ಮಲೇರಿಯಾ ವಿರುದ್ಧ ಭಾರತದ ಪ್ರಬಲ ಹೋರಾಟ; ಸಾವಿನ ಸಂಖ್ಯೆ ಇಳಿಮುಖ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2020 | 1:04 PM

ಭಾರತದಲ್ಲಿ ಕಳೆದ 2ವರ್ಷಗಳಿಂದ ಮಲೇರಿಯಾ ವಿರುದ್ಧ ನಿರಂತರ ಹೋರಾಟ ನಡೆಯುತ್ತಿರುವ ಪರಿಣಾಮ ವಾರ್ಷಿಕ ಮಲೇರಿಯಾ ಪ್ರಕರಣದಲ್ಲಿ ಶೇ.18 ಮತ್ತು ಸಾವಿನ ಪ್ರಮಾಣದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ.

ಮಲೇರಿಯಾ ವಿರುದ್ಧ ಭಾರತದ ಪ್ರಬಲ ಹೋರಾಟ; ಸಾವಿನ ಸಂಖ್ಯೆ ಇಳಿಮುಖ
ಸಾಂದರ್ಭಿಕ ಚಿತ್ರ
Follow us on

ವಿಶ್ವಸಂಸ್ಥೆ: ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆಗ್ನೇಯ ಏಷ್ಯಾದಲ್ಲಿ 2000ನೇ ಇಸವಿಯಲ್ಲಿ 20 ಕೋಟಿ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಅದು 5.6 ದಶಲಕ್ಷಕ್ಕೆ ಇಳಿದಿದ್ದು ದಾಖಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ವಿಶ್ವ ಮಲೇರಿಯಾ ವರದಿ-2020 ಬಿಡುಗಡೆ ಮಾಡಿದೆ. ಜಾಗತಿಕವಾಗಿ 22.9 ಕೋಟಿ ಮಲೇರಿಯಾ ಕೇಸ್​ಗಳು ದಾಖಲಾಗಿದೆ. ಈ ವಾರ್ಷಿಕ ವರದಿಯ ಅಂದಾಜು ಕಳೆದ ನಾಲ್ಕು ವರ್ಷಗಳಿಂದಲೂ ಹೆಚ್ಚೇನೂ ಬದಲಾಗುತ್ತಿಲ್ಲ. ಕಳೆದ ವರ್ಷ ಒಟ್ಟಾರೆ 40,900 ಜನರು ಮಲೇರಿಯಾದಿಂದ ಪ್ರಾಣ ಕಳೆದುಕೊಂಡಿದ್ದರು. ಹಾಗೇ 2018ರಲ್ಲಿ 4,11,000 ಜನ ಈ ರೋಗಕ್ಕೆ ಬಲಿಯಾಗಿದ್ದರು. ಆದರೆ ಆಗ್ನೇಯ ಏಷ್ಯಾದ ದೇಶಗಳು ಮಲೇರಿಯಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಾವಿನ ಪ್ರಮಾಣ ಇಳಿಮುಖ
ಈ ದೇಶಗಳಲ್ಲಿ ಮಲೇರಿಯಾ ಪ್ರಕರಣ ಶೇ.73ರಷ್ಟಿದೆ ಮತ್ತು ಸಾವಿನ ಪ್ರಮಾಣ ಶೇ.74ಕ್ಕೆ ಇಳಿದಿದೆ. ಅದರಲ್ಲೂ ಭಾರತದಲ್ಲಿ ರೋಗದ ಪ್ರಮಾಣ ತೀವ್ರ ಕಡಿಮೆಯಾಗಿದೆ. 2000ರಲ್ಲಿ 29,500ಮಂದಿ ಮಲೇರಿಯಾದಿಂದ ಸಾವನ್ನಪ್ಪಿದ್ದರು, 2019ರಲ್ಲಿ 7700 ಜನ ಸಾವನ್ನಪ್ಪಿದ್ದಾರೆ. ಅಂದಿಗೆ ಹೋಲಿಸಿದರೆ ಈ ಪ್ರಮಾಣ ತುಂಬ ಕಡಿಮೆ ಎಂದು ಡಬ್ಲ್ಯೂಎಚ್​ಒ ಡೈರೆಕ್ಟರ್ ಜನರಲ್​ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

ಭಾರತದಲ್ಲಿ ಕಳೆದ 2 ವರ್ಷಗಳಿಂದ ಮಲೇರಿಯಾ ವಿರುದ್ಧ ನಿರಂತರ ಹೋರಾಟ ನಡೆಯುತ್ತಿರುವ ಪರಿಣಾಮ ವಾರ್ಷಿಕ ಮಲೇರಿಯಾ ಪ್ರಕರಣದಲ್ಲಿ ಶೇ.18 ಮತ್ತು ಸಾವಿನ ಪ್ರಮಾಣದಲ್ಲಿ ಶೇ. 20ರಷ್ಟು ಕಡಿಮೆಯಾಗಿದೆ. 2019ರಲ್ಲಿ ಭಾರತದಲ್ಲಿ ಶೇ.88 ಮಲೇರಿಯಾ ಪ್ರಕರಣಗಳು ಹಾಗೂ ಶೇ.86 ಸಾವಿನ ಪ್ರಕರಣಗಳು ವರದಿಯಾಗಿದೆ ಎಂದು ಡಬ್ಲ್ಯೂಎಚ್​ಒ ವಿವರಿಸಿದೆ.

ಬುರ್ಕಿನಾ ಫಾಸೊ, ಕ್ಯಾಮರೂನ್, ಕಾಂಗೋ, ಘಾನಾ, ಭಾರತ, ಮಾಲಿ, ಮೊಜಾಂಬಿಕ್, ನಿಜರ್, ನೈಜೀರಿಯಾ, ಉಗಾಂಡಾ ಮತ್ತು ತಾಂಜೇನಿಯಾದಲ್ಲಿ ಹೆಚ್ಚು ಮಲೇರಿಯಾ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಜಾಗತಿಕ ಮಲೇರಿಯಾ ವರದಿಯಲ್ಲಿ ಶೇ.71ರಷ್ಟು ಪಾಲು ಈ ದೇಶಗಳದ್ದೇ ಆಗಿವೆ. ಆದರೆ ಭಾರತದಲ್ಲಿ ರೋಗದ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕ ಎಂದು ವರದಿ ಹೇಳಿದೆ.

ಇನ್ನಷ್ಟು..

ಕೊರೊನಾ ಮೂಲ ಚೀನಾ ಅಲ್ಲ ಎಂಬ ವಾದವನ್ನು ಒಪ್ಪುವುದು ಕಷ್ಟ ಕಷ್ಟ ಎಂದ WHO!
ಸೊಳ್ಳೆಗಳನ್ನು ಮನೆಯಿಂದ ಹೊರ ಓಡಿಸಲು ಕರ್ಪೂರ ಬಹಳ ಪರಿಣಾಕಾರಿ