ಕೊರೊನಾ ಲಸಿಕೆ ‘ಆತ್ಮನಿರ್ಭರ ಭಾರತ‘ದ ಸಂಕೇತ: ಗೃಹ ಸಚಿವ ಅಮಿತ್​ ಶಾ

| Updated By: KUSHAL V

Updated on: Jan 16, 2021 | 4:12 PM

ವಿಶ್ವದಲ್ಲೇ ದೊಡ್ಡಮಟ್ಟದ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಭಾರತ ಸಾಕ್ಷಿಯಾಗಿದೆ. ಇದು ಆತ್ಮನಿರ್ಭರ ಭಾರತದ ಸಂಕೇತವಾಗಿದ್ದು, ದೇಶ ಕೊರೊನಾ ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆ ‘ಆತ್ಮನಿರ್ಭರ ಭಾರತ‘ದ ಸಂಕೇತ: ಗೃಹ ಸಚಿವ ಅಮಿತ್​ ಶಾ
ಗೃಹ ಸಚಿವ ಅಮಿತ್​ ಶಾ
Follow us on

ದೆಹಲಿ: ವಿಶ್ವದಲ್ಲೇ ದೊಡ್ಡಮಟ್ಟದ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಭಾರತ ಸಾಕ್ಷಿಯಾಗಿದೆ. ಇದು ಆತ್ಮನಿರ್ಭರ ಭಾರತದ ಸಂಕೇತವಾಗಿದ್ದು, ದೇಶ ಕೊರೊನಾ ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾವನ್ನು ಮಣಿಸಲು ಯಶಸ್ವಿ ಲಸಿಕೆ ತಯಾರಿಸಿದ ಕೆಲವೇ ಕೆಲವು ದೇಶಗಳ ಪೈಕಿ ಭಾರತವೂ ಒಂದು. ಮಾನವ ಕುಲವನ್ನು ಕಾಡುತ್ತಿರುವ ದೊಡ್ಡ ಹೆಮ್ಮಾರಿಯನ್ನು ಶಮನ ಮಾಡಲು ನಾವು ತಯಾರಾಗಿದ್ದೇವೆ. ಇದಕ್ಕಾಗಿ ನಮ್ಮ ದೇಶದ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರ ಆಡಳಿತ ನವ ಭಾರತದ ಬಿಕ್ಕಟ್ಟನ್ನು ಹೊಸ ಭರವಸೆಯನ್ನಾಗಿಸಿ ಪರಿವರ್ತಿಸುವ ಶಕ್ತಿ ಹೊಂದಿದೆ. ಸಂಕಷ್ಟದ ಸಂದರ್ಭದಲ್ಲಿ ಹೊಸ ಅವಕಾಶಗಳನ್ನು ಹುಡುಕಿಕೊಂಡು ಸವಾಲು ಎದುರಿಸುವುದನ್ನು ಕಲಿತಿದ್ದೇವೆ. ಭಾರತದಲ್ಲೇ ತಯಾರಾದ ಕೊರೊನಾ ಲಸಿಕೆಗಳು ಆತ್ಮನಿರ್ಭರ ಭಾರತದ ಸಂಕೇತವಾಗಿದ್ದು, ಈ ಐತಿಹಾಸಿಕ ದಿನದಂದು ಕೊರೊನಾ ವಿರುದ್ಧ ಹೋರಾಡಿದ ಎಲ್ಲರಿಗೂ ತಲೆಬಾಗುತ್ತೇನೆ ಎಂದು ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.

 

ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ನರ್ಸ್​ಗೆ ತಿಳಿಯಹೇಳಿ, ಮನವೊಲಿಸಿದ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು

Published On - 4:11 pm, Sat, 16 January 21