ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ (Union health ministry)ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 33,750 ಹೊಸ ಪ್ರಕರಣಗಳನ್ನು ದಾಖಲಿಸಿದ ನಂತರ ಭಾರತವು ಸೋಮವಾರ ಸತತ ಆರನೇ ದಿನಕ್ಕೆ ಕೊರೊನಾವೈರಸ್ (Coronavirus) ಸೋಂಕುಗಳಲ್ಲಿ ತೀವ್ರ ಏರಿಕೆಯನ್ನು ವರದಿ ಮಾಡಿದೆ. ಒಂದು ದಿನದ ಹಿಂದೆ 27,553 ಹೊಸ ಕೊವಿಡ್ -19 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,582 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಹೆಚ್ಚು ಹರಡುವ ಒಮಿಕ್ರಾನ್ (Omicron) ರೂಪಾಂತರದ ದೃಢಪಡಿಸಿದ ಸೋಂಕುಗಳ ಸಂಖ್ಯೆ 1,700 ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ 510 ಪ್ರಕರಣಗಳು ಪತ್ತೆಯಾಗಿದ್ದು ದೆಹಲಿಯು 351 ಪ್ರಕರಣಗಳೊಂದಿಗೆ ಎರಡನೇ ಅತಿ ಸ್ಥಾನದಲ್ಲಿದೆ. ಕೇರಳ (156), ಗುಜರಾತ್ (136) ಮತ್ತು ತಮಿಳುನಾಡು (121) ನಂತರದ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ದೇಶವು 123 ಕೊವಿಡ್-ಸಂಬಂಧಿತ ಸಾವುಗಳನ್ನು ಕಂಡಿದೆ. ಹಿಂದಿನ ದಿನದ 284 ಪ್ರಕರಣಗಳಿಗೆ ಹೋಲಿಸಿದರೆ ಇವತ್ತು 161 ಸಾವು ಪ್ರಕರಣಗಳ ಕುಸಿತ ಕಂಡು ಬಂದಿದೆ. ದೇಶದಲ್ಲಿ ಈಗ ಒಟ್ಟು 4,81,893 ಕೊವಿಡ್ ಸಂಬಂಧಿ ಸಾವು ವರದಿ ಆಗಿದೆ. 123 ಹೊಸ ಸಾವು ಪ್ರಕರಣಗಳಲ್ಲಿ ಕೇರಳದಿಂದ 78 ಮತ್ತು ಮಹಾರಾಷ್ಟ್ರದ ಒಂಬತ್ತು ಮಂದಿ ಸೇರಿದ್ದಾರೆ.
ಮಹಾರಾಷ್ಟ್ರದಿಂದ 1,41,542, ಕೇರಳದಿಂದ 48,113, ಕರ್ನಾಟಕದಿಂದ 38,346, ತಮಿಳುನಾಡಿನಿಂದ 36,790, ದೆಹಲಿಯಿಂದ 25,109, ಉತ್ತರ ಪ್ರದೇಶದಿಂದ 22,916 ಮತ್ತು ಪಶ್ಚಿಮ ಬಂಗಾಳದಿಂದ 19,781 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 4,81,893 ಸಾವುಗಳು ವರದಿಯಾಗಿವೆ.70 ಕ್ಕಿಂತ ಹೆಚ್ಚು ಸಾವುಗಳು ಕೊಮೊರ್ಬಿಡಿಟಿಗಳಿಂದ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿ ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಕಾಯಿಲೆಯಿಂದ 10,846 ಜನರು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆ ದೇಶದಲ್ಲಿ ಒಟ್ಟು 3,42,95,407 ರೋಗಗಳು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ 1 ಶೇಕಡಾ (0.42) ಕ್ಕಿಂತ ಕಡಿಮೆಯಿದ್ದುಚೇತರಿಕೆ ದರವು ಪ್ರಸ್ತುತ ಶೇಕಡಾ 98.20 ರಷ್ಟಿದೆ. ಚಾಲ್ತಿಯಲ್ಲಿರುವ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶಾದ್ಯಂತ 145.68 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ದೇಶದಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ದೇಶದಲ್ಲಿ ಸಾಪ್ತಾಹಿಕ ಧನಾತ್ಮಕತೆಯ ದರವು ಪ್ರಸ್ತುತ 1.68 ಪ್ರತಿಶತ ಮತ್ತು ದೈನಂದಿನ ಧನಾತ್ಮಕತೆಯ ದರವು 3.84 ಪ್ರತಿಶತದಷ್ಟಿದೆ.
ಏತನ್ಮಧ್ಯೆ, ಭಾರತವು 15-18 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಕೊವಿಡ್ -19 ರೋಗದ ವಿರುದ್ಧ ಲಸಿಕೆಯನ್ನು ಪ್ರಾರಂಭಿಸಿದೆ. ಭಾರತ್ ಬಯೋಟೆಕ್‌ನ ಸ್ವದೇಶಿ ನಿರ್ಮಿತ ಲಸಿಕೆ ‘ಕೊವಾಕ್ಸಿನ್’ ಅನ್ನು ಪ್ರಸ್ತುತ ಈ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ.
Ten new cases of Omicron have been confirmed in Karnataka on Jan 2nd taking the tally to 76:
? Bengaluru: 8 cases (of which 5 are international travellers)
?Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviya— Dr Sudhakar K (@mla_sudhakar) January 3, 2022
ಕರ್ನಾಟಕದಲ್ಲಿ 10 ಒಮಿಕ್ರಾನ್ ಪ್ರಕರಣ ಪತ್ತೆ
ಕೊರೊನಾವೈರಸ್ ಒಮಿಕ್ರಾನ್ ರೂಪಾಂತರದ ಹತ್ತು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ ಎಂದು ರಾಜ್ಯದ ಆರೋಗ್ಯ ಸಚಿವ ಕೆ ಸುಧಾಕರ್ ಸೋಮವಾರ ತಿಳಿಸಿದ್ದಾರೆ. ಇದೀಗ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 76 ಕ್ಕೆ ತಲುಪಿದೆ.
#WATCH | #Omicron spreads fast but causes very mild disease. The virus has weakened. It is like viral fever but precautions are necessary. However, there is no need to panic: UP Chief Minister Yogi Adityanath pic.twitter.com/bpepHZzRwz
— ANI UP/Uttarakhand (@ANINewsUP) January 3, 2022
ಒಮಿಕ್ರಾನ್ ಬಗ್ಗೆ ಭಯಪಡುವ ಅಗತ್ಯವಿಲ್ಲ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೊರೊನಾವೈರಸ್‌ನ ಒಮಿಕ್ರಾನ್ ರೂಪಾಂತರವು ಸೌಮ್ಯವಾಗಿದೆ ಎಂದು ಸೋಮವಾರ ಹೇಳಿದ್ದಾರೆ. ಆದಾಗ್ಯೂ, ಯಾವುದೇ ಕಾಯಿಲೆಯ ದೃಷ್ಟಿಯಿಂದ ಎಚ್ಚರವಾಗಿರುವುದು ಅವಶ್ಯಕ, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. “ವೈರಸ್ ಅಬ್ ಕಾಮ್ಜೋರ್ ಪಡ್ ಚುಕಾ ಹೈ (ವೈರಸ್ ಈಗ ದುರ್ಬಲಗೊಂಡಿದೆ)” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಚಿತ ಲಸಿಕೆ: ಇಂದಿನಿಂದ ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊವಿಡ್ ಲಸಿಕೆ ಅಭಿಯಾನ
Published On - 11:20 am, Mon, 3 January 22