ನೌಕರರ ಮುಷ್ಕರ: ಜಮ್ಮುವಿನ ಹಲವೆಡೆ ವಿದ್ಯುತ್ ವ್ಯತ್ಯಯ; ಸೇನೆಯ ಸಹಾಯ ಕೋರಿದ ಆಡಳಿತಾಧಿಕಾರಿಗಳು
ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಆಡಳಿತದ ನಿರ್ಧಾರ ಮತ್ತು ಸಂಬಳ ಪಾವತಿ ವಿಳಂಬದ ವಿರುದ್ಧ ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಪ್ರಸರಣ ಮತ್ತು ವಿತರಣಾ ನಿಗಮಗಳ ಲೈನ್ಸ್‌ಮೆನ್ ಮತ್ತು ಎಂಜಿನಿಯರ್‌ಗಳು ಸೇರಿದಂತೆ 20,000 ಕ್ಕೂ ಹೆಚ್ಚು ಉದ್ಯೋಗಿಗಳು ಶನಿವಾರದಿಂದ ಮುಷ್ಕರ ನಡೆಸುತ್ತಿದ್ದಾರೆ.
ಜಮ್ಮು: ವಿದ್ಯುತ್ ಇಲಾಖೆಯ(power department) ನೌಕರರ ಮುಷ್ಕರವು ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಿದ್ದರಿಂದ ಜಮ್ಮು ಮತ್ತು ಕಾಶ್ಮೀರ (Jammu and Kashmir)ಆಡಳಿತವು ಭಾನುವಾರ ಸೇನೆಯ ಸಹಾಯವನ್ನು ಕೋರಿದೆ. ಕಠಿಣ ಚಳಿಗಾಲದ ನಡುವೆಯೇ ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಭಾಗಗಳು ವಿದ್ಯುತ್ ಇಲ್ಲದೆ ಕಷ್ಟಪಡುವಂತಾಗಿದೆ. ಆಸ್ತಿಗಳನ್ನು ಖಾಸಗೀಕರಣಗೊಳಿಸುವ ಆಡಳಿತದ ನಿರ್ಧಾರ ಮತ್ತು ಸಂಬಳ ಪಾವತಿ ವಿಳಂಬದ ವಿರುದ್ಧ ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಪ್ರಸರಣ ಮತ್ತು ವಿತರಣಾ ನಿಗಮಗಳ ಲೈನ್ಸ್‌ಮೆನ್ ಮತ್ತು ಎಂಜಿನಿಯರ್‌ಗಳು ಸೇರಿದಂತೆ 20,000 ಕ್ಕೂ ಹೆಚ್ಚು ಉದ್ಯೋಗಿಗಳು ಶನಿವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. ಜಮ್ಮು ವಿಭಾಗದ ಮೂರನೇ ಒಂದು ಭಾಗಕ್ಕೂ ಹೆಚ್ಚು ವಿದ್ಯುತ್ ಇಲ್ಲದಿರುವುದರಿಂದ, ಜಮ್ಮುವಿನ ವಿಭಾಗೀಯ ಆಯುಕ್ತ ಡಾ ರಾಘವ್ ಲ್ಯಾಂಗರ್ (Dr Raghav Langer) ಅವರು ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದಿದ್ದು 9 ಮತ್ತು 16 ಕಾರ್ಪ್ಸ್‌ನ ಜನರಲ್ ಆಫೀಸರ್ಸ್ ಕಮಾಂಡಿಂಗ್ ಮತ್ತು ಸಿಬ್ಬಂದಿಯಸಹಾಯ ಕೋರಿದ್ದಾರೆ. ನಿರ್ಣಾಯಕ ವಿದ್ಯುಚ್ಛಕ್ತಿ ಕೇಂದ್ರಗಳು ಮತ್ತು ನೀರು ಸರಬರಾಜು ಮೂಲಗಳಿಗೆ ಮಾನವಶಕ್ತಿಯನ್ನು ಒದಗಿಸುವ ಮೂಲಕ ಅಗತ್ಯ ಸೇವೆಗಳ ಮರುಸ್ಥಾಪನೆಯಲ್ಲಿ ಸಹಾಯ ಮಾಡಲು ಭಾರತೀಯ ಸೇನೆಯನ್ನು ನಾವು ಈ ಮೂಲಕ ವಿನಂತಿಸಲು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಜಮ್ಮುವಿನ ಉಧಂಪುರ ಜಿಲ್ಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೂ ಹಾನಿಯಾಗಿದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನ ದೋಷಗಳನ್ನು ಗಮನಿಸಲು ಯಾರೂ ಇಲ್ಲ ಎಂದು ಮುಖ್ಯ ಇಂಜಿನಿಯರ್ ಅಶ್ವನಿ ಸಚ್‌ದೇವ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಕಾಶ್ಮೀರ ವಿಭಾಗದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ, ಬೇಸಿಗೆಯ ರಾಜಧಾನಿ ಶ್ರೀನಗರ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಸ್ಥಗಿತಗಳು ವರದಿಯಾಗಿವೆ.
ಡಿಸೆಂಬರ್ 4 ರಂದು ಜಮ್ಮ ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶವು ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಪಿಟಿಸಿಎಲ್) ಮತ್ತು ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್ (ಪಿಟಿಡಿಎಲ್) ಅನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿತು. ಇದನ್ನು ಪ್ರತಿಭಟನಾಕಾರರು ಯುಟಿಯ ಆಸ್ತಿಗಳ ಮಾರಾಟ ಎಂದು ನೋಡುತ್ತಾರೆ. 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ಪವರ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ (ಜೆಕೆಪಿಡಿಡಿ) ವಿಭಜನೆಯ ನಂತರ ಎರಡು ನಿಗಮಗಳು ಅಸ್ತಿತ್ವಕ್ಕೆ ಬಂದವು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
ಮುಷ್ಕರ ನಿರತ ನೌಕರರು ಮತ್ತು ಆಡಳಿತದ ನಡುವಿನ ಮಾತುಕತೆ ಭಾನುವಾರ ಮತ್ತೊಮ್ಮೆ ವಿಫಲವಾದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್ ಜಂಟಿ ಉದ್ಯಮವನ್ನು ತಡೆಹಿಡಿಯಲು ಸರ್ಕಾರ ಒಪ್ಪಿಗೆ ನೀಡಿದೆ. “ಉದ್ಯೋಗಿಗಳು ಎತ್ತಿರುವ ಕಾಳಜಿಯ ಎಲ್ಲಾ ಕ್ಷೇತ್ರಗಳನ್ನು ಮರುಪರಿಶೀಲಿಸಲು” ಒಪ್ಪಿಕೊಂಡಿದೆ. “ಆದರೆ ನೌಕರರು ಈಗ ಹಿಂದಿನ ವ್ಯವಸ್ಥೆಗೆ ಹಿಂತಿರುಗುವಂತಹ ಹೊಸ ಬೇಡಿಕೆಗಳೊಂದಿಗೆ ಬಂದಿದ್ದಾರೆ. ಉದಾಹರಣೆಗೆ ಸರ್ಕಾರಿ ಖಜಾನೆಗಳಿಂದ ಅವರಿಗೆ ಸಂಬಳವನ್ನು ನೀಡುವುದು, ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಕ್ಷೇತ್ರದ ಸುಧಾರಣೆಗಳ ದೃಷ್ಟಿಯಿಂದ ಇದು ಸಾಧ್ಯವಾಗಲಿಲ್ಲ” ಎಂದು ನಂದ್ ಹೇಳಿದ್ದಾರೆ. ಆದಾಗ್ಯೂ, ಪ್ರತಿಭಟನಾನಿರತ ನೌಕರರು ಲಿಖಿತ ಭರವಸೆಯೊಂದಿಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಬಯಸುತ್ತಾರೆ.
ಆಂದೋಲನದ ನೇತೃತ್ವ ವಹಿಸಿರುವ ಜಮ್ಮು ಮತ್ತು ಕಾಶ್ಮೀರ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳ ಸಮನ್ವಯ ಸಮಿತಿಯ ಅಧ್ಯಕ್ಷ ಜೈಪಾಲ್ ಶರ್ಮಾ ಕೇಂದ್ರಾಡಳಿತ ಪ್ರದೇಶದ ಹಣಕಾಸು ಇಲಾಖೆಯು ಖಜಾನೆಯಿಂದ ನಮಗೆ ವೇತನ ಪಾವತಿಗೆ ಆದೇಶವನ್ನು ನೀಡಬಹುದು. ನಮ್ಮನ್ನು ನಿಗಮಗಳಿಗೆ ಡೆಪ್ಯುಟೇಶನ್‌ನಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸಬಹುದು ಆದರೆ, 2019 ರಲ್ಲಿ ನಿಗಮಗಳು ರಚನೆಯಾದಾಗಿನಿಂದ ನಮಗೆ ದೀಪಾವಳಿಯಂತಹ ಹಬ್ಬಗಳಂದು ಸಹ ಪಾವತಿಸಲಾಗಿಲ್ಲ, ಏಕೆಂದರೆ ನಿಗಮಗಳಿಗೆ ಸಹಾಯ ಮಾಡುವ ಅನುದಾನದಲ್ಲಿ ನಮಗೆ ಸಂಬಳ ನೀಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Omicron Variant: ಮುಂದೆ ಯಾವುದೇ ಪರಿಸ್ಥಿತಿ ಬರಬಹುದು, ಎದುರಿಸಲು ಸಿದ್ಧರಾಗಿರಿ: ಏಮ್ಸ್ ನಿರ್ದೇಶಕರಿಂದ ಎಚ್ಚರಿಕೆ
Published On - 10:35 am, Mon, 20 December 21