ಚೀನಾದಲ್ಲಿ ಆದಂತೆ ಭಾರತದಲ್ಲಿ ಕೋವಿಡ್ ಅಲೆ ಬರಲ್ಲ ಯಾಕೆ? ಇಲ್ಲಿದೆ ಮೂರು ಕಾರಣಗಳು

| Updated By: ರಶ್ಮಿ ಕಲ್ಲಕಟ್ಟ

Updated on: Dec 22, 2022 | 4:33 PM

ಭಾರತದಲ್ಲಿ ಮತ್ತು ಚೀನಾದಲ್ಲಿ ವಯಸ್ಸು ಆಧಾರಿತ ಲಸಿಕೆ ನೀಡಿಕೆ ಕೂಡಾ ಇಲ್ಲಿ ಪರಿಗಣನೆಗೆ ಬರುತ್ತದೆ. ಚೀನಾ ಹಿರಿಯ ವ್ಯಕ್ತಿಗಳಿಗಿಂತ ಕಿರಿಯರಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿತ್ತು.

ಚೀನಾದಲ್ಲಿ ಆದಂತೆ ಭಾರತದಲ್ಲಿ ಕೋವಿಡ್ ಅಲೆ ಬರಲ್ಲ ಯಾಕೆ? ಇಲ್ಲಿದೆ ಮೂರು ಕಾರಣಗಳು
ಪ್ರಾತಿನಿಧಿಕ ಚಿತ್ರ
Follow us on

ಚೀನಾ (China) ಮತ್ತು ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಅಮೆರಿಕ ಇತರ ದೇಶಗಳಲ್ಲಿ ಪ್ರಕರಣಗಳ ಹೆಚ್ಚಳ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಭಾರತದಲ್ಲಿ ಕೋವಿಡ್ -19 (Covid 19) ಪರಿಸ್ಥಿತಿಯನ್ನು ಬುಧವಾರ ಪರಿಶೀಲಿಸಿದೆ. ಹೆಚ್ಚು ಪ್ರಕರಣಗಳಿರುವ ಏಕೈಕ ದೊಡ್ಡ ದೇಶ ಚೀನಾದಲ್ಲಿ ಕೋವಿಡ್ ಅಲೆ (Covid Wave) ಆತಂಕ ಸೃಷ್ಟಿಸಿರುವಾಗ, ಇತ್ತ ಭಾರತದಲ್ಲಿನ ಜನರು  ಕೋವಿಡ್​​ನಿಂದ ಎಷ್ಟು ರಕ್ಷಣೆ ಹೊಂದಿದ್ದಾರೆ ಎಂಬುದನ್ನು ಪರಿಗಣಿಸುವುದು ಮುಖ್ಯವಾಗಿದೆ. ಚೀನಾದ ಪರಿಸ್ಥಿತಿಗೆ ಹೋಲಿಸಿದರೆ ಭಾರತವು ಚೀನಾಕ್ಕಿಂತ ಉತ್ತಮವಾಗಿ ರಕ್ಷಿಸಲ್ಪಟ್ಟಿದೆ. ಭಾರತದಲ್ಲಿ ವ್ಯಾಪಕ ಲಸಿಕೆ ನೀಡಿಕೆಯೂ ಇದಕ್ಕೆ ಕಾರಣ. ಚೀನಾದಲ್ಲಿ ಆದಂತೆ ಭಾರತದಲ್ಲಿ ಕೋವಿಡ್ ಅಲೆ ಬರಲ್ಲ  ಅಂತಾರೆ ತಜ್ಞರು. ಇದಕ್ಕೆ ಮೂರು ಕಾರಣಗಳನ್ನೂ ನೀಡಲಾಗಿದೆ. ಅವು ಹೀಗಿವೆ

ಚೀನಾಗಿಂತ ಭಾರತದ ಲಸಿಕೆ ಉತ್ತಮ

ಭಾರತದಲ್ಲಿ ನೀಡಲಾಗುವ ಕೋವಿಡ್-19 ಲಸಿಕೆಗಳಲ್ಲಿ ಶೇ 96 ರಷ್ಟು ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ರೂಪಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಅಥವಾ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಆಗಿದೆ. ಚೀನಾದಲ್ಲಿ ನೀಡಲಾಗುವ ಹೆಚ್ಚಿನ ಲಸಿಕೆಗಳು ಕರೋನಾವಾಕ್ ಮತ್ತು ಸಿನೋಫಾರ್ಮ್. ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ ಕರೋನಾವಾಕ್​​ಗಿಂತ ಹೆಚ್ಚಿನ ಪರಿಣಾಮಕಾರಿತ್ವವನ್ನು ಹೊಂದಿದೆ. ಬ್ರೆಜಿಲ್‌ನಲ್ಲಿ 10 ಲಕ್ಷ ಜನರ ಅಧ್ಯಯನವು ಯುವಜನರಲ್ಲಿ ಎರಡೂ ಲಸಿಕೆಗಳು ಒಂದೇ ರೀತಿಯ ರಕ್ಷಣೆಯನ್ನು ನೀಡುತ್ತವೆ ಎಂದು ಕಂಡುಹಿಡಿದಿದೆ. ಆದರೆ ವಯಸ್ಸಾದವರಲ್ಲಿ ತೀವ್ರವಾದ ಸೋಂಕಿನ ವಿರುದ್ಧ ಕರೋನಾವಾಕ್ ಕಡಿಮೆ ಪರಿಣಾಮಕಾರಿಯಾಗಿದೆ.ಅಧ್ಯಯನದ ಪ್ರಕಾರ, ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಯ ಶೇ 76  ಪರಿಣಾಮಕಾರಿತ್ವಕ್ಕೆ ಹೋಲಿಸಿದರೆ, ಕರೋನಾವಾಕ್ 79 ವರ್ಷ ವಯಸ್ಸಿನ ಜನರಿಗೆ ತೀವ್ರತರವಾದ ಕಾಯಿಲೆಯ ವಿರುದ್ಧ ಶೇ 60 ವರೆಗೆ ರಕ್ಷಣೆ ನೀಡುತ್ತದೆ. ಆದರೆ ಚೀನಾದಲ್ಲಿ ಹೆಚ್ಚು ಬಳಸಿದ ಲಸಿಕೆಯಾದ ಕರೋನಾವಾಕ್ 80 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ತೀವ್ರತರವಾದ ಕಾಯಿಲೆಯಿಂದ ಜನರನ್ನು ರಕ್ಷಿಸುವಲ್ಲಿ ಕೇವಲ ಶೇ 30 ಪರಿಣಾಮಕಾರಿಯಾಗಿದೆ. ಸಾವಿನ ವಿರುದ್ಧ ಶೇ45 ಪರಿಣಾಮಕಾರಿಯಾಗಿದೆ. ಅದೇ ವೇಳೆ ಆಕ್ಸ್‌ಫರ್ಡ್ ಲಸಿಕೆ ತೀವ್ರತರವಾದ ಕಾಯಿಲೆಯಿಂದ ಜನರನ್ನು ರಕ್ಷಿಸುವಲ್ಲಿ ಶೇ67, ಸಾವಿನ ವಿರುದ್ಧ ಶೇ 85 ಕ್ಕೆ ಪರಿಣಾಕಾರಿತ್ವ ಹೊಂದಿದೆ.

ಭಾರತದಲ್ಲಿ ಮತ್ತು ಚೀನಾದಲ್ಲಿ ವಯಸ್ಸು ಆಧಾರಿತ ಲಸಿಕೆ ನೀಡಿಕೆ ಕೂಡಾ ಇಲ್ಲಿ ಪರಿಗಣನೆಗೆ ಬರುತ್ತದೆ. ಚೀನಾ ಹಿರಿಯ ವ್ಯಕ್ತಿಗಳಿಗಿಂತ ಕಿರಿಯರಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿತ್ತು.

ಖಚಿತವಾಗಿ ಹೇಳುವುದಾದರೆ, ಜನರು ಅವುಗಳನ್ನು ತೆಗೆದುಕೊಳ್ಳದಿದ್ದರೆ ಭಾರತೀಯ ಲಸಿಕೆಗಳ ಪರಿಣಾಮಕಾರಿತ್ವವು ಅಪ್ರಸ್ತುತವಾಗುತ್ತದೆ. ಉದಾಹರಣೆಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ನೀಡಲಾಗುವ mRNA ಲಸಿಕೆಗಳು ಕರೋನಾವಾಕ್​​ಗಿಂತ ಹೆಚ್ಚು ಪರಿಣಾಮಕಾರಿ. ಆದರೂ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ದೇಶಗಳಲ್ಲಿಯೂ ಕೋವಿಡ್ ಉಲ್ಬಣವಾಗುತ್ತಿದೆ. ಇವು ಚೀನಾಕ್ಕಿಂತ ಚಿಕ್ಕದಾಗಿದೆ ಮತ್ತು ಚೀನಾದಂತಹ ಯಾವುದೇ ಕಠಿಣ ಲಾಕ್‌ಡೌನ್‌ಗಳು ಇಲ್ಲಿಲ್ಲ. ಬೂಸ್ಟರ್ ಕವರೇಜ್ ವಿಷಯದಲ್ಲಿ ಭಾರತ ಹಿಂದುಳಿದಿದೆ.

10 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 14 ದೇಶಗಳಲ್ಲಿ, ಭಾರತದ ಬೂಸ್ಟರ್ ಕವರೇಜ್ 10 ನೇ ಸ್ಥಾನದಲ್ಲಿದೆ. 100 ಜನರಲ್ಲಿ 16 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಲೆಕ್ಕಹಾಕಿದರೆ ಬ್ರೆಜಿಲ್ 57 ಮತ್ತು ಅಮೆರಿಕ 40ನೇ ಸ್ಥಾನದಲ್ಲಿದೆ. ಇದು ಕೇವಲ ವಯಸ್ಕರು ಮಾತ್ರ. ಕಳೆದ ಬಾರಿ ಆರೋಗ್ಯ ಸಚಿವಾಲಯವು ಡೋಸ್ ಮತ್ತು ವಯಸ್ಸಿನ ಪ್ರಕಾರ ವ್ಯಾಕ್ಸಿನೇಷನ್ ವಿರಾಮವನ್ನು ಪ್ರಕಟಿಸಿದಾಗ (ಅಕ್ಟೋಬರ್ 31 ರಂದು), 94 ಕೋಟಿ ವಯಸ್ಕರಲ್ಲಿ 71.9 ಕೋಟಿ ಜನರು ಇನ್ನೂ ಬೂಸ್ಟರ್ ಅನ್ನು ತೆಗೆದುಕೊಳ್ಳಲಿಲ್ಲ (ಅವರಲ್ಲಿ 5.91 ಕೋಟಿ ಆರು ತಿಂಗಳ ಅಂತರದಿಂದ ಅರ್ಹರಾಗಿದ್ದರೂ ಸಹ). ಜೊತೆಗೆ, 13.5 ಕೋಟಿ ಜನರು (ಅವರಲ್ಲಿ6 ಕೋಟಿ ಹದಿಹರೆಯದವರು) ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ.

ಭಾರತದಲ್ಲಿ ಹೆಚ್ಚಿನ ಜನರು ಇತ್ತೀಚೆಗೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ

ಬೂಸ್ಟರ್‌ ಡೋಸ್ ನೀಡಿಕೆ ಮಂದಗತಿಯ ಹೊರತಾಗಿಯೂ, ಚೀನಾದ ಅಲೆಯಿಂದಾಗಿ ಭಾರತವು ಭಯಪಡದಿರಲು ಕಾರಣವಿದೆ. ಚೀನಾದ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಿಂದಾಗಿ ದೇಶದಲ್ಲಿ ಕಡಿಮೆ ಜನರು ಇತ್ತೀಚಿನ ಸೋಂಕುಗಳಿಂದ ನೈಸರ್ಗಿಕ ಪ್ರತಿರಕ್ಷೆಯನ್ನು ಹೊಂದುತ್ತಾರೆ. ಭಾರತದಲ್ಲಿ 4.5 ಕೋಟಿ ಪ್ರಕರಣಗಳಿಗೆ  ಹೋಲಿಸಿದರೆ ಡಿಸೆಂಬರ್ 20 ರವರೆಗೆ ಚೀನಾದಲ್ಲಿ ಸುಮಾರು 20 ಲಕ್ಷ ಒಟ್ಟು ಕೋವಿಡ್ -19 ಪ್ರಕರಣಗಳಿವೆ. ಇದು 2021 ರ ಜನಸಂಖ್ಯೆಯ ಪ್ರಕಾರ ಭಾರತದಲ್ಲಿ 32,819 ಕ್ಕೆ ಹೋಲಿಸಿದರೆ ಚೀನಾದಲ್ಲಿ 10 ಲಕ್ಷಕ್ಕೆ 1,348 ಸೋಂಕಿತರಿದ್ದಾರೆ. ಜೂನ್-ಜುಲೈ 2021 ರಲ್ಲಿ ಭಾರತದಲ್ಲಿ ಶೇ 62ರಷ್ಟು ಹರಡುವಿಕೆಯನ್ನು ಪ್ಯಾನ್-ಇಂಡಿಯಾ ಸೆರೋ-ಪ್ರವಲೆನ್ಸ್ ಅಧ್ಯಯನಗಳು ತೋರಿಸಿವೆ. ಭಾರತದಲ್ಲಿ ಶೇ22 ನಷ್ಟು ಸೋಂಕುಗಳು ಭಾರತದಲ್ಲಿ ಕಳೆದ ವರ್ಷ ಡಿಸೆಂಬರ್ ಮಧ್ಯಭಾಗದ ನಂತರ ಒಮಿಕ್ರಾನ್ ರೂಪಾಂತರಿಯಿಂದಾಗಿ ಮೂರನೇ ಅಲೆಯಿಂದ ಸಂಭವಿಸಿರುವುದರಿಂದ ಈ ಅಂಕಿ-ಅಂಶವು ಹೆಚ್ಚಾಗಿದೆ.

ಒಮಿಕ್ರಾನ್ ಉಪತಳಿಯ ಸೋಂಕು

ಚೀನಾದ ಉಲ್ಬಣಕ್ಕೆ ಭಾರತವು ಶಾಂತವಾಗಿ ಪ್ರತಿಕ್ರಿಯಿಸಲು ಇನ್ನೊಂದು ಕಾರಣವೆಂದರೆ ದೇಶವು ಒಮಿಕ್ರಾನ್ ಉಪತಳಿಯೊಂದಿಗೆ ಹೊಂದಿಕೊಂಡಿದೆ. ಚೀನಾದ ಇತ್ತೀಚಿನ ಡೇಟಾ (ಡಿಸೆಂಬರ್ 9 ರಂದು ಕಂಡುಬಂದ ಮಾದರಿಗಳು) BQ.1.1 ಉಪತಳಿಯಲ ಶೇ 7 ಕ್ಕೆ ಹೋಲಿಸಿದರೆ  ಶೇ14 ಮಾದರಿಗಳಲ್ಲಿ Omicron ನ BF.7 ಉಪತಳಿ ಇರುವುದು ತೋರಿಸಿದೆ. outbreak.info ಸಂಗ್ರಹಿಸಿದ ಮಾಹಿತಿಯ ಪ್ರಕಾರ, ನವೆಂಬರ್ 3 ರಿಂದ ಕೊನೆಯ ಡೇಟಾದಲ್ಲಿ ಎರಡನೆಯದು ಎಲ್ಲಾ ಮಾದರಿಗಳನ್ನು ರೂಪಿಸಿದೆ. ಮತ್ತೊಂದೆಡೆ ಭಾರತವು ಜುಲೈನಲ್ಲಿ ತೆಗೆದ ಮಾದರಿಯಲ್ಲಿ BF.7 ಉಪತಳಿಯನ್ನು ಮೊದಲು ಪತ್ತೆಹಚ್ಚಿದೆ. ಭಾರತದಲ್ಲಿನ ಇತ್ತೀಚಿನ (ನವೆಂಬರ್ 30 ರ ಮಾದರಿಗಳಿಂದ) BF.7 ನ ಯಾವುದೇ ಉಪಸ್ಥಿತಿಯನ್ನು ತೋರಿಸಲಿಲ್ಲ. ಬುಧವಾರ ಭಾರತದಲ್ಲಿ ಒಮಿಕ್ರಾನ್ BF.7ನ ಮೂರು ಪ್ರಕರಣಗಳು ವರದಿ ಆಗಿದೆ.

ಇದನ್ನೂ ಓದಿ: India Covid Updates: ವಿದೇಶಗಳಿಂದ ಬರುವವರಿಗೆ RT-PCR ಪರೀಕ್ಷೆ ಆರಂಭ: ಮನ್ಸುಖ್ ಮಾಂಡವೀಯ

ಕಳೆದ ಡಿಸೆಂಬರ್‌ನಲ್ಲಿ ಒಮಿಕ್ರಾನ್‌ನ ವಿಭಿನ್ನ ಉಪ ತಳಿಯಿಂದ ಕೋವಿಡ್ ಅಲೆಯನ್ನು ಪ್ರಾರಂಭಿಸಿದ ಭಾರತವು ಒಮಿಕ್ರಾನ್ ವಿರುದ್ಧ ಚೀನಾಕ್ಕಿಂತ ಉತ್ತಮವಾಗಿ ರಕ್ಷಿಸಲ್ಪಡಬಹುದು ಎಂದು ಈ ಡೇಟಾ ಸೂಚಿಸುತ್ತದೆ. ಆದಾಗ್ಯೂ, ಈ ತೀರ್ಮಾನವನ್ನು ಎರಡು ಎಚ್ಚರಿಕೆಗಳೊಂದಿಗೆ ತೆಗೆದುಕೊಳ್ಳಬೇಕಾಗಿದೆ. ಒಂದು, ಕೋವಿಡ್-19 ಮಾದರಿಗಳನ್ನು ಅನುಕ್ರಮಗೊಳಿಸುವುದರಲ್ಲಿ ಭಾರತ ಮತ್ತು ಚೀನಾ ಎರಡೂ ಬಹಳ ಮಿತವ್ಯಯ ಹೊಂದಿವೆ. ಎರಡು, ಇದುವರೆಗಿನ ಹೊಸ ಉಪತಳಿಗಳ ವಿರುದ್ಧ ಭಾರತದ ಉತ್ತಮ ರಕ್ಷಣೆಯು ಜೀವಿತಾವಧಿಯ ರಕ್ಷಣೆಗೆ ಯಾವುದೇ ಖಾತರಿಯಿಲ್ಲ. ಒಮಿಕ್ರಾನ್ ಅಲೆ ಭಾರತಕ್ಕೆ ಮೊದಲು ಬಂದಾಗ, ದೇಶದ ವ್ಯಾಕ್ಸಿನೇಷನ್ ಡ್ರೈವ್ ಸಕ್ರಿಯವಾಗಿತ್ತು ಮತ್ತು ಜನರು ಬೂಸ್ಟರ್‌ಗಳಿಗಾಗಿ ಸಾಲುಗಟ್ಟಿ ನಿಂತಿದ್ದರು. ಆ ಲಸಿಕೆ ನೀಡಿ ಈಗ ಸುಮಾರು ಒಂದು ವರ್ಷ ಕಳೆದಿವೆ. ಬೈವೆಲೆಂಟ್ ಲಸಿಕೆಗಳು ಎಂದು ಕರೆಯಲ್ಪಡುವ ಹೊಸ ರೂಪಾಂತರಗಳ ವಿರುದ್ಧ ರಕ್ಷಿಸುವಂತಹವುಗಳೊಂದಿಗೆ ಅವುಗಳನ್ನು ಪುನರಾವರ್ತಿಸಬೇಕು ಅಥವಾ ನವೀಕರಿಸಬೇಕು. ಇದು ತಜ್ಞರ ಅಭಿಪ್ರಾಯವೂ ಆಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Thu, 22 December 22