ಹೊಸ ವರ್ಷದಂದು ಹೊಸ ಉತ್ಸಾಹದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವರ್ಷದ ಮೊದಲ ಬಾಹ್ಯಾಕಾಶ ಯಾತ್ರೆಗೆ ಸಿದ್ಧತೆ ನಡೆಸಿದೆ. ಕಪ್ಪುಕುಳಿ ಅಧ್ಯಯನಕ್ಕಾಗಿ ಇಂದು 9.10ರ ಸುಮಾರಿಗೆ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ವರ್ಷದ ಮೊದಲ ಮಿಷನ್ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಆರಂಭವಾಗಲಿದೆ.
ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ವಿಶೇಷ ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.
ಎಕ್ಸ್‌ಪೋಸ್ಯಾಟ್ ಒಂದು ರೀತಿಯ ವೀಕ್ಷಣಾಲಯವಾಗಿದೆ, ಇದು ಬಾಹ್ಯಾಕಾಶದಿಂದ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2021 ರಲ್ಲಿ ಇಮೇಜಿಂಗ್ ಎಕ್ಸ್-ರೇ ಪೋಲಾರಿಮೆಟ್ರಿ ಎಕ್ಸ್‌ಪ್ಲೋರರ್ (IXPE) ಹೆಸರಿನ ಮಿಷನ್ ಅನ್ನು ಪ್ರಾರಂಭಿಸಿತು. ಇದರ ಮೂಲಕ ಕಪ್ಪು ಕುಳಿಗಳು ಮತ್ತು ಬಾಹ್ಯಾಕಾಶದಲ್ಲಿರುವ ಇತರ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತಿದೆ.
2024ರ ಮಾರ್ಚ್ನಲ್ಲಿ ಪುನೀತ್ ಉಪಗ್ರಹ ಉಡಾವಣೆ ಸಾಧ್ಯತೆ: ಇಸ್ರೋ ಜತೆ ಸತತ ಸಂಪರ್ಕದಲ್ಲಿರಲು ಸಚಿವರಿಂದ ಸೂಚನೆ
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಎಕ್ಸ್ ಪೋಸ್ಯಾಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಎಕ್ಸೋಪಾಸ್ಯಾಟ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಉಪಗ್ರಹವನ್ನು ಭೂಮಿಯ ಕೆಳಗಿನ ಕಕ್ಷೆಯಲ್ಲಿ ಸ್ಥಾಪಿಸಲಾಗುವುದು, ಅಲ್ಲಿಂದ ಭೂಮಿಗೆ 650 ಕಿ.ಮೀ ಅಂತರವಿರಲಿದೆ. ಉಡಾವಣೆಯು ಇಸ್ರೋದ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ