ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಮಾಡಿದ ಇಸ್ರೋ
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ. ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಇರುವ ಎಕ್ಸ್‌ಪೋಸ್ಯಾಟ್ (XPoSat (X-ray Polarimeter Satellite)) ಅನ್ನು ತನ್ನ ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಉಡಾವಣೆ ಮಾಡಿದೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ. ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಇರುವ ಎಕ್ಸ್‌ಪೋಸ್ಯಾಟ್ (XPoSat (X-ray Polarimeter Satellite)) ಅನ್ನು ತನ್ನ ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಉಡಾವಣೆ ಮಾಡಿದೆ.
2023 ರಲ್ಲಿ ಚಂದ್ರಯಾನ -3 ಯೋಜನೆ ಮೂಲಕ ಚಂದ್ರನನ್ನು ತಲುಪಿದ ಬಳಿಕ ಮತ್ತು ಆದಿತ್ಯ ಎಲ್ -1 ಮಿಷನ್ ಮೂಲಕ ಸೂರ್ಯನೆಡೆಗೆ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಇಸ್ರೋ ಈ ವರ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ವರ್ಷದ ಮೊದಲ ಮಿಷನ್ ಅನ್ನು ಪ್ರಾರಂಭಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ವಿಶೇಷ ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ಎರಡನೇ ದೇಶ ಭಾರತವಾಗಿದೆ. ಎಕ್ಸ್‌ಪೋಸ್ಯಾಟ್ ಸಂಶೋಧನೆಗಾಗಿ ಒಂದು ರೀತಿಯ ವೀಕ್ಷಣಾಲಯವಾಗಿದೆ, ಇದು ಬಾಹ್ಯಾಕಾಶದಿಂದ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಮತ್ತಷ್ಟು ಓದಿ: ಹೊಸ ವರ್ಷದಂದು ಹೊಸ ಇತಿಹಾಸ ಸೃಷ್ಟಿಸಲು ಇಸ್ರೋ ಸಜ್ಜು, ಕಪ್ಪು ಕುಳಿ ಅಧ್ಯಯನಕ್ಕೆ ಉಪಗ್ರಹ ಉಡಾವಣೆ
ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳ ಭೌತಶಾಸ್ತ್ರಜ್ಞ ಡಾ. ವರುಣ್ ಭಲೇರಾವ್, ನಾಸಾದ 2021 ರ ಇಮೇಜಿಂಗ್ ಎಕ್ಸ್-ರೇ ಪೊಲಾರಿಮೆಟ್ರಿ ಎಕ್ಸ್‌ಪ್ಲೋರರ್ ಅಥವಾ IXPE ಎಂಬ ಮಿಷನ್ ನಂತರ ಇದು ಈ ರೀತಿಯ ಎರಡನೇ ಮಿಷನ್ ಆಗಿದೆ.
ಡಾ.ವರುಣ್ ಭಲೇರಾವ್ ಮಾತನಾಡಿ, ಬ್ರಹ್ಮಾಂಡದಲ್ಲಿ ಕಪ್ಪು ಕುಳಿಯು ಅತ್ಯಧಿಕ ಗುರುತ್ವಾಕರ್ಷಣೆಯ ಬಲವನ್ನು ಹೊಂದಿರುವ ವಸ್ತುವಾಗಿದೆ, ಆದರೆ ನ್ಯೂಟ್ರಾನ್ ನಕ್ಷತ್ರಗಳು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Mon, 1 January 24