ಬೆಂಗಳೂರು: ದೆಹಲಿಯಲ್ಲಿ ರೈತರ ಪ್ರತಿಭಟನೆ ಕಾವು ಜೋರಾಗಿದೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಮಧ್ಯೆ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಇಂಟರ್ನೆಟ್ ಸೇವೆಯನ್ನು ರದ್ದು ಮಾಡಲಾಗಿದೆ.
ರೈತರು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಕಷ್ಟು ರೈತರು ಕೆಂಪುಕೋಟೆಯತ್ತ ಹೆಜ್ಜೆ ಹಾಕಿದ್ದಾರೆ. ಅಲ್ಲಿರುವ ಸಾಕಷ್ಟು ರೈತರು ಫೇಸ್ಬುಕ್ ಲೈವ್ ಮಾಡಿ ಉಳಿದ ರೈತರು ಕೆಂಪುಕೋಟೆಯತ್ತ ಬರುವಂತೆ ಸ್ಫೂರ್ತಿ ನೀಡಿದ್ದರು. ಜತೆಗೆ ವಾಟ್ಸ್ಆ್ಯಪ್ ಸಂದೇಶಗಳು ಕಾಡ್ಗಿಚ್ಚಿನಂತೆ ಹರಡಿದ್ದವು. ಇವುಗಳನ್ನು ತಡೆಯುವ ಉದ್ದೇಶದಿಂದ ಕೆಂಪುಕೋಟೆ ಸುತ್ತಮುತ್ತಲ ಭಾಗ ಸೇರಿ ಅನೇಕ ಕಡೆಗಳಲ್ಲಿ ಇಂಟರ್ನೆಟ್ ಸೇವ್ ರದ್ದು ಮಾಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಪರಿಸ್ಥಿತಿ ಸಮಸ್ಥಿತಿಗೆ ಮರಳಿದ ನಂತರ ಇಂಟರ್ನೆಟ್ ಸೇವೆ ಮರಳಿ ನೀಡುವ ಸಾಧ್ಯತೆ ಇದೆ.
ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ರೈತರನ್ನು ಕೆಳಗಿಳಿಸಿದ ಪೊಲೀಸರು
ದೆಹಲಿ ಕೆಂಪುಕೋಟೆ ಮೇಲೆ ರೈತಧ್ವಜ; ಇತಿಹಾಸದಲ್ಲಿ ಇದೇ ಮೊದಲು ಕೆಂಪುಕೋಟೆಗೆ ರೈತರ ಮುತ್ತಿಗೆ
Published On - 3:59 pm, Tue, 26 January 21