ಉರಿ ವಲಯದ ಬಳಿ ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ; ಮೊನ್ನೆಯಷ್ಟೇ ಒಳನುಸುಳಿದ್ದ ಭಯೋತ್ಪಾದಕರು

| Updated By: Lakshmi Hegde

Updated on: Sep 23, 2021 | 5:59 PM

ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರು ಒಳನುಸುಳುವುದನ್ನು ಭಾರತೀಯ ಸೇನೆ ತಡೆಯುತ್ತಿದೆ. ಆದರೆ ಈ ಮೂವರು ಉಗ್ರರು ಸೋಮವಾರವೇ ಭಾರತದತ್ತ ಬಂದಿದ್ದರು.

ಉರಿ ವಲಯದ ಬಳಿ ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ; ಮೊನ್ನೆಯಷ್ಟೇ ಒಳನುಸುಳಿದ್ದ ಭಯೋತ್ಪಾದಕರು
ಭಾರತೀಯ ಯೋಧರು
Follow us on

ಇಂದು ಭಾರತೀಯ ಸೇನೆ ಮೂವರು ಪಾಕ್​ ಉಗ್ರ (Pakistani Terrorists)ರನ್ನು ಉರಿ (Uri Sector) ಬಳಿಯ ಗಡಿನಿಯಂತ್ರಣ ರೇಖೆಯಲ್ಲಿರುವ ರಾಂಪುರ ಸೆಕ್ಟರ್​​ನ ಬಳಿ ಹತ್ಯೆಗೈದಿದ್ದಾರೆ. ಈ ಭಯೋತ್ಪಾದಕರು ಇತ್ತೀಚೆಗಷ್ಟೇ ಪಾಕ್ ಆಕ್ರಮಿತ ಕಾಶ್ಮೀರ (POK)ದಿಂದ ಭಾರತದ ಕಡೆಗೆ ನುಸುಳಿದ್ದರು.  ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ, ಅವರಿಂದ 5 ಎಕೆ 47 ಬಂದೂಕುಗಳು, 8 ಪಿಸ್ತೂಲ್​  ಮತ್ತು 70 ಹ್ಯಾಂಡ್​ ಗ್ರೆನೇಡ್​ಗಳನ್ನು ವಶಪಡಿಸಿಕೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.  

ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರು ಒಳನುಸುಳುವುದನ್ನು ಭಾರತೀಯ ಸೇನೆ ತಡೆಯುತ್ತಿದೆ. ಆದರೆ ಈ ಮೂವರು ಉಗ್ರರು ಸೋಮವಾರವೇ ಭಾರತದತ್ತ ಬಂದಿದ್ದರು. ಅವರ ಮೇಲೆ ಒಂದು ಕಣ್ಣಿಟ್ಟಿದ್ದ ಭದ್ರತಾ ಪಡೆ ಇಂದು ಮೂವರನ್ನೂ ಕೊಂದು ಹಾಕಿದೆ.  ಒಳನುಸುಳುವ ಭಯೋತ್ಪಾದಕ ವಿರುದ್ಧ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದೆ. ಕಳೆದ 30 ತಾಸುಗಳಿಂದಲೂ ಇಲ್ಲಿ ಭದ್ರತಾ ಪಡೆಗಳು ಕಾರ್ಯನಿರತವಾಗಿವೆ. ಈ ಸ್ಥಳವನ್ನು ಸುತ್ತುವರಿದಿವೆ.

ಅಫ್ಘಾನ್ ಉಗ್ರರು ಭಾರತಕ್ಕೆ
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಫ್ಘಾನ್​ ಉಗ್ರರೂ ಕೂಡ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ಗುಪ್ತಚರ ದಳ ನೀಡಿದೆ. ಭಾರತದಲ್ಲಿ ಅಫ್ಘಾನಿಸ್ತಾನದ ಭಯೋತ್ಪಾದಕರೂ ಕೂಡ ದೊಡ್ಡಮಟ್ಟದ ದಾಳಿ ನಡೆಸಬಹುದು. ದೊಡ್ಡ ಸೇನಾ ಶಿಬಿರಗಳು ಅಥವಾ ಸರ್ಕಾರಿ ಸಂಸ್ಥೆಗಳೇ ಟಾರ್ಗೆಟ್​ ಆಗಲಿವೆ. ಈ ಉಗ್ರರಿಗೆ ಭಾರತಕ್ಕೆ ನುಸುಳಲು ಪಾಕಿಸ್ತಾನ ಸಹಕಾರ ನೀಡುತ್ತಿದೆ ಎಂದೂ ಹೇಳಿದೆ.

ಇದನ್ನೂ ಓದಿ: ಗೆಲಾಕ್ಸಿ ಎ73 ಸರಣಿ ಫೋನ್​​ಗಳ ಬಿಡುಗಡೆಗೆ ಸಿದ್ಧತೆ ನಡೆಸಿರುವ ಸ್ಯಾಮ್ಸಂಗ್, ಇವು 108 ಎಮ್ ಪಿ ಮೇನ್ ಕೆಮೆರಾ ಹೊಂದಿರಲಿವೆ

ಅಪಘಾತಕ್ಕೆ ಪರಿಹಾರ ನೀಡಿಲ್ಲ; ದಾವಣಗೆರೆಯಲ್ಲಿ ಎರಡು ಸರ್ಕಾರಿ ಬಸ್​ಗಳು ಜಪ್ತಿ

(Indian Army kills 3 Pakistani terrorists in LoC near Uri sector)