ಪಣಜಿ: ನವೆಂಬರ್ 26ರಂದು ಪತನಗೊಂಡಿದ್ದ ನೌಕಾಪಡೆಯ ಮಿಗ್-29K ತರಬೇತಿ ವಿಮಾನದಿಂದ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
ಬರೋಬ್ಬರಿ 11 ದಿನಗಳ ದೀರ್ಘ ಶೋಧಕಾರ್ಯದ ನಂತರ 70 ಅಡಿ ಸಮುದ್ರದಾಳದಲ್ಲಿ ನಿಶಾಂತ್ ಮೃತದೇಹವನ್ನು ನೌಕಾಪಡೆ ಪತ್ತೆಹಚ್ಚಿದೆ. ನಿಶಾಂತ್ ಸಿಂಗ್ ಜೊತೆಗಿದ್ದ ಮತ್ತೋರ್ವ ಪೈಲಟ್ನ್ನು ಭಾರತೀಯ ನೌಕಾಪಡೆ ಅಪಘಾತದ ದಿನವೇ ರಕ್ಷಿಸಿತ್ತು. ಆದರೆ, ಪತನವಾದ ವಿಮಾನದಿಂದ ಪಾರಾಗಿದ್ದ ನಿಶಾಂತ್ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ, ಪೈಲಟ್ನ ಮೃತದೇಹ ಪತ್ತೆಯಾಗಿದೆ.
ಕಾರವಾರ: 8 ದಿನವಾದರೂ ಸಿಗಲಿಲ್ಲ ನಿಶಾಂತ್ ಸುಳಿವು.. ಏನಾದರು ಲೆಫ್ಟಿನೆಂಟ್ ಕಮಾಂಡರ್?