ಭಾರತ ಖರೀದಿಸುತ್ತಿದೆ 72,000 Assault Rifles, ಯಾತಕ್ಕೆ ಗೊತ್ತಾ?

|

Updated on: Jul 13, 2020 | 8:31 AM

ದೆಹಲಿ: ಚೀನಾ ಮತ್ತು ಭಾರತದ ನಡುವೆ ಇರುವ ಗಡಿ ವಿವಾದದಿಂದಾಗಿ ಅನೇಕ ಬೆಳವಣಿಗೆಗಳು ಸಂಭವಿಸಿವೆ. ಈ ಸಮಯದಲ್ಲಿ ಭಾರತೀಯ ಸೇನೆ ಒಂದು ಹೆಜ್ಜೆ ಮುಂದೆ ಹೋಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೈನಿಕರಿಗಾಗಿ ಹೆಚ್ಚುವರಿ 72,000 Sig 716 ಅಸ್ಸಾಲ್ಟ್ ರೈಫಲ್‌ಗಳನ್ನು ಅಮೆರಿಕದಿಂದ ಖರೀದಿಸಲು ಮುಂದಾಗಿದೆ. ಆಕ್ರಮಣಕಾರಿ ರೈಫಲ್‌ಗಳ ಎರಡನೇ ಬ್ಯಾಚ್‌ನ ಆದೇಶವು ಮೊದಲ 72,000 ರೈಫಲ್‌ಗಳ ನಂತರ ಬರಲಿದೆ. ಈಗಾಗಲೇ ಉತ್ತರ ಕಮಾಂಡ್ ಮತ್ತು ಇತರ ಕಾರ್ಯಾಚರಣೆಯ ಪ್ರದೇಶಗಳಲ್ಲಿನ ಸೈನಿಕರ ಬಳಕೆಗಾಗಿ ಕೆಲ ರೈಫಲ್‌ಗಳನ್ನು ಸೈನ್ಯಕ್ಕೆ ತಲುಪಿಸಲಾಗಿದೆ. […]

ಭಾರತ ಖರೀದಿಸುತ್ತಿದೆ 72,000 Assault  Rifles, ಯಾತಕ್ಕೆ ಗೊತ್ತಾ?
Follow us on

ದೆಹಲಿ: ಚೀನಾ ಮತ್ತು ಭಾರತದ ನಡುವೆ ಇರುವ ಗಡಿ ವಿವಾದದಿಂದಾಗಿ ಅನೇಕ ಬೆಳವಣಿಗೆಗಳು ಸಂಭವಿಸಿವೆ. ಈ ಸಮಯದಲ್ಲಿ ಭಾರತೀಯ ಸೇನೆ ಒಂದು ಹೆಜ್ಜೆ ಮುಂದೆ ಹೋಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೈನಿಕರಿಗಾಗಿ ಹೆಚ್ಚುವರಿ 72,000 Sig 716 ಅಸ್ಸಾಲ್ಟ್ ರೈಫಲ್‌ಗಳನ್ನು ಅಮೆರಿಕದಿಂದ ಖರೀದಿಸಲು ಮುಂದಾಗಿದೆ.

ಆಕ್ರಮಣಕಾರಿ ರೈಫಲ್‌ಗಳ ಎರಡನೇ ಬ್ಯಾಚ್‌ನ ಆದೇಶವು ಮೊದಲ 72,000 ರೈಫಲ್‌ಗಳ ನಂತರ ಬರಲಿದೆ. ಈಗಾಗಲೇ ಉತ್ತರ ಕಮಾಂಡ್ ಮತ್ತು ಇತರ ಕಾರ್ಯಾಚರಣೆಯ ಪ್ರದೇಶಗಳಲ್ಲಿನ ಸೈನಿಕರ ಬಳಕೆಗಾಗಿ ಕೆಲ ರೈಫಲ್‌ಗಳನ್ನು ಸೈನ್ಯಕ್ಕೆ ತಲುಪಿಸಲಾಗಿದೆ.

ಸಶಸ್ತ್ರ ಪಡೆಗಳಿಗೆ ನೀಡಲಾದ ಹಣಕಾಸಿನ ಅಧಿಕಾರಗಳ ಅಡಿಯಲ್ಲಿ ಈ ಹೆಚ್ಚಿನ 72,000 ರೈಫಲ್‌ಗಳಿಗೆ ಆದೇಶ ನೀಡಲಿದ್ದೇವೆ ಎಂದು ಕೆಲ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಯು ತನ್ನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚಿಸಲು ಮೊದಲ ಬಾರಿಗೆ ಸಿಗ್ ಸೌರ್(Sig Sauer) ದಾಳಿ ರೈಫಲ್‌ಗಳನ್ನು ಪಡೆದಿತ್ತು.