ದೇಶದಲ್ಲಿ 137.67 ಕೋಟಿ ಡೋಸ್ ಕೊರೊನಾ​ ಲಸಿಕೆ ನೀಡಿಕೆಯ ಸಾಧನೆ; 24 ಗಂಟೆಯಲ್ಲಿ 6563 ಹೊಸ ಕೊರೊನಾ ಕೇಸ್​ಗಳು ದಾಖಲು

| Updated By: Lakshmi Hegde

Updated on: Dec 20, 2021 | 11:39 AM

Covid 19 Updates in India: ದೇಶದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 3,41,87,017ಕ್ಕೆ ತಲುಪಿದೆ. ಹಾಗೇ 24 ಗಂಟೆಯಲ್ಲಿ 8,077 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ  82,267 ಕ್ಕೆ ಇಳಿಕೆಯಾಗಿದೆ.

ದೇಶದಲ್ಲಿ 137.67 ಕೋಟಿ ಡೋಸ್ ಕೊರೊನಾ​ ಲಸಿಕೆ ನೀಡಿಕೆಯ ಸಾಧನೆ; 24 ಗಂಟೆಯಲ್ಲಿ 6563 ಹೊಸ ಕೊರೊನಾ ಕೇಸ್​ಗಳು ದಾಖಲು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶದಲ್ಲೀಗ ಕೊವಿಡ್​ 19 ಲಸಿಕೆ ನೀಡಿಕೆ (Covid 19 Vaccine Drive) 137.67 ಕೋಟಿ ಡೋಸ್​​ಗಳ ಮೈಲಿಗಲ್ಲು ಸ್ಥಾಪಿಸಿದೆ.  ಕಳೆದ 24ಗಂಟೆಯಲ್ಲಿ 15,82,079 ಡೋಸ್​ ಕೊರೊನಾ ಲಸಿಕೆ ನೀಡಿಲಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟಾರೆ  1,37,67,20,359 ಡೋಸ್​​ ಲಸಿಕೆ ನೀಡಿಕೆಯಾಗಿದೆ. ಈ ಮೈಲಿಗಲ್ಲು ತಲುಪಲು ಒಟ್ಟು 1,44,91,123 ಸೆಷನ್​​ಗಳು ಬೇಕಾಯಿತು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.  

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 6,563 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 3,41,87,017ಕ್ಕೆ ತಲುಪಿದೆ. ಹಾಗೇ 24 ಗಂಟೆಯಲ್ಲಿ 8,077 ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ  82,267 ಕ್ಕೆ ಇಳಿಕೆಯಾಗಿದೆ. ಭಾರತದಲ್ಲಿ ಕೊರೊನಾ ದಿಂದ ಚೇತರಿಸಿಕೊಳ್ಳುವ ಪ್ರಮಾಣ ಈಗ ಶೇ.98.39ರಷ್ಟಿದೆ. 2020ರ ಮಾರ್ಚ್​ ತಿಂಗಳಿಂದಲೂ ಇದು ಅತ್ಯಂತ ಹೆಚ್ಚಿನ ಪ್ರಮಾಣದ ರಿಕವರಿ ರೇಟ್ ಆಗಿದೆ. ಈ ಮಧ್ಯೆ ದೇಶದಲ್ಲಿ ಕೊರೊನಾ ತಪಾಸಣೆ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಕಳೆದ 24ಗಂಟೆಯಲ್ಲಿ  8,77,055 ಮಂದಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ 66.51 ಕೋಟಿ ಜನರಿಗೆ ಕೊವಿಡ್ 19 ತಪಾಸಣೆ ನಡೆಸಲಾಗಿದೆ. ಈ ಮೂಲಕ ವಾರದ ಪಾಸಿಟಿವಿಟಿ ದರ ಶೇ. 0.60ರಷ್ಟಿದೆ. ಕಳದೆ ಒಂದು ತಿಂಗಳಿಂದಲೂ ಈ ದರ ಶೇ.1ಕ್ಕಿಂತಲೂ ಕಡಿಮೆ ಇದೆ. ಹಾಗೇ, ದಿನದ ಪಾಸಿಟಿವಿಟಿ ದರ ಶೇ. 0.75 ರಷ್ಟಿದೆ. ಇದು ಕಳೆದ 77ದಿನಗಳಿಂದಲೂ ಶೇ.2ರ ಕೆಳಗೇ ಇದೆ.

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದ್ದು ಜನವರಿ 16ರಿಂದ. ಅದಾದ ಬಳಿಕ ಜೂನ್​ 21ರಿಂದ ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಪ್ರಾರಂಭವಾಯಿತು. ಅದರಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡಿತು.  ಆಗಿನಿಂದಲೂ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 145.61 ಕೋಟಿ ಡೋಸ್​ಗಳಷ್ಟು ಕೊರೊನಾ ಲಸಿಕೆ ಪೂರೈಕೆ ಮಾಡಿದೆ.

ಇದನ್ನೂ ಓದಿ: ನೌಕರರ ಮುಷ್ಕರ: ಜಮ್ಮುವಿನ ಹಲವೆಡೆ ವಿದ್ಯುತ್ ವ್ಯತ್ಯಯ; ಸೇನೆಯ ಸಹಾಯ ಕೋರಿದ ಆಡಳಿತಾಧಿಕಾರಿಗಳು

Published On - 11:38 am, Mon, 20 December 21