ಭಾರತಕ್ಕೆ ಬಂದಿಳಿಯಿತು ಇನ್ನೂ 3 ರಫೇಲ್​ ಯುದ್ಧ ವಿಮಾನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2021 | 10:11 PM

7000 ಕಿ.ಮೀ. ಕ್ರಮಿಸಿ ಇಂದು ಭಾರತಕ್ಕೆ 3 ರಫೇಲ್​ ಜೆಟ್​ಗಳು ಬಂದಿಳಿದಿವೆ.  ಈ ಕುರಿತು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.

ಭಾರತಕ್ಕೆ ಬಂದಿಳಿಯಿತು ಇನ್ನೂ 3 ರಫೇಲ್​ ಯುದ್ಧ ವಿಮಾನ
ರಫೇಲ್​ ವಿಮಾನ
Follow us on

ನವದೆಹಲಿ: ನೆರೆಯ ಚೀನಾ ದೇಶವು ಗಡಿಯಲ್ಲಿ ಕಾಲ್ಕೆರೆದುಕೊಂಡು ಜಗಳಕ್ಕೆ ಬರುತ್ತಿರುವಾಗಲೇ ಭಾರತದ ವಾಯುಸೇನೆ ಬಲ ಹೆಚ್ಚುತ್ತಿದೆ. ಫ್ರಾನ್ಸ್​​ನಿಂದ 3ನೇ ಹಂತದಲ್ಲಿ 3 ರಫೇಲ್​ ವಿಮಾನಗಳು ಭಾರತಕ್ಕೆ ಬಂದಿವೆ.

7000 ಕಿ.ಮೀ. ಕ್ರಮಿಸಿ ಇಂದು ಭಾರತಕ್ಕೆ 3 ರಫೇಲ್​ ಜೆಟ್​ಗಳು ಬಂದಿಳಿದಿವೆ.  ಈ ಕುರಿತು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ. ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವಾಗಲೇ ದೇಶದ ವಾಯುಪಡೆಗೆ ಹೊಸ ಬಲ ನೀಡಿದಂತಾಗಿದೆ.

ರಫೇಲ್ ಬಂದ ಬಗ್ಗೆ ವಾಯುಪಡೆ ಟ್ವೀಟ್ ಇಲ್ಲಿದೆ

ಭಾರತ ಸರ್ಕಾರವು ಒಟ್ಟು 36 ರಫೇಲ್ ಜೆಟ್​ಗಳನ್ನು ತರಿಸಿಕೊಳ್ಳುತ್ತಿದೆ. ಅದರಲ್ಲಿ 5 ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಜುಲೈ 29ರಂದು ಬಂದಿಳಿದಿದ್ದವು. ಈ ಜೆಟ್​ಗಳ ಸೇರ್ಪಡೆಯಿಂದ ಭಾರತದ ವಾಯುಸೇನೆಯ ಬಲ ಇಮ್ಮಡಿಸಿದೆ.

ಮೊದಲ ಹಂತದಲ್ಲಿ ರಫೇಲ್​ ಯುದ್ಧವಿಮಾನಗಳು ಅಂಬಾಲಾಗೆ ಬಂದಿಳಿದಾಗ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಾದ ನಂತರ ಮತ್ತೊಂದು ಬ್ಯಾಚ್​ನಲ್ಲಿ ಇನ್ನೂ 3 ರಫೇಲ್​ ಜೆಟ್​ಗಳು ಬಂದಿಳಿದಿದ್ದವು. ಇದೀಗ ಮತ್ತೊಂದು ಬ್ಯಾಚ್​ನಲ್ಲಿ 3 ರಫೇಲ್​ ವಿಮಾನಗಳು ಬಂದಿವೆ.

ಭಾರತೀಯ ವಾಯುಪಡೆಗೆ ರಫೇಲ್​ ರಣಧೀರನ ಅಧಿಕೃತ ಸೇರ್ಪಡೆ