ದೇಶದಲ್ಲಿ 24ಗಂಟೆಯಲ್ಲಿ 4100 ಮಂದಿ ಕೊರೊನಾದಿಂದ ಸಾವು; ಮೃತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಲು ಕಾರಣವೇನು?

| Updated By: Lakshmi Hegde

Updated on: Mar 26, 2022 | 11:43 AM

ಭಾರತದಲ್ಲಿ ಕೊರೊನಾದ ಮೂರನೇ ಅಲೆ ತಗ್ಗಿದೆ. ಇತ್ತೀಚೆಗೆ ಪ್ರತಿದಿನ ದಾಖಲಾಗುವ ಕೊರೊನಾ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಚೇತರಿಕೆ ದರ ಶೇ.98.75ರಷ್ಟಿದೆ.

ದೇಶದಲ್ಲಿ 24ಗಂಟೆಯಲ್ಲಿ 4100 ಮಂದಿ ಕೊರೊನಾದಿಂದ ಸಾವು; ಮೃತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಲು ಕಾರಣವೇನು?
ಸಾಂಕೇತಿಕ ಚಿತ್ರ
Follow us on

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1660 ಹೊಸ ಕೊವಿಡ್​ 19 ಕೇಸ್​ಗಳು (Covid 19 Cases) ದಾಖಲಾಗಿದೆ. ಆದರೆ ಬರೋಬ್ಬರಿ 4100 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆ ಡೇಟಾದಲ್ಲಿ ಉಲ್ಲೇಖವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೊರೊನಾ ಸಾವಿನ ಸಂಖ್ಯೆ ಬರೋಬ್ಬರಿ 4000ಕ್ಕೆ ಏರಿಕೆಯಾಗಿದ್ದು. ಈ ಮೂಲಕ ದೇಶದ ಸಾವಿನ ಸಂಖ್ಯೆ 5,20,855ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆ ಇದೆ. ಹಾಗೇ ಇತ್ತೀಚೆಗೆ ಪ್ರತಿದಿನ 100ಕ್ಕೂ ಕಡಿಮೆ ಕೊರೊನಾ ಸಾವಿನ ಸಂಖ್ಯೆ ದಾಖಲಾಗುತ್ತಿತ್ತು. ಆದರೆ ಈಗ ಏಕಾಏಕಿ 4100 ದಾಖಲಾಗಲು ಕಾರಣ ಹಳೇ ಕೇಸ್​ಗಳು ಎನ್ನಲಾಗಿದೆ.  ಇದಕ್ಕೆ ಬ್ಯಾಕ್​ಲಾಗ್​ ಕೇಸ್​ಗಳು ಎನ್ನಲಾಗುತ್ತದೆ. ಒಟ್ಟು 4100 ಕೇಸ್​​ಗಳಲ್ಲಿ 4005 ಮಹಾರಾಷ್ಟ್ರದಿಂದ ಮತ್ತು 79 ಕೇರಳದಿಂದ ವರದಿಯಾಗಿದೆ. ಅಂದರೆ ಈ ರಾಜ್ಯಗಳು ಪರಿಷ್ಕೃತ ಕೊವಿಡ್​ 19 ವರದಿ ನೀಡಿದ್ದು, ಅದರಲ್ಲಿ ಹಳೇ ಬಾಕಿ ಇದ್ದ ಪ್ರಕರಣಗಳನ್ನೂ ಸೇರಿಸಿವೆ. 

ಭಾರತದಲ್ಲಿ ಕೊರೊನಾದ ಮೂರನೇ ಅಲೆ ತಗ್ಗಿದೆ. ಇತ್ತೀಚೆಗೆ ಪ್ರತಿದಿನ ದಾಖಲಾಗುವ ಕೊರೊನಾ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಚೇತರಿಕೆ ದರ ಶೇ.98.75ರಷ್ಟಿದೆ. ಕಳೆದ 24ಗಂಟೆಯಲ್ಲಿ 2,349 ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದು, ಒಟ್ಟೂ ಚೇತರಿಸಿಕೊಂಡವರ ಸಂಖ್ಯೆ 4,24,80,436ಕ್ಕೆ ಏರಿದೆ. ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 16,741 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೊನಾ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 4,30,18,032 ಜನರಿಗೆ ಸೋಂಕು ತಗುಲಿತ್ತು. ಇನ್ನೊಂದೆಡೆ ಲಸಿಕೆ ಅಭಿಯಾನವೂ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟಾರೆ 1,82,87,68,476 ಮಂದಿ ಲಸಿಕೆ ಪಡೆದಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಕೇವಲ ಶೇ.0.25ರಷ್ಟಿದೆ.

ನಿನ್ನೆ ದಾಖಲಾಗಿದ್ದ ಕೊರೊನಾ ಕೇಸ್​​ಗೆ ಹೋಲಿಸಿದರೆ ಇಂದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಅಂದರೆ ನಿನ್ನೆ 1685 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಇಂದು 1660 ಪ್ರಕರಣಗಳು ದಾಖಲಾಗಿದ್ದು, ಕೇವಲ 25 ಪ್ರಕರಣಗಳು ಹೆಚ್ಚು. ಹಾಗೇ ನಿನ್ನೆ 83 ಜನ ಕೊರೊನಾದಿಂದ ಮೃತಪಟ್ಟಿದ್ದರು. ದೇಶದಲ್ಲಿ ಸದ್ಯದ ಮಟ್ಟಿಗೆ ಕೊರೊನಾ ಸೋಂಕಿನ ಪ್ರಸರಣ ಮತ್ತು ಸಾವಿನ ಸಂಖ್ಯೆ ಕಡಿಮೆಯಿದೆ. ಕೊರೊನಾದಿಂದ ಉಂಟಾಗುವ ಸಾವಿನ ಪ್ರಮಾಣ ಶೇ.1.20ರಷ್ಟಿದೆ. ದೇಶದಲ್ಲಿ ಮಾರ್ಚ್​ 16ರಿಂದ, 12-14ವಯಸ್ಸಿನವರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದ್ದು ಇಲ್ಲಿಯವರೆಗೆ ಸುಮಾರು ಒಂದು ಕೋಟಿ ಮಕ್ಕಳಿಗೆ ಒಂದನೇ ಡೋಸ್ ನೀಡಿಯಾಗಿದೆ ಎಂದು ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಅಂದಹಾಗೇ ಇವರಿಗೆಲ್ಲ ಕಾರ್ಬೋವ್ಯಾಕ್ಸ್​ ಲಸಿಕೆ ನೀಡಲಾಗುತ್ತಿದ್ದು, 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಪತ್ನಿಯನ್ನೇ ಕೊಂದ ಪತಿ!

Published On - 11:15 am, Sat, 26 March 22