ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕೆ ಅನುಮತಿ ನಿರಾಕರಿಸಿದ ಡಿಸಿಜಿಐ; ಸಿಂಗಲ್​ ಡೋಸ್​ ವ್ಯಾಕ್ಸಿನ್​ ಬಳಕೆ ಸದ್ಯಕ್ಕಿಲ್ಲ

| Updated By: Lakshmi Hegde

Updated on: Jul 01, 2021 | 12:22 PM

Sputnik Light: ಕೇಂದ್ರ ಸರ್ಕಾರ ರಚಿಸಿರುವ ಕೊವಿಡ್​ 19 ಸಂಬಂಧಿತ ವಿಷಯ ತಜ್ಞರ ಸಮಿತಿ ಡಾ.ರೆಡ್ಡಿ ಲ್ಯಾಬೋರೇಟರೀಸ್​ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ಮಾಡಿತ್ತು. ಈ ಸ್ಪುಟ್ನಿಕ್​​​ ಲೈಟ್​ ಲಸಿಕೆಗೆ ಭಾರತದಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ. ಒಂದೊಮ್ಮೆ ಈ ಲಸಿಕೆಗೆ ಭಾರತದಲ್ಲಿ ಬಳಕೆಗೆ ಅನುಮೋದನೆ ಸಿಕ್ಕರೆ ಒಂದು ಡೋಸ್​ಗೆ 730 ರೂ.ಇರಲಿದೆ.

ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗಕ್ಕೆ ಅನುಮತಿ ನಿರಾಕರಿಸಿದ ಡಿಸಿಜಿಐ; ಸಿಂಗಲ್​ ಡೋಸ್​ ವ್ಯಾಕ್ಸಿನ್​ ಬಳಕೆ ಸದ್ಯಕ್ಕಿಲ್ಲ
ಸ್ಪುಟ್ನಿಕ್ ಲೈಟ್​
Follow us on

ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆಯ ಮೊದಲ ಡೋಸ್​​ನ ಪರಿಷ್ಕೃತ ಲಸಿಕೆಯಾದ ಸ್ಪುಟ್ನಿಕ್​ ಲೈಟ್​ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನಿರಾಕರಿಸಿದೆ. ಸ್ಪುಟ್ನಿಕ್​ ಲೈಟ್​ ಒಂದೇ ಡೋಸ್​​​ನ ಲಸಿಕೆಯಾಗಿದ್ದು, ಇದನ್ನು ಪಡೆದವರು ಎರಡನೇ ಡೋಸ್​ ಪಡೆಯಬೇಕಿಲ್ಲ. ರಷ್ಯಾದ ಸ್ಪುಟ್ನಿಕ್​ ಲೈಟ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಹೈದರಾಬಾದ್​​ನ ಡಾ. ರೆಡ್ಡಿ ಪ್ರಯೋಗಾಲಯ ಅನುಮತಿ ಕೇಳಿತ್ತು. ಆದರೆ ಕೇಂದ್ರದ ತಜ್ಞರ ಸಮಿತಿ ಶಿಫಾರಸ್ಸಿನ ಅನ್ವಯ ಡಿಸಿಜಿಐ ನಿರಾಕರಿಸಿದೆ.

ಕೇಂದ್ರ ಸರ್ಕಾರ ರಚಿಸಿರುವ ಕೊವಿಡ್​ 19 ಸಂಬಂಧಿತ ವಿಷಯ ತಜ್ಞರ ಸಮಿತಿ ಡಾ.ರೆಡ್ಡಿ ಲ್ಯಾಬೋರೇಟರೀಸ್​ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ಮಾಡಿತ್ತು. ಈ ಸ್ಪುಟ್ನಿಕ್​​​ ಲೈಟ್​ ಲಸಿಕೆಗೆ ಭಾರತದಲ್ಲಿ ಇನ್ನೂ ಅನುಮೋದನೆ ಸಿಕ್ಕಿಲ್ಲ. ಒಂದೊಮ್ಮೆ ಈ ಲಸಿಕೆಗೆ ಭಾರತದಲ್ಲಿ ಬಳಕೆಗೆ ಅನುಮೋದನೆ ಸಿಕ್ಕರೆ ಒಂದು ಡೋಸ್​ಗೆ 730 ರೂ.ಇರಲಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಕೊವ್ಯಾಕ್ಸಿನ್​, ಕೊವಿಶೀಲ್ಡ್ ಲಸಿಕೆಗಳೊಂದಿಗೆ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆಯ ಎರಡು ಡೋಸ್​ಗಳನ್ನು ನೀಡಲಾಗುತ್ತಿದೆ. ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಡಿಸಿಜಿಐ ಏಪ್ರಿಲ್​​ನಲ್ಲೇ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದ್​ನ ಡಾ. ರೆಡ್ಡೀಸ್​ ಲ್ಯಾಬೋರೇಟರೀಸ್​ ಉತ್ಪಾದನೆ ಮಾಡುತ್ತಿದೆ.

ರಷ್ಯಾದ ಸ್ಪುಟ್ನಿಕ್​ ಲೈಟ್​ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿದ್ದು, ಅದನ್ನು ಭಾರತಕ್ಕೆ ತರಲು ನಮ್ಮ ರೆಡ್ಡೀಸ್ ಪ್ರಯೋಗಾಲಯ ಡಿಸಿಐಜಿನೊಂದಿಗೆ ಸೇರಿ ಪ್ರಯತ್ನ ಮಾಡುತ್ತಿದೆ ಎಂದು ಲ್ಯಾಬೋರೇಟರಿಯ ಸಿಇಒ ದೀಪಕ್​ ಸಪ್ರಾ ಇಂಡಿಯಾ ಟುಡೆಗೆ ತಿಳಿಸಿದ್ದಾರೆ. ಹೇಗಾದರೂ ಈ ಸ್ಪುಟ್ನಿಕ್​ ಲೈಟ್​ ಭಾರತದಲ್ಲಿ ಬಳಕೆಗೆ ಲಭ್ಯವಾದರೆ ದೇಶದ ಕೊರೊನಾ ಲಸಿಕೆ ಅಭಿಯಾನ ತುಂಬ ವೇಗವಾಗಿ ಸಾಗುತ್ತದೆ. ಇದು ಒಂದೇ ಡೋಸ್ ಆಗಿರುವುದಿಂರ ಒಂದೇ ಬಾರಿಗೆ ಮುಕ್ತಾಯವಾಗಲಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೆಎಸ್​ಆರ್​ ರೈಲ್ವೆ ನಿಲ್ದಾಣದಲ್ಲಿ ಭಾರತದ ಮೊದಲ ಸುರಂಗ ಅಕ್ವೇರಿಯಂ ಆರಂಭ