ಶ್ರೀನಗರ: ಶಾಹಿದ್ ನಜೀರ್ ಭಟ್ ಜೂನ್ 21 ರ ಬೆಳಿಗ್ಗೆ ವಾಯುವಿಹಾರಕ್ಕೆ ಮನೆಯಿಂದ ಹೊರಟಿದ್ದರು. ಆನಂತರ ಅವರ ಕುಟುಂಬದವರಿಗೆ ಕಾಣಲು ಸಿಕ್ಕಿಲ್ಲ. ಮನೆಯಿಂದ ಹೊರಟ ನಂತರ ಅವರನ್ನು ಯಾರೂ ನೋಡಿಲ್ಲ. ಎರಡು ದಿನಗಳವರೆಗೆ, ಭಟ್ ಸಿಖ್ ಸಮುದಾಯದ ಮಹಿಳೆಯೊಂದಿಗೆ ಓಡಿಹೋಗಿದ್ದಾರೆ ಮತ್ತು ಆಕೆಯ ಕುಟುಂಬವು ದೂರು ನೀಡಿದೆ ಎಂದು ಪೊಲೀಸರು ಬಂದು ಭಟ್ ಮನೆಯ ಬಾಗಿಲು ಬಡಿದಾಗಲೇ ವಿಷಯ ಗೊತ್ತಾಗಿದ್ದು.
ಯುವತಿಯ ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ 29 ವರ್ಷದ ಭಟ್ ನ್ನು ಬಂಧಿಸಲಾಗಿದ್ದು ಸಿಖ್ ಮಹಿಳೆಯನ್ನು ಮದುವೆಗಾಗಿ ಬಲವಂತವಾಗಿ ಮತಾಂತರಗೊಳಿಸಿದ ಆರೋಪವೂ ಇವರ ಮೇಲಿದ. ಈ ವಿಚಾರ ಕೇಂದ್ರ ಗೃಹ ಸಚಿವಾಲಯಕ್ಕೂ ತಲುಪಿದೆ .ಮನ್ಮೀತ್ ಕೌರ್ ಅವರೊಂದಿಗಿನ ಸಂಬಂಧದ ಬಗ್ಗೆ ನಮಗೆ ಒಪ್ಪಿಗೆ ಇಲ್ಲ ಎಂದು ಭಟ್ ಕುಟುಂಬ ಹೇಳಿದೆ.
ಮಂಗಳವಾರ, ಅವಳನ್ನು ತನ್ನ ಕುಟುಂಬಕ್ಕೆ ಹಸ್ತಾಂತರಿಸಿದ ನಂತರ, ಕೌರ್ ಸಿಖ್ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿದ್ದು ಆ ಕುಟುಂಬ ಈಗ ದೆಹಲಿಯಲ್ಲಿದೆ.
ಶ್ರೀನಗರದ ರೈನವಾರಿ ಮೂಲದ ಭಟ್ ಅವರ ಕುಟುಂಬವು ತಮ್ಮ ಮಗ ವಿಚ್ಛೇದನ ಪಡೆದಿದ್ದಾನೆ ಎಂದು ಹೇಳಿದ್ದು ,ಅವರೊಂದಿಗೆ ಆರು ವರ್ಷದ ಮಗಳು ಕೂಡಾ ವಾಸಿಸುತ್ತಾಳೆ. “ಮದುವೆಯಾದ ಎರಡು ವರ್ಷಗಳ ನಂತರ ಅವನು ಮತ್ತು ಅವನ ಹೆಂಡತಿ ವಿಚ್ಛೇದನ ಪಡೆದರು” ಎಂದು ಹಿರಿಯ ಸಹೋದರಿ ರುಕೈಯಾ ಭಟ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇಡೀ ಕುಟುಂಬ ಕಮ್ಮಾರ ವೃತ್ತಿಯಲ್ಲಿರುವ ಭಟ್ ಅವರ ಅಪ್ಪನ ಸಂಪಾದನೆ ಮೇಲೆ ಅವಲಂಬಿತವಾಗಿದೆ. ಪ್ರವಾಸ ಮತ್ತು ಟ್ರಾವೆಲ್ ಆಪರೇಟರ್ನೊಂದಿಗೆ ಆಗಾಗ ಕೆಲಸಗಳನ್ನು ಮಾಡಿ ಭಟ್ ತನ್ನ ತಂದೆಗೆ ಸಹಾಯ ಮಾಡುತ್ತಾನೆ. ಅವರ ಮೂವರು ಹಿರಿಯ ಸಹೋದರಿಯರು ಅವಿವಾಹಿತರಾಗಿದ್ದು ಕುಟುಂಬದೊಂದಿಗೆ ಇದ್ದಾರೆ.
ಕೌರ್ -ಭಟ್ ಸಂಬಂಧದ ಬಗ್ಗೆ ಕುಟುಂಬಕ್ಕೆ ಒಪ್ಪಿಗೆ ಇರಲಿಲ್ಲ ಎಂದು ರುಕೈಯಾ ಹೇಳುತ್ತಾರೆ. “ನನ್ನ ಸಹೋದರನಿಗೆ ಒಂದು ಮಗು ಇದೆ ಮತ್ತು ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ನಾನು ಅವರ ಕುಟುಂಬಕ್ಕೆ ತಿಳಿಸಿದೆ.” ಕುಟುಂಬದ ಮನೆಯಲ್ಲಿ ವಾಸಿಸುವ ಮತ್ತು ಹೆಸರು ಹೇಳಲು ಬಯಸ ಚಿಕ್ಕಮ್ಮ, “ಅವರು ಇದನ್ನು ಮಾಡುತ್ತಾರೆಂದು ಯಾರಿಗೂ ತಿಳಿದಿರಲಿಲ್ಲ” ಎಂದು ಹೇಳುತ್ತಾರೆ.
ಕರೆ ಬಂದ ಕೂಡಲೇ ಜೂನ್ 21 ರಂದು ಬೆಳಿಗ್ಗೆ 7 ಗಂಟೆಗೆ ಭಟ್ ಮನೆಯಿಂದ ಹೊರಟುಹೋದರು ಎಂದು ರುಕೈಯಾ ಹೇಳುತ್ತಾರೆ. “ಅವರು 9 ರ ಹೊತ್ತಿಗೆ ಹಿಂತಿರುಗುತ್ತಾರೆ ಎಂದು ನಾವು ಭಾವಿಸಿದ್ದೆವು.” ಅವನು ಮನೆಗೆ ಹಿಂತಿರುಗದಿದ್ದಾಗ, ಅವನು ತನ್ನ ಸ್ನೇಹಿತರೊಂದಿಗೆ ಎಲ್ಲೋ ಹೋಗಿದ್ದನೆಂದು ಕುಟುಂಬ ಭಾವಿಸಿದೆ ಎಂದಿದ್ದಾರೆ.
ಈ ಸಮಯದಲ್ಲಿ ಭಟ್ ಮತ್ತು ಕೌರ್ ವಿವಾಹವಾಗಿದ್ದಾರೆ ಎಂದು ಕುಟುಂಬಕ್ಕೆ ತಿಳಿದಿಲ್ಲ ಎಂದು ರುಕೈಯಾ ಹೇಳುತ್ತಾರೆ. “ಅವರು ನಿಕಾಹ್ ಹೊಂದಿದ್ದರೆ ನನಗೇನೂ ಹೇಳಲು ಸಾಧ್ಯವಿಲ್ಲ. ಅವನು ಹೊರಟುಹೋದ ಸಮಯದಿಂದ, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳುವವರೆಗೂ ನಾವು ಅವರೊಂದಿಗೆ ಯಾವುದೇ ಸಂವಹನ ನಡೆಸಲಿಲ್ಲ.
ಪೊಲೀಸರ ಪ್ರಕಾರ, ಜೂನ್ 25 ರಂದು ಭಟ್ ಮತ್ತು ಕೌರ್ ರೈನಾವರಿ ಪೊಲೀಸ್ ಠಾಣೆಗೆ ಹೋಗಿದ್ದಾರೆ . ಅವರು ಯಾಕೆ ಅಲ್ಲಿಗೆ ಬಂದರು ಎಂಬ ಬಗ್ಗೆ ಮೌನ ತಾಳಿರುವ ಪೊಲೀಸರು ಕೌರ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಅವಳು ತನ್ನ ಹೇಳಿಕೆಯನ್ನು ದಾಖಲಿಸಿದ ನಂತರ ಅವಳನ್ನು ಅವಳ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ನ್ಯಾಯಾಲಯಕ್ಕೆ ಪ್ರವೇಶಿಸಲು ಆಕೆಯ ಪೋಷಕರಿಗೆ ನಿರಾಕರಿಸಲಾಗಿತ್ತು. ಅವರು ಸಿಖ್ ಸಂಘಟನೆಗಳ ಸದಸ್ಯರೊಂದಿಗೆ ಹೊರಗೆ ಪ್ರತಿಭಟನೆ ನಡೆಸಿದರು.
ಜೂನ್ 28 ರಂದು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಸಿಖ್ ಮಹಿಳೆಯರನ್ನು “ಬಲವಂತವಾಗಿ ಮತಾಂತರಗೊಳಿಸಿ ಮದುವೆಯಾಗಿದ್ದಾರೆ” ಎಂದು ಆರೋಪಿಸಿದರು. ಆದರೆ, ಸ್ಥಳೀಯ ಸಿಖ್ ನಾಯಕತ್ವ ಇದನ್ನು ನಿರಾಕರಿಸಿದೆ. ಕಾಶ್ಮೀರದ ಆಲ್ ಪಾರ್ಟಿ ಸಿಖ್ ಸಮನ್ವಯ ಸಮಿತಿಯ ಅಧ್ಯಕ್ಷ ಜಗ್ಮೋಹನ್ ಸಿಂಗ್ ರೈನಾ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ, “ಹೊರಗಿನ ಜನರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಯಸುತ್ತಾರೆ ಎಂದು ಹೇಳಿದ್ದರು.
ಆದರೆ, ಬುಧವಾರ ರೈನಾ ಅವರು ಅಂತರ್ಜಾತಿ ವಿವಾಹ ಕಾಯ್ದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. “ನಾನು, ಸಿಖ್ ಸಮುದಾಯದ ಪರವಾಗಿ, ಅಂತರ್ಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತರಬೇಕೆಂದು ವಿನಂತಿಸುತ್ತೇನೆ. ಈ ಕಾಯ್ದೆಯನ್ನು ಜಾರಿಗೆ ತಂದ ನಂತರ, ಅಂತರ್ಜಾತಿ ವಿವಾಹಗಳು ಕೊನೆಗೊಳ್ಳುತ್ತವೆ, ”ಎಂದು ಅವರು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ನ್ಯಾಯಾಲಯದಲ್ಲಿ ಭಟ್ ಜಾಮೀನು ಪಡೆಯಲು ಹೋರಾಡಲು ಅವರಿಗೆ ಯಾವುದೇ ಸಂಪನ್ಮೂಲಗಳಿಲ್ಲ .ಮುತಾಹಿದಾ ಮಜ್ಲಿಸ್-ಎ-ಉಲೆಮಾದಲ್ಲಿ ಸಿಖ್ ಸಮುದಾಯದೊಂದಿಗೆ “ಸಂಧಾನ” ಕ್ಕೆ ಮಾತುಕತೆ ನಡೆಸುತ್ತಿದೆ.
ಕೌರ್ ಈಗ ಬೇರೊಬ್ಬರನ್ನು ಮದುವೆಯಾದಾಗ, “ಇದೆಲ್ಲವೂ ಮುಗಿದು ಭಟ್ ನ್ನು ಬಿಡುಗಡೆ ಮಾಡಬಹುದೆಂದು ಎಂದು ಭಟ್ ಕುಟುಂಬ ನಿರೀಕ್ಷೆ ಹೊಂದಿದೆ.
ಕೌರ್ ಇನ್ನೂ ರಾಜಧಾನಿಯಲ್ಲಿಯೇ ಇದ್ದಾರೆ ನಂಬಲಾಗಿದೆ.ಆಕೆ ಕೊನೆಯದಾಗಿ ಮಂಗಳವಾರ ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ಕಾಣಿಸಿಕೊಂಡಿತು. ಆಕೆಯನ್ನು ಸಂಪರ್ಕಿಸಲಾಗಲಿಲ್ಲ. ರೈನಾವರಿಯಲ್ಲಿಅವಳು ಈಗ ಮದುವೆಯಾದ ವ್ಯಕ್ತಿಯ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಭಟ್ ಕುಟುಂಬ ಹೇಳಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ‘ಬಲವಂತದ ಮತಾಂತರ ಮತ್ತು ವಿವಾಹ’ದ ವಿರುದ್ಧ ಸಿಖ್ ಸಮುದಾಯದ ಪ್ರತಿಭಟನೆ
Published On - 1:19 pm, Thu, 1 July 21