AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 8 ಲಕ್ಷ ಮಕ್ಕಳಿಗೆ ಇನ್ನು ಸಿಕ್ಕಿಲ್ಲ ವ್ಯಾಕ್ಸಿನ್; ಮಕ್ಕಳಿಗೆ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಫೇಲ್

ಮಕ್ಕಳ ವ್ಯಾಕ್ಸಿನೆಷನ್​ನಲ್ಲಿ ಗೊಂದಲ ಎದುರಾಗಿದೆ. ಜನ್ಮ ದಿನಾಂಕದ ಬದಲು ಜನ್ಮ ವರ್ಷ ಆಧರಿಸಿ ಲಸಿಕೆ ನೀಡಲಾಗುತ್ತಿದೆ. ವರ್ಷದ ಆಧಾರದಿಂದ ಅನೇಕ ಮಕ್ಕಳಿಗೆ ಲಸಿಕೆ ಸಿಗದೆ ಪರದಾಟ ಪಡುತ್ತಿದ್ದಾರೆ. 15-18 ವರ್ಷದ ಮಕ್ಕಳಿಗೆ ಸರ್ಕಾರ ಲಸಿಕೆ ನೀಡಲು ಆರಂಭಿಸಿದೆ.

ಕರ್ನಾಟಕದಲ್ಲಿ 8 ಲಕ್ಷ ಮಕ್ಕಳಿಗೆ ಇನ್ನು ಸಿಕ್ಕಿಲ್ಲ ವ್ಯಾಕ್ಸಿನ್; ಮಕ್ಕಳಿಗೆ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಫೇಲ್
ಲಸಿಕೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Feb 27, 2022 | 9:02 AM

Share

ಮಹಾಮಾರಿ ಕೊರೊನಾ (Coronavirus) ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರವೆಂದರೆ ಲಸಿಕೆ (Vaccine). ಮೊದಲು ಮತ್ತು ಎರಡನೇ ಅಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಮೂರನೇ ಅಲೆಯಲ್ಲಿ ಬಹುತೇಕ ಜನರು ವ್ಯಾಕ್ಸಿನ್ ಪಡೆದಿದ್ದರಿಂದ ಕೊರೊನಾ ತೀವ್ರತೆ ಹೆಚ್ಚಾಗಿರಲಿಲ್ಲ. ಇನ್ನು ಕೇಂದ್ರ ಸರ್ಕಾರ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ನೀಡಿತ್ತು. ಆದರೆ ರಾಜ್ಯದಲ್ಲಿ ಮಕ್ಕಳಿಗೆ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ರಾಜ್ಯದ 8 ಲಕ್ಷ ಮಕ್ಕಳಿಗೆ ಇನ್ನು ವ್ಯಾಕ್ಸಿನ್ ಸಿಕ್ಕಿಲ್ಲ. ಹೀಗಾಗಿ ಮಕ್ಕಳಿಗೆ ಲಸಿಕೆ ಕೊಡಿಸಲು ಪೋಷಕರು ಪರದಾಟ ಪಡುತ್ತಿದ್ದಾರೆ.

ಮಕ್ಕಳ ವ್ಯಾಕ್ಸಿನೆಷನ್​ನಲ್ಲಿ ಗೊಂದಲ ಎದುರಾಗಿದೆ. ಜನ್ಮ ದಿನಾಂಕದ ಬದಲು ಜನ್ಮ ವರ್ಷ ಆಧರಿಸಿ ಲಸಿಕೆ ನೀಡಲಾಗುತ್ತಿದೆ. ವರ್ಷದ ಆಧಾರದಿಂದ ಅನೇಕ ಮಕ್ಕಳಿಗೆ ಲಸಿಕೆ ಸಿಗದೆ ಪರದಾಟ ಪಡುತ್ತಿದ್ದಾರೆ. 15-18 ವರ್ಷದ ಮಕ್ಕಳಿಗೆ ಸರ್ಕಾರ ಲಸಿಕೆ ನೀಡಲು ಆರಂಭಿಸಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಿಂದ ಗೊಂದಲ ಶುರುವಾಗಿದೆ. ಜನ್ಮ ವರ್ಷ ಆಧರಿಸಿ ಲಸಿಕೆ ನೀಡುತ್ತಿರುವುದರಿಂದ ಅನೇಕ ಮಕ್ಕಳಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ.

2007 ಡಿಸೆಂಬರ್ 31 ರೊಳಗೆ ಜನಿಸಿದ ಮಕ್ಕಳು ಅರ್ಹರಾಗಿದ್ದಾರೆ. 2008 ಜನವರಿ 1 ರಿಂದ ಜನಿಸಿದ ಮಕ್ಕಳಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಈ ಹಿಂದೆ 60, 45 ಮತ್ತು 18 ವರ್ಷದ ಮೇಲ್ಪಟ್ಟವರಿಗೆ ಜನ್ಮ ದಿನಾಂಕ ಹಾಗೂ ವರ್ಷವನ್ನು ಪರಿಗಣಿಸಿ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಆದರೆ ಈಗ ಜನ್ಮ ವರ್ಷವನ್ನು ಪರಿಗಣನೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಒಂದೇ ತರಗತಿಯಲ್ಲಿ ಓದುವ ಮಕ್ಕಳಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 8 ಲಕ್ಷ ಮಕ್ಕಳು ಮೊದಲ ಡೋಸ್ ಪಡೆಯದೆ ವಂಚಿತರಾಗಿದ್ದಾರೆ. ಹೀಗಾಗಿ ಮಾರ್ಗಸೂಚಿ ಬದಲಾವಣೆಗೆ ಪೋಷಕರು ಒತ್ತಾಯಿಸುತ್ತಿದ್ದಾರೆ.

514 ಜನರಿಗೆ ಕೊರೊನಾ ಸೋಂಕು: ರಾಜ್ಯದಲ್ಲಿ ನಿನ್ನೆ (ಫೆಬ್ರವರಿ 26) ಹೊಸದಾಗಿ 514 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,40,429 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 38,93,532 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 19 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 39,919 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 6,940 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ

ಮದುವೆ ಯಾವಾಗ ಎಂದು ಪದೇಪದೇ ಕೇಳಿದ್ದಕ್ಕೆ ಆಲಿಯಾ ಕೊಟ್ಟ ಉತ್ತರ ಏನು?

ರೊಮೇನಿಯಾದ ಬುಕಾರೆಸ್ಟ್​ನಿಂದ ಭಾರತಕ್ಕೆ ಹೊರಟ 2ನೇ ವಿಮಾನ; 250 ವಿದ್ಯಾರ್ಥಿಗಳನ್ನು ಹೊತ್ತು ದೆಹಲಿಯತ್ತ ವಿಮಾನ ಹಾರಾಟ

Published On - 8:58 am, Sun, 27 February 22