಿನಗೂಲಿಯನ್ನು ಈ ಹಿಂದೆ ₹ 245ರಿಂದ ₹ 275ಕ್ಕೆ ಹೆಚ್ಚಿಸಲಾಗಿದೆ. ಇದೀಗ ಈ ಮೊತ್ತವನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ಏಪ್ರಿಲ್ 1, 2021ರಿಂದ ₹ 289 ನೀಡಲಾಗುವುದು ಎಂದು ಹೇಳಿದರು. ಕಾರ್ಮಿಕರ ಉಪಕರಣಗಳಿಗೆ ₹ 10ರ ಬಾಡಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕವು 2020-21 ಸಾಲಿಗೆ ನರೆಗಾ ಯೋಜನೆಯ ಗುರಿಯಾಗಿದ್ದ 13 ಕೋಟಿ ಮಾನವ-ದಿನಗಳನ್ನು ಮೀರಿದ ಸಾಧನೆ ಮಾಡಿದೆ. ಕಳೆದ ಸಾಲಿನಲ್ಲಿ 15 ಕೋಟಿ (14.84 ಮಾನವ-ದಿನಗಳು) ಮಾನವ-ದಿನಗಳನ್ನು ಸಾಧಿಸಿದೆ ಎಂದು ಈಶ್ವರಪ್ಪ ಹೇಳಿದರು. ಕೊವಿಡ್-19 ಪಿಡುಗುನಿಂದಾಗಿ ನಗರಪ್ರದೇಶಗಳಿಂದ ಜನರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದ್ದರಿಂದ ಬಹಳಷ್ಟು ಜನಕ್ಕೆ ಈ ಯೋಜನೆಯಡಿಯಲ್ಲಿ ಕೆಲಸ ಸಿಗುವಂತಾಯಿತೆಂದು ಸಚಿವರು ಹೇಳಿದರು.

ಈ ಸಾಲಿನಲ್ಲಿ ಒಟ್ಟು ₹ 3997.43 ಕೋಟಿಗಳನ್ನು ನೇರವಾಗಿ ಖಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದ ಸಚಿವರು, ಮಾನವ-ದಿನಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚುವರಿ 800 ಕೋಟಿ ರೂಪಾಯಿ ಅನುದಾನದ ನಿರೀಕ್ಷೆಯಿದೆ ಅಂತ ಹೇಳಿದರು.

ಕಳೆದ ಸಾಲಿನಲ್ಲಿ 30.19 ಲಕ್ಷ ಕುಟುಂಬಗಳ 56.83 ಲಕ್ಷ ಜನರಿಗೆ ಕೆಲಸ ಒದಗಿಸಲಾಗಿದ್ದು ಹಿಂದಿನ 5 ವರ್ಷಗಳಲ್ಲಿ ಅತ್ಯಧಿಕ ಜನರಿಗೆ ಕೆಲಸ ಒದಗಿಸಿರುವ ದಾಖಲೆ ಇದಾಗಿದೆ ಎಂದು ಈಶ್ವರಪ್ಪ ಅಂಕಿ-ಅಂಶಗಳ ಮೂಲಕ ತಿಳಿಸಿದರು. ಈ ಕುಟುಂಬಗಳ ಪೈಕಿ 2.4 ಲಕ್ಷದಷ್ಟು ಕುಟುಂಬಗಳು ವರ್ಷದಲ್ಲಿ 100 ದಿನಗಳ ಕೆಲಸವನ್ನು ಪಡೆದುಕೊಂಡರು ಎಂದು ಅವರು ಹೇಳಿದರು.

ಮಾರ್ಚ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಮಳೆ ನೀರನ್ನು ಹಿಡಿಯಿರಿ’ (ಕ್ಯಾಚ್​ ದಿ ರೇನ್) ಅಭಿಯಾನ ಜಾರಿಗೊಳಿದ್ದನ್ನು ಉಲ್ಲೇಖಿಸಿದ ಈಶ್ವರಪ್ಪ ಅವರು ಕರ್ನಾಟಕದಲ್ಲಿ ಈ ಅಭಿಯಾನವನ್ನು ರಾಜ್ಯಾದಂತ ಶುಕ್ರವಾರದಿಂದ ಜಾರಿಗೊಳಿಸುತ್ತಿರುವುದರಿಂದ ನರೇಗಾ ಯೋಜನೆಯಡಿ ಮತ್ತಷ್ಟು ಜನರಿಗೆ ಕೆಲಸ ಸಿಗಲಿದೆ ಎಂದು ಹೇಳಿದರು.

ಜಲಶಕ್ತಿ ಯೋಜನೆಯಡಿ ಕೆರೆಗಳನ್ನು ಪುನರುಜ್ಜೀವಗೊಳಿಸಿವ ಮತ್ತು ಸಂರಕ್ಷಣೆಯ ಕಾರ್ಯಗಳೊಂದಿಗೆ ಹಲವಾರು ನೀರು ಸಂರಕ್ಷಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಸಹ ಸಚಿವರು ಹೇಳಿದರು. ಜಲಶಕ್ತಿ ಯೋಜನೆಯು ಈ ವರ್ಷದ ನವೆಂಬರ್​ನಲ್ಲಿ ಕೊನೆಗೊಳ್ಳಲಿದೆ. ನರೇಗಾ ಯೋಜನೆ ಅಡಿಯಲ್ಲೇ ಕೆರೆಗಳ ಹೂಳೆತ್ತುವ, ಕೆರೆ-ಕುಂಟೆಗಳನ್ನು ತಂಬಿಸಲು ನೀರಿನ ಮೂಲಗಳನ್ನು ಪತ್ತೆಮಾಡುವ ಕಾರ್ಯಗಳನ್ನು ಮಾಡಲಾಗುವುದೆಂದು ಈಶ್ವರಪ್ಪ ಹೇಳಿದರು.

ನರೇಗಾ ಯೋಜನೆಯು ಜನರಿಗೆ ಉದ್ಯೋಗ ಒದಗಿಸುವದರೊಂದಿಗೆ ಅಂತರಜಲ ಮೂಲಗಳನ್ನು ಸಹ ಪುನಶ್ಚೇತನಗೊಳಿಸುವುದೆಂದು ಹೇಳಿದ ಈಶ್ವರಪ್ಪ ಅವರು ಜನರಿಗೆ ಫ್ಲೋರೈಡ್-ಮುಕ್ತ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಇದನ್ನೂ ಓದಿ: Covid 19 Live Updates Karnataka: ಹೊರರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಏಪ್ರಿಲ್ 1ರಿಂದ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ

ಇದನ್ನೂ ಓದಿ: ಉತ್ತರ ಕರ್ನಾಟಕ ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಅಷ್ಟೂ ರಸ್ತೆಗಳ ನಿರ್ಮಾಣ ಪೂರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada