ಇಡೀ ವಿಶ್ವಕ್ಕೇ ಕೊರೊನಾ ಔಷಧ ತಯಾರಿಸುವ ಸಾಮರ್ಥ್ಯ ಭಾರತಕ್ಕಿದೆ -ಬಿಲ್ ಗೇಟ್ಸ್

|

Updated on: Jul 16, 2020 | 6:32 PM

ಕೊರೊನಾ ಸೋಂಕು ಇಡೀ ದೇಶವನ್ನು ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿದೆ. ಕ್ರೂರಿ ಸಿಕ್ಕ ಸಿಕ್ಕವರ ಕೊರಳಿಗೆ ಸುತ್ತಿಕೊಳ್ತಿದೆ. ಬಲಿಗಾಗೇ ಹೊಂಚು ಹಾಕಿ ಎಲ್ಲರ ಜೀವಗಳನ್ನ ಹೊಸಕಿ ಹಾಕ್ತಿದೆ. ಈ ನಡುವೆ ಎಲ್ಲರೂ ಕಾತುರದಿಂದ ಕಾಯುತ್ತಿವುದು ಕೊರೊನಾ ಲಸಿಕೆಯಾಗಿ. ಯಾವ ದೇಶವಾದ್ರೂ ಲಸಿಕೆ ಬೇಗ ಕಂಡುಹಿಡಿಯಲಿ ಎಂದು ಅದೆಷ್ಟೂ ಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೇವಲ ತನಗಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಭಾರತದ ಔಷಧೋದ್ಯಮಕ್ಕೆ ಇದೆ […]

ಇಡೀ ವಿಶ್ವಕ್ಕೇ ಕೊರೊನಾ ಔಷಧ ತಯಾರಿಸುವ ಸಾಮರ್ಥ್ಯ ಭಾರತಕ್ಕಿದೆ -ಬಿಲ್ ಗೇಟ್ಸ್
ಬಿಲ್ ಗೇಟ್ಸ್ (ಸಂಗ್ರಹ ಚಿತ್ರ)
Follow us on

ಕೊರೊನಾ ಸೋಂಕು ಇಡೀ ದೇಶವನ್ನು ತನ್ನ ಕಂಟ್ರೋಲ್​ಗೆ ತೆಗೆದುಕೊಂಡಿದೆ. ಕ್ರೂರಿ ಸಿಕ್ಕ ಸಿಕ್ಕವರ ಕೊರಳಿಗೆ ಸುತ್ತಿಕೊಳ್ತಿದೆ. ಬಲಿಗಾಗೇ ಹೊಂಚು ಹಾಕಿ ಎಲ್ಲರ ಜೀವಗಳನ್ನ ಹೊಸಕಿ ಹಾಕ್ತಿದೆ. ಈ ನಡುವೆ ಎಲ್ಲರೂ ಕಾತುರದಿಂದ ಕಾಯುತ್ತಿವುದು ಕೊರೊನಾ ಲಸಿಕೆಯಾಗಿ. ಯಾವ ದೇಶವಾದ್ರೂ ಲಸಿಕೆ ಬೇಗ ಕಂಡುಹಿಡಿಯಲಿ ಎಂದು ಅದೆಷ್ಟೂ ಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೇವಲ ತನಗಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಭಾರತದ ಔಷಧೋದ್ಯಮಕ್ಕೆ ಇದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಬಹಳಷ್ಟು ಮುಖ್ಯವಾದ ಕೆಲಸಗಳು ನಡೆದಿವೆ. ಭಾರತದ ಔಷಧೀಯ ಉದ್ಯಮವು ಕೊರೊನಾ ವೈರಸ್ ಲಸಿಕೆಯನ್ನು ಕಂಡುಹಿಡಿಯಲು ಇತರ ಕಾಯಿಲೆಗಳ ಲಸಿಕೆಗಳಿಗೆ ಬಳಸಿದ ಔಷಧದ ಅಂಶಗಳನ್ನು ಪ್ರಯೋಗಾತ್ಮಕವಾಗಿ ಬಳಸತೊಡಗಿದೆ ಎಂದು ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷ ಹೇಳಿದರು.

ಇನ್ನು ಬಿಲ್ ಗೇಟ್ಸ್ ಭಾರತದ ಔಷಧೀಯ ಉದ್ಯಮಕ್ಕೆ ಹೆಚ್ಚಿನ ಸಾಮರ್ಥ್ಯವಿದೆ. ಯಾಕೆಂದರೆ ಇಡೀ ವಿಶ್ವಕ್ಕೆ ಅತಿ ಹೆಚ್ಚು ಔಷಧಿಗಳನ್ನು ಪೂರೈಸುವ ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿವೆ. ಅಲ್ಲದೆ ಭಾರತ ಬೇರೆ ದೇಶಗಳಿಗಿಂತ ಅತಿ ಹೆಚ್ಚು ವ್ಯಾಕ್ಸಿನ್​ಗಳನ್ನು ಉತ್ಪಾದಿಸಿದೆ. ಹೀಗಾಗಿ ಭಾರತ ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ಉತ್ಪಾದಿಸುವ ಸಾಮರ್ಥ್ಯವಿದೆ ಎಂದಿದ್ದಾರೆ.

Published On - 6:30 pm, Thu, 16 July 20