26/11ರ ಮಾಸ್ಟರ್ ಮೈಂಡ್ ಹಫೀಜ್ ಸಯೀದ್​​ನ್ನು ಹಸ್ತಾಂತರಿಸುವಂತೆ ಪಾಕ್​​​ಗೆ ಭಾರತ ಮನವಿ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಸಯೀದ್ ಭಾರತದಲ್ಲಿ ಹಲವಾರು ಪ್ರಕರಣಗಳಲ್ಲಿ ವಾಂಟೆಡ್ ವ್ಯಕ್ತಿ ಮತ್ತು ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕನಾಗಿದ್ದಾನೆ. ಒಂದು ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆಯನ್ನು ನಡೆಸಲು ಆತನನ್ನುಭಾರತಕ್ಕೆ ಹಸ್ತಾಂತರಿಸುವಂತೆ ನಾವು ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಿತ ದಾಖಲೆಗಳೊಂದಿಗೆ ವಿನಂತಿಯನ್ನು ರವಾನಿಸಿದ್ದೇವೆ" ಎಂದು ಹೇಳಿದ್ದಾರೆ.

26/11ರ ಮಾಸ್ಟರ್ ಮೈಂಡ್ ಹಫೀಜ್ ಸಯೀದ್​​ನ್ನು ಹಸ್ತಾಂತರಿಸುವಂತೆ ಪಾಕ್​​​ಗೆ ಭಾರತ ಮನವಿ
ಹಫೀಜ್ ಸಯೀದ್‌

Updated on: Dec 29, 2023 | 5:38 PM

ದೆಹಲಿ ಡಿಸೆಂಬರ್ 29: 26/11ರ ಮುಂಬೈ ಭಯೋತ್ಪಾದನಾ ದಾಳಿಯ ( 26/11 Mumbai terror attacks)ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ್ನು (Hafiz Saeed) ವಿಚಾರಣೆ ಎದುರಿಸಲು ಹಸ್ತಾಂತರಿಸುವಂತೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ಮನವಿಯನ್ನು ಕಳುಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಸಯೀದ್ ಭಾರತದಲ್ಲಿ ಹಲವಾರು ಪ್ರಕರಣಗಳಲ್ಲಿ ವಾಂಟೆಡ್ ವ್ಯಕ್ತಿ ಮತ್ತು ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕನಾಗಿದ್ದಾನೆ.

“ಒಂದು ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆಯನ್ನು ನಡೆಸಲು ಆತನನ್ನುಭಾರತಕ್ಕೆ ಹಸ್ತಾಂತರಿಸುವಂತೆ ನಾವು ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಿತ ದಾಖಲೆಗಳೊಂದಿಗೆ ವಿನಂತಿಯನ್ನು ರವಾನಿಸಿದ್ದೇವೆ” ಎಂದು ಹೇಳಿದ್ದಾರೆ.


ಹಫೀಜ್ ಸಯೀದ್‌ನ ಚಟುವಟಿಕೆಗಳ ವಿಷಯವನ್ನು ಸರ್ಕಾರವು ಎತ್ತಿದ್ದು ಇದು ಇತ್ತೀಚಿನ ವಿನಂತಿಯಾಗಿದೆ ಎಂದು ಬಾಗ್ಚಿ ಹೇಳಿದರು. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಸ್ಥಾಪಕ ಸಯೀದ್, ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಯ ಇತರ ಕೆಲವು ನಾಯಕರೊಂದಿಗೆ ಅನೇಕ ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷೆಗೊಳಗಾದ ನಂತರ 2019 ರಿಂದ ಪಾಕಿಸ್ತಾನದ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ: ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಹಫೀಜ್​ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನವನ್ನು ಕೇಳಿದ ಭಾರತ

ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕ ಸಯೀದ್‌ ಸೆರೆಹಿಡಿದರೆ USD 10 ಮಿಲಿಯನ್ ಬಹುಮಾನ ಘೋಷಿಸಿತ್ತು ಅಮೆರಿಕ. ಸಯೀದ್ ನೇತೃತ್ವದ ಜೆಯುಡಿಯು ಲಷ್ಕರ್-ಎ-ತೈಬಾ (ಎಲ್‌ಇಟಿ)ಸಂಘಟನೆಯಾಗಿದ್ದು, ಇದು ಆರು ಅಮೆರಿಕನ್ನರು ಸೇರಿದಂತೆ 166 ಜನರನ್ನು ಕೊಂದ 2008 ರ ಮುಂಬೈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ