ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,093 ಮಂದಿ ಕೊರೊನಾ(Corona) ಸೋಂಕಿತರು ಪತ್ತೆಯಾಗಿದ್ದಾರೆ, ಭಾನುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,093 ಹೊಸ ಕೊರೊನಾಸೋಂಕುಗಳು ದಾಖಲಾಗಿವೆ. ಶನಿವಾರ, ಭಾರತದಲ್ಲಿ 10,753 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿತ್ತು. ಶುಕ್ರವಾರ ದೇಶದಲ್ಲಿ 11,109 ಮಂದಿಗೆ ಕೊರೊನಾ ಸೋಂಕು ತಗುಲಿತ್ತು.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57,542 ಆಗಿದೆ, ಮಹಾರಾಷ್ಟ್ರದಲ್ಲಿ ಹೊಸದಾಗಿ 660 ಮಂದಿಗೆ ಸೋಂಕು ತಗುಲಿದೆ, ಒಂದು ದಿನದ ಹಿಂದೆ 1152 ಮಂದಿಗೆ ಸೋಂಕು ತಗುಲಿತ್ತು. ಎರಡು ಸಾವುಗಳು ದಾಖಲಾಗಿತ್ತು. ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡ ಬಳಿಕ ಕಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕು(Coronovirus) ಅಂತ್ಯವಾಗುವಂತೆ ಕಾಣುತ್ತಿಲ್ಲ, ಕೆಲವು ತಿಂಗಳ ಕಾಲ ಕಡಿಮೆಯಾಗಿದ್ದ ಸೋಂಕು ಮತ್ತೆ ವೇಗವಾಗಿ ಹರಡುತ್ತಿದೆ. ಡೆಲ್ಟಾ, ಓಮಿಕ್ರಾನ್ ನಂತರ ಈಗ ಹೊಸ ರೂಪಾಂತರವು ಜನ್ಮ ತಳೆದಿದೆ ಅದರ ಹೆಸರು ಆರ್ಕ್ಟರಸ್ (XBB.1.16) Arcturus. ಇದು ಓಮಿಕ್ರಾನ್ಗಿಂತ ಸಾಕಷ್ಟು ಭಿನ್ನವಾದ ಲಕ್ಷಣಗಳನ್ನು ಹೊಂದಿದೆ. ಇದು ಯುಎಸ್, ಸಿಂಗಾಪುರ್, ಆಸ್ಟ್ರೇಲಿಯಾದಂತಹ ಹಲವು ದೇಶಗಳಲ್ಲಿ ಕಂಡುಬಂದಿದೆ.
ಮತ್ತಷ್ಟು ಓದಿ: New Covid Variant Arcturus: ಕೋವಿಡ್ನ ಈ ಹೊಸ ರೂಪಾಂತರಿ ಹಲವು ಪಟ್ಟು ವೇಗವಾಗಿ ಹರಡುತ್ತಂತೆ, ಲಕ್ಷಣಗಳೂ ಭಿನ್ನ
ಇದು ಇಲ್ಲಿಯವರೆಗೆ ವೇಗವಾಗಿ ಹರಡುತ್ತಿರುವ ರೂಪಾಂತರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ರೂಪಾಂತರಿಯು ವಿಪರೀತ ಜ್ವರ, ನೆಗಡಿ, ತುರಿಕೆ, ಕಣ್ಣು ಕೆಂಪಗಾಗುವುದು, ಕಿರಿಕಿರಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ ಕಮಿಟಿಯ ಡಾ. ವಿಪಿನ್ ಹೇಳಿದ್ದಾರೆ. ಈ ಹೊಸ ರೂಪಾಂತರವು ಇತರ ರೂಪಾಂತರಗಳಿಗಿಂತ 1.17 ರಿಂದ 1.27 ಪಟ್ಟು ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮತ್ತೆ ಎಲ್ಲಾ ದೇಶಗಳಲ್ಲಿಯೂ ಕೊರೊನಾ ಸೋಂಕು ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ