ರೊಮೇನಿಯಾದ ಬುಕಾರೆಸ್ಟ್ನಿಂದ ಭಾರತಕ್ಕೆ ಹೊರಟ 2ನೇ ವಿಮಾನ; 250 ವಿದ್ಯಾರ್ಥಿಗಳನ್ನು ಹೊತ್ತು ದೆಹಲಿಯತ್ತ ವಿಮಾನ ಹಾರಾಟ
ಉಕ್ರೇನ್ ಸೂಪರ್ ಮಾರ್ಕೆಟ್‌ಗಳಲ್ಲಿ ಸಾಮಾಗ್ರಿಗಳು ಖಾಲಿ ಆಗಿವೆ. ಸೂಪರ್ ಮಾರ್ಕೆಟ್‌ನಲ್ಲಿ ಆಹಾರ ಸಾಮಗ್ರಿಗಳು ಖಾಲಿ ಖಾಲಿ ಆಗಿರುವ ಹಿನ್ನೆಲೆ ಆಹಾರ ಸಿಗದೇ ಮಾರ್ಕೀವ್ನಲ್ಲಿ ನಿವಾಸಿಗಳ ಪರದಾಟ ಕಂಡುಬಂದಿದೆ.
ದೆಹಲಿ: ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ಮಧ್ಯೆ ಉಕ್ರೇನ್‌ನಲ್ಲಿ ಕರ್ನಾಟಕದ ಜನರೂ ಸೇರಿ ಭಾರತದ ವಿವಿಧ ಭಾಗಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಒಂದು ವಿಮಾನ ಮಧ್ಯಾಹ್ನ ಹೊರಟು ಸಂಜೆಗಾಗಲೇ ಮುಂಬೈ ತಲುಪಿದೆ. ಇದೀಗ ರೊಮೇನಿಯಾದ ಬುಕಾರೆಸ್ಟ್ನಿಂದ 2ನೇ ವಿಮಾನ ಹೊರಟಿದೆ. 250 ವಿದ್ಯಾರ್ಥಿಗಳನ್ನ ಹೊತ್ತು ದೆಹಲಿಯತ್ತ ವಿಮಾನ ಹಾರಾಟ ಆರಂಭಿಸಿದೆ. ಏರ್ ಇಂಡಿಯಾ ವಿಮಾನ ನಾಳೆ ದೆಹಲಿಗೆ ಬಂದಿಳಿಯಲಿದೆ.
ಯುದ್ಧದಿಂದ ಉಕ್ರೇನ್‌ನಲ್ಲಿ ಊಟಕ್ಕಾಗಿ ಜನರ ಪರದಾಟ ಉಂಟಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಉಕ್ರೇನ್ ಸೂಪರ್ ಮಾರ್ಕೆಟ್‌ಗಳಲ್ಲಿ ಸಾಮಾಗ್ರಿಗಳು ಖಾಲಿ ಆಗಿವೆ. ಸೂಪರ್ ಮಾರ್ಕೆಟ್‌ನಲ್ಲಿ ಆಹಾರ ಸಾಮಗ್ರಿಗಳು ಖಾಲಿ ಖಾಲಿ ಆಗಿರುವ ಹಿನ್ನೆಲೆ ಆಹಾರ ಸಿಗದೇ ಮಾರ್ಕೀವ್ನಲ್ಲಿ ನಿವಾಸಿಗಳ ಪರದಾಟ ಕಂಡುಬಂದಿದೆ.
ಅಷ್ಟೇ ಅಲ್ಲದೆ, ಹಾಸ್ಟೆಲ್‌ಗಳಿಂದ ಗಡಿಗಳನ್ನ ತಲುಪಲು ಕರ್ನಾಟಕದ ವಿಧ್ಯಾರ್ಥಿಗಳು ಪರದಾಟ ಪಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಸೂಚನೆಯಂತೆ ಪೋಲ್ಯಾಂಡ್ ಗಡಿಗೆ ಬರಲು ಜನರು ಒದ್ದಾಡುವಂತಾಗಿದೆ. ಉಕ್ರೇನ್ ಬಾರ್ಡರ್‌ನಲ್ಲಿ ಇಂಡಿಯನ್ ವಿಧ್ಯಾರ್ಥಿಗಳನ್ನ ಬಿಡುತ್ತಿಲ್ಲ . ಕೇವಲ ಉಕ್ರೇನ್‌ನವರನ್ನ ಮಾತ್ರ ಬಾರ್ಡರ್‌ಗಳಲ್ಲಿ ಬಿಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಮಗೆ ಭಾರತ ಎಂಬಸಿ ಕಡೆಯಿಂದ ಸೂಕ್ತ ಮಾಹಿತಿ ದೊರೆಯುತ್ತಿಲ್ಲ. ಇಲ್ಲಿ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿ ಕಿಲೋಮೀಟರ್ ಗಟ್ಟಲೆ ರಸ್ತೆಗಳು ಟ್ರಾಫಿಕ್ ಜಾಂ ಆಗಿವೆ. ಟೆಂಟ್‌ಗಳಲ್ಲಿ ಉಕ್ರೇನಿಯರು ನಮ್ಮನ್ನ ಹೊರಗೆ ಕಳಿಸ್ಥಾರೆ. ಈ ಚಳಿಯಲ್ಲಿ ನಾವು ಎಲ್ಲಿಗೆ ಹೋಗೋದು ಎಂದು ಗೊತ್ತಾಗುತ್ತಿಲ್ಲ. ನಮಗೆ ದಯವಿಟ್ಟು ಸಹಾಯ ಮಾಡಿ ಎಂದು ಬೆಂಗಳೂರಿನ ಮಲ್ಲಸಂದ್ರ ಮೂಲದ, ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿ ಮದನ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಚಿತ್ರದುರ್ಗ ವಿದ್ಯಾರ್ಥಿನಿ ಸುನೇಹಾಳನ್ನು ಸುರಕ್ಷಿತವಾಗಿ ಕರೆತರುವಂತೆ ಪೋಷಕರು ಮನವಿ ಮಾಡಿದ್ದಾರೆ. ಟಿವಿ9 ಬಳಿ ವಿದ್ಯಾರ್ಥಿನಿ ಸುನೇಹಾ ತಂದೆ ತಿಪ್ಪೇಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಉಕ್ರೇನ್ನ ಕೀವ್ ನಗರದಿಂದ ರಾತ್ರಿಯೇ ಸುನೇಹಾ ಪ್ರಯಾಣ ಮಾಡುತ್ತಿದ್ದಾರೆ. ಸುನೇಹಾ, ರಚನಾ, ಪ್ರವೀಣ್ ಹಾಗೂ ಕುಟುಂಬ ಪ್ರಯಾಣ ಮಾಡುತ್ತಿದ್ದಾರೆ. ಖಾಸಗಿ ಕಾರಿನಲ್ಲಿ ಸುಮಾರು 500 ಕಿಲೋ ಮೀಟರ್ ಪ್ರಯಾಣ ಮಾಡಿ, ಲಿವಿವ್ ತಲುಪಿರುವ ವಿದ್ಯಾರ್ಥಿನಿ ಸುನೇಹಾ, ಕುಟುಂಬಸ್ಥರು ತಲುಪಿದ್ದಾರೆ. ಹಣವಿಲ್ಲದೇ ಸುನೇಹಾ, ಇತರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿನಿಯರು ತೀವ್ರ ಭಯ ಭೀತಿಗೆ ಒಳಗಾಗಿದ್ದಾರೆ. ದಯವಿಟ್ಟು ಸುನೇಹಾ ಇತರರನ್ನ ಸುರಕ್ಷಿತವಾಗಿ ಕರೆತನ್ನಿ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಎಂಬಿಬಿಎಸ್ ವ್ಯಾಸಂಗಕ್ಕೆ ಉಕ್ರೇನ್ಗೆ ತೆರಳಿರುವ ಚಂದನ್, ಮೂರು ತಿಂಗಳ ಹಿಂದೆ ಉಕ್ರೇನ್ಗೆ ತೆರಳಿದ್ದಾರೆ. ಸದ್ಯ ಯಾವುದೇ ಭಯ ಇಲ್ಲ ಎಂದು ಚಂದನ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಕ್ರೇನ್‌ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿ, ಉಕ್ರೇನ್ನಲ್ಲಿರುವ ಮುಂಡಗೋಡ ಮೂಲದ ವಿದ್ಯಾರ್ಥಿನಿ ಸ್ನೇಹಾ ಉಕ್ರೇನ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ಸ್ನೇಹಾ ಮನವಿ ಮಾಡಿದ್ದಾರೆ. ನಮ್ಮ ಸುತ್ತಮುತ್ತ ಏರಿಯಾದಲ್ಲಿ ಬಾಂಬ್ ಸ್ಫೋಟವಾಗುತ್ತಿವೆ. ಆದಷ್ಟು ಬೇಗ ನಮ್ಮನ್ನು ಕರೆಸಿಕೊಳ್ಳಿ ಎಂದು ಸ್ನೇಹಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Ukraine Updates: ಉಕ್ರೇನ್ ದೇಶದ ನೆರವಿಗೆ ನಿಂತ ಅಮೆರಿಕ, ಭಾರತದ 219 ವಿದ್ಯಾರ್ಥಿಗಳಿದ್ದ ವಿಮಾನ ಮುಂಬೈಗೆ ಆಗಮನ
ಇದನ್ನೂ ಓದಿ: Russia-Ukraine War: ಮದುವೆಯಾದ ಮರುದಿನವೇ ಉಕ್ರೇನ್ ಸೇನೆ ಸೇರಿದ ದಂಪತಿ; ಫೋಟೋಗಳು ವೈರಲ್
Published On - 10:18 pm, Sat, 26 February 22