ನಾಳೆ ಉಕ್ರೇನ್​ ನೆರೆರಾಷ್ಟ್ರಗಳಿಂದ ಭಾರತಕ್ಕೆ ಬರಲಿವೆ 8 ಫ್ಲೈಟ್​ಗಳು; ವಾಪಸ್​ ಬರಲಿದ್ದಾರೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು

| Updated By: Lakshmi Hegde

Updated on: Mar 06, 2022 | 6:42 PM

ಇಂದು ಇಲ್ಲಿಯವರೆಗೆ ಅಂದರೆ ಹಗಲು ಸಮಯದಲ್ಲಿ ಒಟ್ಟು 11 ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿವೆ. ಅದರಲ್ಲಿ 9 ವಿಮಾನಗಳು ದೆಹಲಿಯಲ್ಲಿ ಮತ್ತು ಇನ್ನೆರಡು ವಿಮಾನಗಳು ಮುಂಬೈನಲ್ಲಿ ಲ್ಯಾಂಡ್ ಆಗಿವೆ.

ನಾಳೆ ಉಕ್ರೇನ್​ ನೆರೆರಾಷ್ಟ್ರಗಳಿಂದ ಭಾರತಕ್ಕೆ ಬರಲಿವೆ 8 ಫ್ಲೈಟ್​ಗಳು; ವಾಪಸ್​ ಬರಲಿದ್ದಾರೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಉಕ್ರೇನ್​​ನಲ್ಲಿರುವ ಭಾರತೀಯರು
Follow us on

ಉಕ್ರೇನ್​ನಿಂದ (Ukraine) ಭಾರತೀಯರನ್ನು ಕರೆತರುವ ವಿಮಾನಗಳು ನಿರಂತರವಾಗಿ ಸಂಚಾರ ಮಾಡುತ್ತಿದ್ದು, ಇಂದು ಸುಮಾರು 2135 ವಿದ್ಯಾರ್ಥಿಗಳನ್ನು ವಾಪಸ್​ ಭಾರತಕ್ಕೆ ಕರೆತರಲಾಗುತ್ತಿದೆ. ಅಂದರೆ ಉಕ್ರೇನ್​ನಿಂದ ವಿದ್ಯಾರ್ಥಿಗಳು ಭೂಮಾರ್ಗದ ಮೂಲಕ ಅಂದರೆ ಬಸ್​, ರೈಲು, ಕ್ಯಾಬ್​ ಮೂಲಕ ನೆರೆರಾಷ್ಟ್ರಗಳಾದ ರೊಮೇನಿಯಾ, ಪೋಲ್ಯಾಂಡ್​, ಹಂಗೇರಿಗಳಿಗೆ ಬರುತ್ತಾರೆ. ಅಲ್ಲಿಂದ ಭಾರತ ಸರ್ಕಾರ (Indian Government) ವ್ಯವಸ್ಥೆ ಮಾಡಿದ ವಿಮಾನದಲ್ಲಿ ವಾಪಸ್​ ಬರುತ್ತಿದ್ದಾರೆ. ಹಾಗೇ, ನಾಳೆ ಒಂಟು ಎಂಟು ವಿಮಾನಗಳು ಉಕ್ರೇನ್​ನಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಭಾರತಕ್ಕೆ ಬರಲಿವೆ. ಇದರಲ್ಲಿ ಐದು ವಿಮಾನಗಳು ಹಂಗೇರಿಯಿಂದ ಮತ್ತು ಮೂರು ವಿಮಾನಗಳು ರೊಮೇನಿಯಾದಿಂದ ಬರಲಿದ್ದು, 1500ಕ್ಕೂ ಅಧಿಕ ವಿದ್ಯಾರ್ಥಿಗಳು ಮರಳುವ ಸಾಧ್ಯತೆ ಇದೆ.

ಇಂದು ಇಲ್ಲಿಯವರೆಗೆ ಅಂದರೆ ಹಗಲು ಸಮಯದಲ್ಲಿ ಒಟ್ಟು 11 ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿವೆ. ಅದರಲ್ಲಿ 9 ವಿಮಾನಗಳು ದೆಹಲಿಯಲ್ಲಿ ಮತ್ತು ಇನ್ನೆರಡು ವಿಮಾನಗಳು ಮುಂಬೈನಲ್ಲಿ ಲ್ಯಾಂಡ್ ಆಗಿವೆ. ಅದರಲ್ಲೂ ಆರು ವಿಮಾನಿಗಳು ಹಂಗೇರಿಯ ರಾಜಧಾನಿ ಬುಡಾಪೆಸ್ಟ್​​ನಿಂದ ಬಂದಿದ್ದು, ಎರಡು ರೊಮೇನಿಯಾದ ರಾಜಧಾನಿ ಬುಚಾರೆಸ್ಟ್​, ಎರಡು ವಿಮಾನಗಳು ಪೋಲ್ಯಾಂಡ್​​ನ ರ್ಜೆಸ್ಜೋವ್​  ಮತ್ತು ಸ್ಲೋವಾಕಿಯಾದ ಕೊಸೈಸ್‌ನಿಂದ ಒಂದು ವಿಮಾನ ಬಂದಿದೆ.  ಈ ಮಧ್ಯೆ ಇಂದು ಉಕ್ರೇನ್​ ಹಾಗೂ ಹಂಗೇರಿಯಲ್ಲಿರುವ ರಾಯಭಾರಿ ಕಚೇರಿಗಳು ಹೊಸ ಸೂಚನೆಯೊಂದನ್ನು ನೀಡಿದ್ದು, ಯುದ್ಧಭೂಮಿ ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳು ಆದಷ್ಟು ಶೀಘ್ರವೇ ಹಂಗೇರಿ ತಲುಪುವಂತೆ ಹೇಳಿದೆ. ಹಾಗೇ, ಅದು ಬಿಡುಗಡೆ ಮಾಡಿರುವ ಒಂದು ಗೂಗಲ್ ಫಾರ್ಮ್ ಭರ್ತಿ ಮಾಡುವಂತೆ ತಿಳಿಸಿದೆ.

ಭಾರತ ಆಪರೇಶನ್​ ಗಂಗಾ ಕಾರ್ಯಾಚರಣೆಯನ್ನು ಫೆ.22ರಿಂದ ಶುರು ಮಾಡಿದೆ. ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಕರೆತರಲು ಏರ್​ಫೋರ್ಸ್ ವಿಮಾನಗಳೂ ಸಂಚರಿಸುತ್ತಿವೆ. ಇಂದು ಬಂದವರನ್ನೂ ಸೇರಿಸಿ, ಇಲ್ಲಿಯವರೆಗೆ ರೊಮೇನಿಯಾ, ಹಂಗೇರಿ, ಸ್ಲೊವಾಕಿಯಾ, ಮೊಲ್ಡೊವಾ, ಪೋಲ್ಯಾಂಡ್​ ರಾಷ್ಟ್ರಗಳ ಮೂಲಕ ಸುಮಾರು 15 ಸಾವಿರ ಭಾರತೀಯರನ್ನು ವಾಪಸ್​ ಕರೆತರಲಾಗಿದೆ.  ಇನ್ನೊಂದೆಡೆ ಭಾರತ ಉಕ್ರೇನ್​ಗೆ ಔಷಧ, ಆಹಾರ ಸೇರಿ ಇನ್ನಿತರ ಅಗತ್ಯ ವಸ್ತುಗಳ ಪೂರೈಕೆಯನ್ನೂ ಮಾಡುತ್ತಿದೆ.

ಇದನ್ನೂ ಓದಿ: ಬಿಜೆಪಿ ಯಾವುದೇ ಮುಸಲ್ಮಾನನಿಗೆ ಬೇಕಾದರೂ ದಾವೂದ್ ಇಬ್ರಾಹಿಂ ನಂಟು ಕಲ್ಪಿಸುತ್ತದೆ: ಶರದ್​ ಪವಾರ್​ ಆರೋಪ

Published On - 6:42 pm, Sun, 6 March 22