ಬಸವಕಲ್ಯಾಣ ಉಪಚುನಾವಣೆ: ಕಣ್ಣೀರು, ಬಾಡೂಟ, ಜೈ ಶಿವಾಜಿ; ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರ ಸಂಚಾರ

Basavakalyan by-election: ಶಿವಾಜಿಗೆ ಜೈಕಾರ ಹೇಳಿ ಭಾಷಣ ಆರಂಭಿಸಿದ ಡಿ.ಕೆ.ಶಿವಕುಮಾರ್​, ನನಗೆ ಹಿಂದಿ ಬರಲ್ಲ, ಮರಾಠಿ ಬರಲ್ಲ ಕ್ಷಮಿಸಿ. ನಿಮ್ಮ ಮೇಲಿನ ಪ್ರೀತಿಯಿಂದ ಇಲ್ಲಿಯವರೆಗೂ ಬಂದಿದ್ದೇನೆ ಎಂದರು.

ಬಸವಕಲ್ಯಾಣ ಉಪಚುನಾವಣೆ: ಕಣ್ಣೀರು, ಬಾಡೂಟ, ಜೈ ಶಿವಾಜಿ; ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರ ಸಂಚಾರ
ಡಿ.ಕೆ.ಶಿವಕುಮಾರ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 09, 2021 | 6:50 PM

ಬೀದರ್: ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿತು. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದಿವಂಗತ ಶಾಸಕ ಬಿ.ನಾರಾಯಣರಾವ್​ ಹೆಸರು ಹೇಳಿ ಮತ ಯಾಚಿಸಿದರು. ಪ್ರಚಾರದ ನಡುವೆ ತುಸು ಬಿಡುವು ಮಾಡಿಕೊಂಡ ಡಿ.ಕೆ.ಶಿವಕುಮಾರ್ ಬಾಡೂಟ ಸವಿದರು. ರಾಜ್ಯ ಸರ್ಕಾರದ ಕೊರೊನಾ (ನೈಟ್) ಕರ್ಫ್ಯೂ ನಿರ್ಧಾರದ ಬಗ್ಗೆಯೂ ಟೀಕಿಸಿದರು. ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 17ರಂದು ನಡೆಯಲಿದೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಚುನಾವಣಾ ಕಣ ರಂಗೇರಿದೆ.

ಬಸವಕಲ್ಯಾಣ ತಾಲ್ಲೂಕಿನ ಉಜ್ಜಳಂ ಗ್ರಾಮದಲ್ಲಿ ಶಿವಾಜಿಗೆ ಜೈಕಾರ ಹೇಳಿ ಭಾಷಣ ಆರಂಭಿಸಿದ ಡಿ.ಕೆ.ಶಿವಕುಮಾರ್​, ನನಗೆ ಹಿಂದಿ ಬರಲ್ಲ, ಮರಾಠಿ ಬರಲ್ಲ ಕ್ಷಮಿಸಿ ಎಂದರು. ನಿಮ್ಮ ಮೇಲಿನ ಪ್ರೀತಿ ವಿಶ್ವಾಸದಿಂದ ಇಲ್ಲಿವರೆಗೂ ಬಂದಿದ್ದೇನೆ. ದಿವಂಗತ ಶಾಸಕರಾದ ಬಿ.ನಾರಾಯಣರಾವ್​ ನಿಮಗಾಗಿ ಪ್ರಾಣ ಬಿಟ್ಟಿದ್ದಾರೆ. ಬಿ.ನಾರಾಯಣರಾವ್​ಗೆ ₹ 50 ಕೋಟಿ ಹಣ, ಮಂತ್ರಿ ಸ್ಥಾನದ ಆಮಿಷ ಒಡ್ಡಲಾಗಿತ್ತು. ಆದರೆ ಬಿಜೆಪಿಯವರ ಅಮಿಷಕ್ಕೆ ಅವರು ಸೋಲಲಿಲ್ಲ. ಅವರು ನಿಮ್ಮ ಮತ್ತು ನಿಮ್ಮ ಕ್ಷೇತ್ರದ ಗೌರವ ಉಳಿಸಿದ್ದಾರೆ. ನೀವು ಅವರ ಗೌರವ ಉಳಿಸಿ. ಬಸವಕಲ್ಯಾಣ ಕ್ಷೇತ್ರದಲ್ಲಿರು ಪ್ರತಿ ಕಾಂಗ್ರೆಸ್​ ಕಾರ್ಯಕರ್ತನೂ ಅಭ್ಯರ್ಥಿಗಳೇ ಎಂದು ಭಾವುಕವಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ. ಕೊರೊನಾದಂಥ ಸಂಕಷ್ಟ ಕಾಲದಲ್ಲೂ ದುಡ್ಡುಹೊಡೆದವರು ಇವರು. ಈ ಸರ್ಕಾರ ಸರಿಯಿಲ್ಲ. ಇಂಥ ಸರ್ಕಾರವನ್ನು ತೆಗೆಯಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ನಿರುದ್ಯೋಗಿ ಯುವಕರಿಗೆ ₹ 6 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕೊರೊನಾ (ನೈಟ್) ಕರ್ಪ್ಯೂ ಜಾರಿ ಕುರಿತು ಪ್ರಸ್ತಾಪಿಸಿದ ಅವರು, ಈ ಸರ್ಕಾರಕ್ಕೆ ಸಮಯಪ್ರಜ್ಞೆ ಇಲ್ಲ. ಹೀಗೆ ಕರ್ಫ್ಯೂ ಜಾರಿ ಮಾಡುವ ಬದಲು ಲಸಿಕೆ ಮೇಲೆ ನಂಬಿಕೆ ಬರುವಂತೆ ಮಾಡಿ. ಎರಡು ಸಲ ಲಸಿಕೆ ತೆಗೆದುಕೊಂಡರೂ ಕೆಲವರಿಗೆ ಕೊರೊನಾ ಬಂದಿದೆ. ಇದರಿಂದ ಲಸಿಕೆ ಬಗ್ಗೆ ಜನರಿಗೆ ನಂಬಿಕೆ ಬರುತ್ತಿಲ್ಲ. ನನಗೆ ಲಸಿಕೆ ತೆಗೆದುಕೊಳ್ಳಲು ನಂಬಿಕೆ ಬರುತ್ತಿಲ್ಲ ಎಂದು ಆಕ್ಷೇಪಿಸಿದರು.

ಯಾರದೋ ಒತ್ತಡಕ್ಕೆ ಮಣಿದು ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಜನರ ನರಳುತಿದ್ದಾರೆ. ಪ್ರಾಣದ ಹಂಗು ತೊರೆದು ವ್ಯಾಪಾರ ಮಾಡುತ್ತಿದ್ದಾರೆ. ಸರ್ಕಾರದ ಈ ನಿರ್ಧಾರ ಸರಿಯಿಲ್ಲ. ನೈಟ್ ಕರ್ಪ್ಯೂ ಮಾಡಿದರೆ ಕೊರೊನಾ ಕಡಿಮೆಯಾಗುತ್ತೆ ಅಂತ ಯಾರು ಹೇಳಿದ್ದಾರೆ? ರಾತ್ರಿ ಓಡಾಡಿದರೆ ಮಾತ್ರ ಕೊರೊನಾ ಬರುತ್ತಾ? ಬೆಳಗ್ಗೆ ಓಡಾಡಿದರೆ ಬರಲ್ವಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ರಾಜ್ಯದಮರ್ಯಾದೆ ಹೋಗುತ್ತಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಪ್ರಸ್ತಾಪಿಸಿದ ಡಿಕೆಶಿ, ಪಿಪಿಎ ಕಿಟ್ ಯಾರು ಹಾಕಿಕೊಳ್ಳಬೇಕು? ಇಲ್ಲಿ ಯಾರು ಹಾಕಿಕೊಳ್ಳುತ್ತಿದ್ದಾರೆ? ಈ ವಿಚಾರ ಜಗಜ್ಜಾಹಿರವಾಗಿದೆ. ಎಲ್ಲರೂ ನೋಡುತ್ತಿದ್ದಾರೆ, ನಾವು ನೋಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.

ರಾಜಕಾರಿಣಿಗಳಿಗೆ ಕೊರೊನಾ ಬರಲ್ವಾ? ಉಪಚುನಾವಣೆಯಲ್ಲಿ ಕೊರೊನಾ ನಿಯಮಗಳನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಕೊರೊನಾ ನಿಯಮಗಳು ರಾಜಕಾರಣಿಗಳಿಗೂ ಅನ್ವಯ ಆಗಬೇಕು. ಬೆಳಗ್ಗೆ ಸಭೆಯಲ್ಲಿ 10 ಸಾವಿರ 6 ಸಾವಿರ ಸೇರಿದ್ದರು. ರಾಜಕೀಯ ಸಭೆಗಳನ್ನೂ ನಿಷೇಧಿಸಬೇಕು. ಮದುವೆ ಮಾಡಿಕೊಂಡ್ರೆ ಮಾತ್ರ ಕೊರೊನಾ ಬರುತ್ತೆ, ರಾಜಕೀಯ ಸಭೆಗಳನ್ನು ಮಾಡಿದರೆ ಬರುವುದಿಲ್ಲವೇ ಎಂದರು.

ಬಾಡೂಟ ಸವಿದ ಡಿಕೆಶಿ ಬಸವಕಲ್ಯಾಣ ತಾಲ್ಲೂಕಿನ ಉಜ್ಜಳಂ ಗ್ರಾಮದಲ್ಲಿ ಪ್ರಚಾರದ ಮಧ್ಯೆಯೇ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಖಂಡ ಮಹೇಶ್ ರಾಮ್ ಪಾಟೀಲ್ ಮನೆಯಲ್ಲಿ ಭರ್ಜರಿ ಬಾಡೂಟ ಸವಿದರು. ಮಟನ್, ಚಿಕನ್, ಮೊಟ್ಟೆ ಸಾಂಬರ್ ಮೆನುವಿನಲ್ಲಿತ್ತು. ಡಿ.ಕೆ.ಶಿವಕುಮಾರ್‌ಗೆ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸಾಥ್ ನೀಡಿದ್ದರು.

ಕಣ್ಣೀರು ಹಾಕಿದ ಮಲ್ಲಮ್ಮ ಉಜ್ಜಳಂ ಗ್ರಾಮದಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಮ್ಮ ಕಣ್ಣೀರು ಹಾಕಿದರು. ಭಾಷಣದ ಆರಂಭದಲ್ಲೇ ಕಣ್ಣೀರಿಟ್ಟ ಅವರು ನನ್ನ‌ ಮಡಿಲಿಗೆ ಮತ ಹಾಕಿ ಎಂದು ಮನವಿ ಮಾಡಿದರು.

(Basavakalyan by election Congress Canvass DK Shivakumar criticizes Karnataka govt over corruption)

ಇದನ್ನೂ ಓದಿ: ಬಸವಕಲ್ಯಾಣ ಉಪ ಚುನಾವಣೆ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ; ಅಸಾದುದ್ದೀನ್ ಒವೈಸಿ

ಇದನ್ನೂ ಓದಿ: ಜಮೀರ್ ಅಹ್ಮದ್ ನಾನು 10 ಕೋಟಿ ಪಡೆದಿದ್ದು ಸಾಬೀತು ಮಾಡಲಿ- ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ

Published On - 6:50 pm, Fri, 9 April 21

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ