ತೀರ್ಪು ನೀಡುವಾಗ ‘ಜಾಮೀನು ಅಲ್ಲ, ಜೈಲು‘ ಎಂಬ ತತ್ವವನ್ನು ಪಾಲಿಸಿ; ಹೈಕೋರ್ಟ್​ಗಳಿಗೆ ಸುಪ್ರೀಂಕೋರ್ಟ್ ಸೂಚನೆ

ದರೋಡೆಕೋರರು, ಶಾರ್ಪ್​ಶೂಟರ್​ಗಳು ಮತ್ತು ಅಪರಾಧಿಗಳಿಗೆ ಅನ್ವಯ ಆಗುವಂತೆ ಜಾಮೀನು ಅಲ್ಲ ಜೈಲು (bail not jail) ತತ್ವವನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್​ ಎಲ್ಲಾ ಹೈಕೋರ್ಟ್​ಗಳಿಗೆ ಸೂಚಿಸಿದೆ.

ತೀರ್ಪು ನೀಡುವಾಗ ‘ಜಾಮೀನು ಅಲ್ಲ, ಜೈಲು‘ ಎಂಬ ತತ್ವವನ್ನು ಪಾಲಿಸಿ; ಹೈಕೋರ್ಟ್​ಗಳಿಗೆ ಸುಪ್ರೀಂಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್​
shruti hegde

|

Apr 25, 2021 | 1:01 PM

ದೆಹಲಿ: ದರೋಡೆಕೋರರು, ಶಾರ್ಪ್​ಶೂಟರ್​ಗಳು ಮತ್ತು ಅಪರಾಧಿಗಳಿಗೆ ಅನ್ವಯ ಆಗುವಂತೆ ಜಾಮೀನು ಅಲ್ಲ ಜೈಲು (bail not jail) ತತ್ವವನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್​ ಎಲ್ಲಾ ಹೈಕೋರ್ಟ್​ಗಳಿಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ಅಪರಾಧದಲ್ಲಿ ಬಲಿಪಶುಗಳಾದ ಕುಟುಂಬ ಹಾಗೂ ಸಾಕ್ಷಿದಾರರಿಗೆ ಜಾಮೀನಿನ ಪರಿಣಾಮ ಬೀರಬಹುದು. ಹಾಗಾಗಿ ನ್ಯಾಯಾಧೀಶರ ಪೀಠದ ಮುಖ್ಯಸ್ಥರಾಗಿರುವ ಸಿಜೆಐ ಎಸ್​ಎ ಬೊಬ್ಡೆ ಅವರ ನಿವೃತ್ತಿಯ ಸಮಯದಲ್ಲಿ ಅಜಮ್​ಘರ್​ ಗ್ಯಾಂಸ್ಟರ್​ ದರೋಡೆಕೋರ ಅರುಣ್ ಯಾದವ್​ಗೆ ಅಲಹಾಬಾದ್​ ಹೈಕೋರ್ಟ್​ ನೀಡಿದ್ದ ಜಾಮೀನನ್ನು ರದ್ದುಪಡಿಸಿದ್ದಾರೆ. 15 ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ಎದುರಿಸಿದ ಯಾದವ್​ ಸಿಂಗ್​ ಅವರ ಜಾಮೀನನ್ನು ಪ್ರಶ್ನಿಸಿದೆ.

64 ಕ್ರಿಮಿನಲ್​ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾದ ವ್ಯಕ್ತಿಯ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಕೊಲೆ, ದೌರ್ಜನ್ಯ, ಕ್ರಿಮಿನಲ್​ ಬೆದರಿಕೆ ಸುಲಿಗೆ ಮತ್ತು ದರೋಡೆಕೋರ ಕಾಯ್ದೆಯಡಿ, ಒಬ್ಬ ವ್ಯಕ್ತಿ 64 ಕೇಸ್​ ಹಾಗೂ ದರೋಡೆ ಕೋರನಾಗಿರುತ್ತಾನೆ. ಆತ ಜಾಮೀನು ಸಿಕ್ಕಿದ ನಂತರ ಹೊರ ಬಂದಾಗ 8 ಪೊಲೀಸರನ್ನು ಕೊಲೆ ಮಾಡುತ್ತಾನೆ ಎಂಬ ಪ್ರಕರಣವನ್ನು ಎಸ್​ಸಿ ನೆನಪಿಸಿಕೊಂಡು, ಪೊಲೀಸರು ಕೊಲ್ಲಲ್ಪಟ್ಟಿದ್ದಾರೆಂದು ಅರೋಪಿಸಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿದೆ.

ಹೆಚ್ಚು ಇಂತಹ ಪ್ರಕರಣಗಳನ್ನು ಕೂಲಂಕಷವಾಗಿ ಪರಿಹರಿಸಬೇಕು ಕೋರ್ಟ್​ ಅವಶ್ಯವಾಗಿ ಇಂತಹ ಹಿನ್ನೆಲೆಯಿರುವಾಗ ಜಾಮೀನಿನ ಅವಧಿಯನ್ನು ವಿಸ್ತರಿಸಬಾರದು. ಇಂತಹ ದರೋಡೆಕೋರರಿಗೆ ಜಾಮೀನು ನೀಡುವುದರಿಂದ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು. ಹಾಗೂ ಸಾಕ್ಷಿದಾರರ ಸಾಕ್ಷಿಗಳ ಪ್ರಭಾವದಿಂದಾಗಿ ನ್ಯಾಯ ನೀಡುವಲ್ಲಿ ವಿಫಲವಾಗಬಹುದು ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಇದನ್ನೂ ಓದಿ: ಕೊವಿಡ್ ನಿರ್ವಹಣೆಯ ಸ್ವಯಂ ಪ್ರೇರಿತ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್​

(Supreme Court Said Bail not Jail norm not for Gangsters)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada