Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಿ ಮುಂಬೈ: ₹ 5.7 ಕೋಟಿ ಮೌಲ್ಯದ ಕಳ್ಳಸಾಗಣೆ ಸಿಗರೇಟ್‌ ವಶ

ಸಿಗರೇಟ್ ಪೆಟ್ಟಿಗೆಗಳನ್ನು ಹುಣಸೆ ಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಕಾರ್ಡ್ಬೋರ್ಡ್ ಪೆಟ್ಟಿಗೆಗಳನ್ನು ತೆರೆಯುವಾಗಲೂ ಸಿಗರೇಟ್ ಪೆಟ್ಟಿಗೆಗಳನ್ನು ಮರೆಮಾಡಲು ಹುಣಸೆಹಣ್ಣಿನಿಂದ ಎಲ್ಲಾ ಕಡೆಗಳಲ್ಲ ಮುಚ್ಚಲಾಗಿತ್ತು ಎಂದು ಡಿಆರ್ ಐ ಅಧಿಕಾರಿಯೊಬ್ಬರು ಹೇಳಿದರು.

ನವಿ ಮುಂಬೈ: ₹ 5.7 ಕೋಟಿ ಮೌಲ್ಯದ ಕಳ್ಳಸಾಗಣೆ ಸಿಗರೇಟ್‌ ವಶ
ಸಿಗರೇಟ್ ತುಂಬಿದ ಪೆಟ್ಟಿಗೆಗಳು
Follow us
ರಶ್ಮಿ ಕಲ್ಲಕಟ್ಟ
|

Updated on: Dec 29, 2023 | 7:16 PM

ಮುಂಬೈ ಡಿಸೆಂಬರ್ 29: ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ₹ 5.77 ಕೋಟಿ ಮೌಲ್ಯದ ಕಳ್ಳಸಾಗಣೆ ಸಿಗರೇಟ್‌ಗಳನ್ನು (smuggled cigarettes )ನವಾ ಶೇವಾದಲ್ಲಿ ವಶಪಡಿಸಿಕೊಂಡಿದ್ದಾರೆ ಎಂದು ಏಜೆನ್ಸಿ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಮುಂಬೈನ ಡಿಆರ್‌ಐಗೆ ಸಿಕ್ಕಿದ ಗುಪ್ತಚರ ಮಾಹಿತಿ ಆಧಾರದ ಮೇಲೆ, ಜವಾಹರಲಾಲ್ ನೆಹರು ಬಂದರಿಗೆ ಬಂದ 40-ಅಡಿ ಶೈತ್ಯೀಕರಿಸಿದ ಕಂಟೇನರ್ ಅನ್ನು ನವಾ ಶೆವಾದಲ್ಲಿನ ಕಂಟೈನರ್ ಸರಕು ಸಾಗಣೆ ಕೇಂದ್ರದಲ್ಲಿ (CFS) ವಶ ಪಡಿಸಿಕೊಳ್ಳಲಾಗಿದೆ. ತಪಾಸಣೆ ವೇಳೆ ಸಿಗರೇಟ್ ಪೆಟ್ಟಿಗೆಗಳು ಪತ್ತೆಯಾಗಿವೆ.

ಕಂಟೈನರ್‌ನಲ್ಲಿನ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಸಿಗರೇಟ್ ಪೆಟ್ಟಿಗೆಗಳನ್ನು ಹುಣಸೆಹಣ್ಣನ್ನು ಹೊಂದಿರುವ ರಟ್ಟಿನ ಪೆಟ್ಟಿಗೆಗಳಲ್ಲಿ ಮರೆಮಾಡಲಾಗಿದೆ ಎಂದು ತಿಳಿದುಬಂದಿದೆ. ಹುಣಸೆಹಣ್ಣು ಹಡಗು ದಾಖಲೆಗಳಲ್ಲಿ ಘೋಷಿಸಲಾದ ವಸ್ತುವಾಗಿದೆ.

ಸಿಗರೇಟ್ ಪೆಟ್ಟಿಗೆಗಳನ್ನು ಹುಣಸೆ ಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಕಾರ್ಡ್ಬೋರ್ಡ್ ಪೆಟ್ಟಿಗೆಗಳನ್ನು ತೆರೆಯುವಾಗಲೂ ಸಿಗರೇಟ್ ಪೆಟ್ಟಿಗೆಗಳನ್ನು ಮರೆಮಾಡಲು ಹುಣಸೆಹಣ್ಣಿನಿಂದ ಎಲ್ಲಾ ಕಡೆಗಳಲ್ಲ ಮುಚ್ಚಲಾಗಿತ್ತು ಎಂದು ಡಿಆರ್ ಐ ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ: ಪ್ರಧಾನಿ ರ‍್ಯಾಲಿ ನಡೆಯಲಿರುವ ಅಯೋಧ್ಯೆಯ ಮೈದಾನ ಪರಿಶೀಲಿಸಿ ಸೆಲ್ಫಿ ಕ್ಲಿಕ್ ಮಾಡಿದ ಯೋಗಿ ಆದಿತ್ಯನಾಥ್

ಕಳ್ಳಸಾಗಣೆ ಮಾಡಿದ ಸರಕು 33,92,000 ಸಿಗರೇಟ್ ಗಳನ್ನು ಹೊಂದಿದ್ದು, ಮಾರುಕಟ್ಟೆ ಮೌಲ್ಯ ಅಂದಾಜು ₹ 5.77 ಕೋಟಿ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ