Petrol Diesel Price: ಸತತ 10 ದಿನಗಳಿಂದ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​, ಡೀಸೆಲ್ ದರ; ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ!

Petrol Diesel Rate Today in Bangalore: ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್​ ಪೆಟ್ರೋಲ್ ದರದಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 14 ಪೈಸೆ ಕಡಿತಗೊಳಿಸಿದ್ದವು. ಅದಾದ ನಂತರದಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 40 ಪೈಸೆ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್ ದರ 80 ರೂಪಾಯಿ 73 ಪೈಸೆ ಆಗಿದೆ.

Petrol Diesel Price: ಸತತ 10 ದಿನಗಳಿಂದ ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್​, ಡೀಸೆಲ್ ದರ; ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ!
ಸಾಂದರ್ಭಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on:Apr 25, 2021 | 9:09 AM

ಬೆಂಗಳೂರು: ಸತತವಾಗಿ 10 ನೇ ದಿನವೂ ಪೆಟ್ರೋಲ್, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿಯೂ ಪೆಟ್ರೋಲ್​, ಡೀಸೆಲ್​ ದರ ಸ್ಥಿರವಾಗಿದೆ. ಹಿಂದಿನ ವಾರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್​ ಪೆಟ್ರೋಲ್ ದರದಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 14 ಪೈಸೆ ಕಡಿತಗೊಳಿಸಿದ್ದವು. ಅದಾದ ನಂತರದಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 40 ಪೈಸೆ ಆಗಿದೆ. ಅದೇ ರೀತಿ ಪ್ರತಿ ಲೀಟರ್​ ಡೀಸೆಲ್ ದರ 80 ರೂಪಾಯಿ 73 ಪೈಸೆ ಆಗಿದೆ.

ಮುಂಬೈ ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96 ರೂಪಾಯಿ 83 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 87 ರೂಪಾಯಿ 81 ಪೈಸೆಯಷ್ಟಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92 ರೂಪಾಯಿ 43 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85 ರೂಪಾಯಿ 75 ಪೈಸೆ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರವನ್ನು ಗಮನಿಸಿದಾಗ 90 ರೂಪಾಯಿ 20 ಪೈಸೆಯಷ್ಟಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 83 ರೂಪಾಯಿ 61 ಪೈಸೆ ಇದೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88 ರೂಪಾಯಿ 79 ಪೈಸೆ ಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81 ರೂಪಾಯಿ 19 ಪೈಸೆ ಇದೆ.

ಭೂಪಾಲ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 98 ರೂಪಾಯಿ 41 ಪೈಸೆ ಇದೆ. ಪ್ರತಿ ಲೀಟರ್​ ಡೀಸೆಲ್​ ದರ 88 ರೂಪಾಯಿ 98 ಪೈಸೆಯಷ್ಟಿದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಅನ್ನು 93 ರೂಪಾಯಿ 43 ಪೈಸೆ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ ದರ 85 ರೂಪಾಯಿ 60 ಪೈಸೆ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಅನ್ನು ಗ್ರಾಹಕರು 88 ರೂಪಾಯಿ 72 ಪೈಸೆ ಕೊಟ್ಟು ಕೊಳ್ಳುತ್ತಿದ್ದಾರೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ಅನ್ನು 81 ರೂಪಾಯಿ 13 ಪೈಸೆ ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.

ಏಪ್ರಿಲ್​ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್​ ದರವನ್ನು ಬದಲಾವಣೆ ಮಾಡಿರಲಿಲ್ಲ. 15 ದಿನಗಳ ನಂತರ ಗುರುವಾರ ಮೊದಲಬಾರಿಗೆ ಕಡಿತ ಕಂಡಿತು. ಅದಕ್ಕೂ ಮೊದಲು ಮಾರ್ಚ್​ ತಿಂಗಳ ಕೊನೆಯ 30ನೇ ತಾರೀಕಿನಂದು ಕಡಿತಗೊಳಿಸಲಾಗಿತ್ತು. ಕಾರಣವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿರುವುದು. ಮೊದಲು ಸತತವಾಗಿ ಏರುತ್ತಲೇ ಇದ್ದ ಇಂಧನ ದರವನ್ನು ನೋಡುತ್ತಿದ್ದ ಗ್ರಾಹಕರು ಬೇಸತ್ತಿದ್ದರು. ಇದೀಗ ನಿಧಾನವಾಗಿ ಇಂಧನ ದರ ಇಳಿಕೆಯತ್ತ ಮುಖ ಮಾಡುವಂತೆ ಅನಿಸಿತ್ತು. ಆದರೀಗ ಏಪ್ರಿಲ್​ ತಿಂಗಳಿನಲ್ಲಿ ಕೊಂಚ ದರ ಇಳಿಕೆಯಾಗಿದ್ದರೂ ನಂತರದಲ್ಲಿ ಸತತ 10 ದಿನಗಳಾದರೂ ದರ ಕುಸಿತ ಕಂಡಿಲ್ಲ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್​, ಡೀಸೆಲ್​ ದರ 16 ಬಾರಿ ಏರಿಕೆ ಕಂಡಿತ್ತು. ನಂತರ ಕಳೆದ ಮಾರ್ಚ್​ ತಿಂಗಳಿನಲ್ಲಿ ಪೆಟ್ರೋಲ್​, ಡೀಸೆಲ್ ದರ ಗಮನಿಸಿದಾಗ ಮೂರು ಬಾರಿ ದರವನ್ನು ಕಡಿತಗೊಳಿಸಲಾಗಿತ್ತು. ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿದರೆ ದಿನೇ ದಿನೇ ಏರುತ್ತದೆ, ಆದರೆ ಇಳಿಕೆ ಕಂಡುಬರುವಾಗ ಮಾತ್ರ ನಿಧಾನ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಪೆಟ್ರೋಲ್​, ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇದೆ.

ವಿವಿಧ ನಗರದ ಪೆಟ್ರೋಲ್​ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 9:08 am, Sun, 25 April 21