Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮನೆ ಬಿಟ್ಟು ಹೋದ ಹೆಂಡತಿಯನ್ನು ತಬ್ಬಿಕೊಂಡು ಜಿಲೆಟಿನ್ ಸ್ಫೋಟಿಸಿದ ಗಂಡ; ಇಬ್ಬರ ದೇಹವೂ ಛಿದ್ರ ಛಿದ್ರ!

Crime News: ಗುಜರಾತಿನ ಅರ್ವಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಈ ಸ್ಫೋಟದಲ್ಲಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ.

Shocking News: ಮನೆ ಬಿಟ್ಟು ಹೋದ ಹೆಂಡತಿಯನ್ನು ತಬ್ಬಿಕೊಂಡು ಜಿಲೆಟಿನ್ ಸ್ಫೋಟಿಸಿದ ಗಂಡ; ಇಬ್ಬರ ದೇಹವೂ ಛಿದ್ರ ಛಿದ್ರ!
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 26, 2022 | 5:47 PM

ಅಹಮದಾಬಾದ್: ತನ್ನನ್ನು ಬಿಟ್ಟು ಹೋಗಿದ್ದ ಪತ್ನಿಯನ್ನು ತನ್ನೊಂದಿಗೆ ಮತ್ತೆ ಸಂಸಾರ ಮಾಡುವಂತೆ ಮನವೊಲಿಸಲು ಸಾಧ್ಯವಾಗದೆ ಗುಜರಾತ್‌ನ ಅರಾವಳಿ ಜಿಲ್ಲೆಯ ವ್ಯಕ್ತಿಯೊಬ್ಬರು ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ ಅವರಿಗೆ ತನ್ನ ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಕೆಯ ಮನವೊಲಿಸಿ ಮನೆಗೆ ವಾಪಾಸ್ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ಆಕೆ ಒಪ್ಪದಿದ್ದಾಗ ಕೊನೆಯ ಬಾರಿಗೆ ನಿನ್ನನ್ನು ತಬ್ಬಿಕೊಳ್ಳಬೇಕೆಂದು ಆಕೆಯ ಬಳಿ ತನ್ನ ಆಸೆಯನ್ನು ಹೇಳಿಕೊಂಡಿದ್ದರು. ಅದಕ್ಕೆ ಒಪ್ಪಿದ ಆಕೆಯನ್ನು ಅಪ್ಪಿಕೊಳ್ಳುವಾಗ ಸ್ಫೋಟಕವನ್ನು (Explosive) ಸ್ಫೋಟಿಸಿದ್ದಾರೆ. ಇದರಿಂದ ಅವರಿಬ್ಬರ ದೇಹ ಛಿದ್ರ ಛಿದ್ರವಾಗಿದೆ.

ಗುಜರಾತಿನ ಅರ್ವಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಈ ಸ್ಫೋಟದಲ್ಲಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮೊಡಸಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಮೇಘರಾಜ್ ತಾಲೂಕಿನ ಬಿಟಿ ಛಪ್ರಾ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾಲಾ ಪಾಗಿ (47) ಎಂಬಾತ ಕೆಲವು ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಸ್ವಿಚ್ ಮತ್ತು ಸಂಪರ್ಕದ ತಂತಿಗಳನ್ನು ತನ್ನ ದೇಹಕ್ಕೆ ಸುತ್ತಿಕೊಂಡು ತನ್ನ ಅತ್ತೆಯ ಮನೆಗೆ ಹೋಗಿದ್ದರು. ಅಲ್ಲಿ ಅವನು ತನ್ನ ಹೆಂಡತಿ ಶಾರದಾಬೆನ್ (43)ಳನ್ನು ತಬ್ಬಿಕೊಂಡು ಡಿಟೋನೇಟರ್ ಸ್ವಿಚ್ ಒತ್ತಿ, ಸ್ಫೋಟಿಸಿದ್ದಾರೆ. ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಹೆಂಡತಿಯ ಮೇಲೆ ಕೋಪಗೊಂಡಿದ್ದ ಪಾಗಿ ಆಕೆಯನ್ನು ಮನೆಗೆ ವಾಪಾಸ್ ಕರೆತರಲು ವಿಫಲರಾಗಿದ್ದರು

ಕಟ್ಟಡ ಕಾರ್ಮಿಕನಾಗಿರುವ ಪಾಗಿ, ಮೊಡಸ ತಾಲೂಕಿನ ಮುಳೋಜ್ ಗ್ರಾಮದವರಾಗಿದ್ದು, ಕಳೆದ 20 ವರ್ಷಗಳ ಹಿಂದೆ ಶಾರದಾಬೆನ್ ಎಂಬುವರನ್ನು ಮದುವೆಯಾಗಿದ್ದರು. ಹೆಂಡತಿಗೆ ಪದೇಪದೆ ಥಳಿಸುತ್ತಿದ್ದರಿಂದ ಆಕೆ ಕಳೆದ ಒಂದು ತಿಂಗಳಿನಿಂದ ತನ್ನ ಪೋಷಕರ ಮನೆಯಲ್ಲಿ ವಾಸವಾಗಿದ್ದರು. ಜಿಲೆಟಿನ್ ಕಡ್ಡಿಗಳು ಕಡಿಮೆ ತೀವ್ರತೆಯ ಸ್ಫೋಟಗಳನ್ನು ಮಾಡುವ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಗಣಿಗಾರಿಕೆ ವಲಯದಲ್ಲಿ ಬಾವಿಗಳನ್ನು ಅಗೆಯಲು ಬಳಸಲಾಗುವ ಅಗ್ಗದ ಸ್ಫೋಟಕ ವಸ್ತುಗಳಾಗಿವೆ.

ಶಾರದಾಬೆನ್ ತನ್ನ ಮನೆಯಿಂದ ಹೊರಬಂದ ತಕ್ಷಣ, ಆಕೆಯನ್ನು ಕೊನೆಯ ಬಾರಿ ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸಿದ ಪಾಗಿ ಆಕೆಯನ್ನು ತಬ್ಬಿಕೊಂಡು ಡಿಟೋನೇಟರ್ ಸ್ವಿಚ್ ಒತ್ತಿದ್ದಾರೆ. ಇದರಿಂದ ಸ್ಫೋಟ ಉಂಟಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾವು ಪಾಗಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದೇವೆ. ನಾವು ಸ್ಫೋಟಕಗಳ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Shocking News: ಪಾತ್ರೆ ತೊಳೆದಿಲ್ಲವೆಂದು ಬೈದಿದ್ದಕ್ಕೆ ಅಮ್ಮನನ್ನೇ ಬಾಣಲೆಯಿಂದ ಹೊಡೆದು ಕೊಂದ ಮಗಳು!

Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!

ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ