Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು

|

Updated on: Apr 25, 2021 | 10:57 AM

Covid19 in India: ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ದೇಶದಲ್ಲಿ 2,767 ಸಾವು ಸಂಭವಿಸಿದ್ದು 2,17,113 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 26,82,751 ಸಕ್ರಿಯ ಪ್ರಕರಣಗಳಿದ್ದು, ಕೊವಿಡ್ ರೋಗಿಗಳ ಸಂಖ್ಯೆ 1,69,60,172ಕ್ಕೇರಿದೆ.

Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು
ನವದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಲು ಬಂದ ರೋಗಿಗಳು
Follow us on

ದೆಹಲಿ: ಭಾರತದಲ್ಲಿ ಸತತ ನಾಲ್ಕನೇ ದಿನವೂ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು ಕಳೆದ 24 ಗಂಟೆಗಳಲ್ಲಿ 3,49,691 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ದೇಶದಲ್ಲಿ 2,767 ಸಾವು ಸಂಭವಿಸಿದ್ದು 2,17,113 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 26,82,751 ಸಕ್ರಿಯ ಪ್ರಕರಣಗಳಿದ್ದು, ಕೊವಿಡ್ ರೋಗಿಗಳ ಸಂಖ್ಯೆ 1,69,60,172ಕ್ಕೇರಿದೆ. ಇಲ್ಲಿಯವರೆಗೆ 1,92,311 ಮಂದಿ ಸಾವಿಗೀಡಾಗಿದ್ದು, 1,40,85,110 ಮಂದಿ ಚೇತರಿಸಿಕೊಂಡಿದ್ದಾರೆ. 14,09,16,417 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್ 22 ರಂದು ಮೊದಲ ಬಾರಿ ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷದಾಟಿತ್ತು. ಆ ದಿನ ಸೋಂಕಿತರ ಸಂಖ್ಯೆ 3,14,835 ವರದಿ ಆಗಿದ್ದು ಜಗತ್ತಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ದಾಖಲೆಯಾಗಿತ್ತು.


ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ 45 ಹೊಸ ಕೊವಿಡ್ ಪ್ರಕರಣ ಪತ್ತೆ
ಅಂಡಮಾನ್ ಮತ್ತು ನಿಕೊಬಾರ್ ದ್ಪೀಪಗಳಲ್ಲಿ 45 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5,614ಕ್ಕೇರಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ಶನಿವಾರ ಇಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 66ಕ್ಕೇರಿದೆ.


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 11,60,472 ಸೋಂಕಿತರಿದ್ದು ಸಾವಿನ ಸಂಖ್ಯೆ 5028 ಆಗಿದೆ .ಅದೇ ವೇಳೆ ಆಂಧ್ರ ಪ್ರದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 922977 ಕ್ಕೇರಿದ್ದು 7541 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 934966 ಆಗಿದ್ದು, 13317 ಮಂದಿ ಸಾವಿಗೀಡಾಗಿದ್ದಾರೆ.


ಅತೀ ಹೆಚ್ಚು ಸೋಂಕಿತರಿರುವ ಮಹಾರಾಷ್ಟ್ರದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 3330747 ಆಗಿದ್ದು 62479 ಮಂದಿ ಅಸುನೀಗಿದ್ದಾರೆ. ಮಧ್ಯ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 369375, ಸಾವಿನ ಸಂಖ್ಯೆ 4863. ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 706414 ಆಗಿದ್ದು 10541 ಮಂದಿ ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳಳದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 621340ಕೇರಿದ್ದು, 10766 ಮಂದಿ ಸಾವಿಗೀಡಾಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ಪ್ರಕಾರ ಏಪ್ರಿಲ್ 24ರಂದು 27,79,18,810 ಮಾದರಿಗಳನ್ನುಕೊವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

ಇದನ್ನೂ ಓದಿ:  ಕೊವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; 27 ರೋಗಿಗಳು ಸಾವು, 90ಕ್ಕೂ ಹೆಚ್ಚು ಜನರ ರಕ್ಷಣೆ

Karnataka Covid Update: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 29,438 ಜನರಿಗೆ ಕೊರೊನಾ ದೃಢ, 208 ಜನರ ಸಾವು

(India reports 3,49,691 new COVID19 cases and 2,767 deaths in the last 24 hours)

Published On - 10:39 am, Sun, 25 April 21