Prithvi-2: ಒಡಿಶಾದ ಕರಾವಳಿ ತಟದಲ್ಲಿ ಪೃಥ್ವಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ಭಾರತವು ಒಡಿಶಾದ ಚಾಂದೀಪುರದಲ್ಲಿ 250 ಕಿ.ಮೀಗೂ ಹೆಚ್ಚು ಸ್ಟ್ರೈಕ್ ರೇಂಜ್ ಹೊಂದಿರುವ ಪೃಥ್ವಿ 2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. DRDO ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು ಈಗಾಗಲೇ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಭಾಗವಾಗಿದೆ.

Prithvi-2: ಒಡಿಶಾದ ಕರಾವಳಿ ತಟದಲ್ಲಿ ಪೃಥ್ವಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
Prithvi 2 Missile
Edited By:

Updated on: Jun 16, 2022 | 10:04 AM

ಭಾರತವು ಒಡಿಶಾದ ಚಾಂದೀಪುರದಲ್ಲಿ 250 ಕಿ.ಮೀಗೂ ಹೆಚ್ಚು ಸ್ಟ್ರೈಕ್ ರೇಂಜ್ ಹೊಂದಿರುವ ಪೃಥ್ವಿ 2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. DRDO ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು ಈಗಾಗಲೇ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಭಾಗವಾಗಿದೆ. “ಈ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-2 ಅನ್ನು ಜೂನ್ 15 ರಂದು ಸಂಜೆ 7.30 ರ ಸುಮಾರಿಗೆ ಒಡಿಶಾದ ಚಾಂದೀಪುರದಲ್ಲಿರುವ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು” ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪೃಥ್ವಿ 2 ಕ್ಷಿಪಣಿ ನ್ಯೂಕ್ಲಿಯರ್ ವೆಪನ್​ಗಳನ್ನು ಹೊತ್ತೊಯ್ಯಬಲ್ಲದ್ದಾಗಿದೆ, ಒಂದೊಮ್ಮೆ ರಾತ್ರಿ ಸಮಯದಲ್ಲಿ ಶತ್ರುಗಳು ಆಕ್ರಮಣ ಮಾಡಿದರೂ ಸುಲಭವಾಗಿ ಅವರನ್ನೆಲ್ಲಾ ಹೊಡೆದೋಡಿಸುವ ಸಾಮರ್ಥ್ಯ ಹೊಂದಿದೆ.

ಈ ಮೊದಲು 2018ರ ಫೆಬ್ರವರಿ 21ರ ರಾತ್ರಿ ಪೃಥ್ವಿ 2 ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಬಳಿಕ 2019ರ ನವೆಂಬರ್ 20ರಂದು ಮತ್ತೊಮ್ಮೆ ಕ್ಷಿಪಣಿ ಪರೀಕ್ಷೆ ನಡೆಯಿತು. ಇವೆಲ್ಲವೂ ಚಾಂದೀಪುರದಲ್ಲಿಯೇ ನಡೆದಿದೆ.

ಈ ಹಿಂದೆ ಈ ಕ್ಷಿಪಣಿಯನ್ನು ಒಡಿಶಾದ ಬಾಲಸೋರ್ ಕರಾವಳಿಯಲ್ಲಿಯೇ ಪರೀಕ್ಷಿಸಲಾಗಿತ್ತು, ಎಲ್ಲಾ ನಿಯತಾಂಕಗಳನ್ನು ಸಾಧಿಸಿ ಪರೀಕ್ಷೆಯು ಯಶಸ್ವಿಯಾಗಿತ್ತು. ಮಾಹಿತಿಯ ಪ್ರಕಾರ, ಈ ಕ್ಷಿಪಣಿಯು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಇದು ದ್ರವ ಎಂಜಿನ್​ಗಳನ್ನು ಒಳಗೊಂಡಿದೆ. ಪರೀಕ್ಷಾರ್ಥ ಉಡಾವಣೆ ವೇಳೆ ಕ್ಷಿಪಣಿಯು ನಿಖರವಾಗಿ ತನ್ನ ಗುರಿ ತಲುಪಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಹಾಗೆಯೇ ಭಾರತವು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-4 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ದೇಶದ ಮಿಲಿಟರಿ ವ್ಯವಸ್ಥೆಗೆ ಬಲ ಎಂದೇ ಹೇಳಬಹುದು. ಈ ಕ್ಷಿಪಣಿಯು ಸುಮಾರು 4,000 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಪ್ರಾಥಮಿಕವಾಗಿ ಚೀನಾದ ವಿರುದ್ಧ ಭಾರತದ ಪ್ರತಿಬಂಧಕವಾಗಿದೆ.

 

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Web contact

TV9 Kannada

Read More
Follow Us