ರೈಲು ಪ್ರಯಾಣಿಕರೇ ಗಮನಿಸಿ; ನಾಳೆಯಿಂದ ರೈಲ್ವೆ ಇಲಾಖೆಯಿಂದ ಲಗೇಜ್ ಆನ್‌ಲೈನ್ ಬುಕಿಂಗ್ ಆರಂಭ

ರೈಲ್ವೆ ನಿಲ್ದಾಣಗಳಲ್ಲಿ ಉದ್ದದ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗಲೇ ಹೆಚ್ಚುವರಿ ಲಗೇಜ್ ವಿವರಗಳನ್ನು ನಮೂದಿಸಿ ಲಗೇಜ್ ಬುಕ್ ಮಾಡಲು ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ನಾಳೆಯಿಂದ (ಜುಲೈ 31) ಆನ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ, ಉಚಿತ ಮಿತಿಗಿಂತ ಹೆಚ್ಚಿನ ಲಗೇಜ್ ಒಯ್ಯುವ ಪ್ರಯಾಣಿಕರು ರೈಲು ಹೊರಡುವ ಮೊದಲು ಪಾರ್ಸಲ್ ಕಚೇರಿಗಳಿಗೆ ತೆರಳಿ ತಮ್ಮ ಹೆಚ್ಚುವರಿ ಲಗೇಜ್ ಅನ್ನು ಕಾಯ್ದಿರಿಸಬೇಕಾಗಿತ್ತು. ಆದರೆ, ಇನ್ಮುಂದೆ ಆ ತಲೆಬಿಸಿ ಇರುವುದಿಲ್ಲ.

ರೈಲು ಪ್ರಯಾಣಿಕರೇ ಗಮನಿಸಿ; ನಾಳೆಯಿಂದ ರೈಲ್ವೆ ಇಲಾಖೆಯಿಂದ ಲಗೇಜ್ ಆನ್‌ಲೈನ್ ಬುಕಿಂಗ್ ಆರಂಭ
Indian Railway
Image Credit source: PTI

Updated on: Jul 30, 2026 | 4:30 PM

ನವದೆಹಲಿ, ಜುಲೈ 30: ರೈಲು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ (Indian Railways) ಇಲಾಖೆ ನಾಳೆಯಿಂದ (ಜುಲೈ 31) ನೂತನ ಆನ್‌ಲೈನ್ ಲಗೇಜ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸುತ್ತಿದೆ. ಉಚಿತ ಮಿತಿಗಿಂತ ಹೆಚ್ಚು ಲಗೇಜ್ ಒಯ್ಯುವ ಪ್ರಯಾಣಿಕರು ಇನ್ಮುಂದೆ ರೈಲ್ವೆ ನಿಲ್ದಾಣದ ಲಗೇಜ್ ಬುಕಿಂಗ್ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಪ್ರಯಾಣಕ್ಕೂ ಮೊದಲೇ ಹೆಚ್ಚುವರಿ ಲಗೇಜ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದರಿಂದ, ಪ್ರಯಾಣದ ವೇಳೆ ಟಿಕೆಟ್ ತಪಾಸಕರು (TTE) ವಿಧಿಸುವ ಭಾರಿ ದಂಡದಿಂದ ಪ್ರಯಾಣಿಕರು ಪಾರಾಗಬಹುದು.

ಹೊಸ ಆನ್‌ಲೈನ್ ಹೆಚ್ಚುವರಿ ಲಗೇಜ್ ಬುಕಿಂಗ್ ಸೌಲಭ್ಯವು ಅನಗತ್ಯ ಪೇಪರ್ ಕೆಲಸ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ಮತ್ತು ದೇಶಾದ್ಯಂತ ರೈಲ್ವೆ ಟರ್ಮಿನಲ್‌ಗಳಲ್ಲಿ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಭಾರತದ ಮೊದಲ ಹೈಡ್ರೋಜನ್ ಟ್ರೈನ್; ಇದು ವಿಶ್ವದ ಅತಿ ಶಕ್ತಿಶಾಲಿ, ಅತಿ ಉದ್ದದ ಜಲಜನಕ ರೈಲು

ಉಚಿತ ಲಗೇಜ್ ಮಿತಿ ವಿವರ:

ಪ್ರಯಾಣಿಕರು ತಾವು ಪ್ರಯಾಣಿಸುವ ಕ್ಲಾಸ್​​ಗೆ ಅನುಗುಣವಾಗಿ ಉಚಿತವಾಗಿ ಕೊಂಡೊಯ್ಯಬಹುದಾದ ಮತ್ತು ಗರಿಷ್ಠ ಬುಕ್ ಮಾಡಬಹುದಾದ ಲಗೇಜ್ ಮಿತಿ ಹೀಗಿದೆ:

ಎಸಿ ಫಸ್ಟ್ ಕ್ಲಾಸ್:

ಉಚಿತ ಮಿತಿ: 70 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 150 ಕೆಜಿ

ಫಸ್ಟ್ ಕ್ಲಾಸ್ ಮತ್ತು ಎಸಿ 2-ಟೈಯರ್:

ಉಚಿತ ಮಿತಿ: 50 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 100 ಕೆಜಿ

ಎಸಿ 3-ಟೈಯರ್, ಎಸಿ 3 ಇಕಾನಮಿ ಮತ್ತು ಎಸಿ ಚೇರ್ ಕಾರ್:

ಉಚಿತ ಮಿತಿ: 40 ಕೆಜಿ

ಸ್ಲೀಪರ್ ಕ್ಲಾಸ್ :

ಉಚಿತ ಮಿತಿ: 40 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 80 ಕೆಜಿ

ಸೆಕೆಂಡ್ ಕ್ಲಾಸ್ / ಜನರಲ್:

ಉಚಿತ ಮಿತಿ: 35 ಕೆಜಿ

ಗರಿಷ್ಠ ಬುಕಿಂಗ್ ಮಿತಿ: 70 ಕೆಜಿ

ಪ್ರಯಾಣಕ್ಕೂ ಮುನ್ನ ಹೆಚ್ಚುವರಿ ಲಗೇಜ್ ಅನ್ನು ಆನ್‌ಲೈನ್‌ನಲ್ಲೇ ಕಾಯ್ದಿರಿಸುವ ಪ್ರಯಾಣಿಕರು, ತಮ್ಮ ಲಗೇಜ್‌ಗೆ ಬೀಳುವ ದಂಡದಿಂದ ಮುಕ್ತಿ ಪಡೆಯಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನೂತನ ಉಪಕ್ರಮವು ಲಗೇಜ್ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲಿದ್ದು, ರೈಲು ಪ್ರಯಾಣಿಕರ ಅಡಚಣೆಗಳನ್ನು ಕಡಿಮೆ ಮಾಡಲಿದೆ.

ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಪೂಜೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆಯಿಂದ ಸ್ಪಷ್ಟನೆ

ಈ ಆನ್​ಲೈನ್​ ಬುಕಿಂಗ್​ನ ಅನುಕೂಲಗಳು:

ಕ್ಯೂ ನಿಲ್ಲುವ ಕಿರಿಕಿರಿ ಇಲ್ಲ: ರೈಲ್ವೆ ನಿಲ್ದಾಣಗಳ ಲಗೇಜ್ ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವುದನ್ನು ಈ ಆನ್‌ಲೈನ್ ಸೇವೆ ನಿವಾರಿಸುತ್ತದೆ.

ಸುಲಭ ಆನ್‌ಲೈನ್ ಬುಕಿಂಗ್: ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸುವಾಗಲೇ ಅಥವಾ ಪ್ರಯಾಣದ ಮುನ್ನ IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಹೆಚ್ಚುವರಿ ಲಗೇಜ್‌ಗೆ ಶುಲ್ಕ ಪಾವತಿಸಿ ಬುಕ್ ಮಾಡಬಹುದು.

ದಂಡದಿಂದ ಪಾರಾಗಬಹುದು: ರೈಲಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಲಗೇಜ್ ತೆಗೆದುಕೊಂಡು ಹೋಗಿ ಕೊನೆ ಕ್ಷಣದಲ್ಲಿ ಸಿಕ್ಕಿಬಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ. ಆನ್‌ಲೈನ್ ಪ್ರಿ-ಬುಕಿಂಗ್ ಮೂಲಕ ದಂಡದಿಂದ ಪಾರಾಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us