ಲಖನೌ: ಉತ್ತರ ಪ್ರದೇಶದ ಬದಾಯೂ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಅರ್ಚಕ ಮತ್ತು ಅವರ ಇಬ್ಬರು ಸಹಾಯಕರ ಮೇಲೆ ದೂರು ದಾಖಲಾಗಿದೆ. ಇವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಈ ಕೃತ್ಯ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯವೆಸಗಿದ ನಂತರ ದುಷ್ಕರ್ಮಿಗಳು ಅವರದ್ದೇ ವಾಹನದಲ್ಲಿ ಆಕೆಯನ್ನು ಮನೆಗೆ ಕರೆತಂದಿದ್ದರು. ಅವರು ಅಲ್ಲಿಂದ ಹೊರಟು ಹೋಗುವಷ್ಟರಲ್ಲಿ ಆಕೆಯ ಪ್ರಾಣ ಹೋಗಿತ್ತು.
ನಮ್ಮ ಅಮ್ಮ ಪ್ರತಿದಿನ ದೇವಾಲಯಕ್ಕೆ ಹೋಗುತ್ತಾರೆ. ಭಾನುವಾರ ಅವರು ಸಂಜೆ 5 ಗಂಟೆಯ ಹೊತ್ತಿಗೆ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ 11.30ಕ್ಕೆ ಕೆಲವು ಗಂಡಸರು ಬಂದು ಆಕೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಎಂದು ಸ್ಥಳೀಯ ಮಾಧ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ತೆಯ ಪುತ್ರ ಹೇಳಿದ್ದಾನೆ.
ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ನಿರ್ಲಕ್ಷ್ಯವೂ ಇದಕ್ಕೆ ಕಾರಣ. ಸ್ಥಳೀಯ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಬದಾಯೂ ಪೊಲೀಸ್ ಮುಖ್ಯಸ್ಥ ಸಂಕಲ್ಪ್ ಶರ್ಮಾ ಹೇಳಿದ್ದಾರೆ.
Budaun: A 50-year-old Anganwadi worker was allegedly raped and murdered in Ughaiti area of the district.
"Case has been registered against 3 people under Sections 376 (rape)& 302 (murder) of IPC. 4 teams have been formed the nab to the accused," says SSP Sankalp Sharma. (05.01) pic.twitter.com/eesXAU4gmm
— ANI UP (@ANINewsUP) January 6, 2021
ಮಹಿಳೆ ದೇವಾಲಯದ ಪಕ್ಕದಲ್ಲಿರುವ ಬಾವಿಗೆ ಬಿದ್ದಿದ್ದರು. ನಾನು ಮತ್ತು ಇತರರು ಸೇರಿ ಆಕೆಯನ್ನು ರಕ್ಷಿಸಿದೆವು. ಬಾವಿಯಿಂದ ಹೊರತೆಗೆದು ಆಕೆಯನ್ನು ಮನೆಗೆ ಕರೆದುಕೊಂಡು ಹೋದೆವು. ಅಲ್ಲಿವರೆಗೆ ಆಕೆಗೆ ಜೀವ ಇತ್ತು ಎಂದು ಆರೋಪಿ ಅರ್ಚಕ ಹೇಳಿರುವ ವಿಡಿಯೊ ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಅತ್ಯಾಚಾರ ಮಾಡಲು ಬಂದವನನ್ನು ಹತ್ಯೆ ಮಾಡಿ, ಪೊಲೀಸ್ ಠಾಣೆಗೆ ಹೋದ 19ರ ಯುವತಿ