ಸಾಂಚಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಸೋಲಾರ್ ಸಿಟಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

|

Updated on: Sep 06, 2023 | 11:58 AM

Sanchi Solar City: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಕನಸಿನ ಯೋಜನೆಯಾದ ಆತ್ಮ ನಿರ್ಭರ ಭಾರತ್ ಅಡಿಯಲ್ಲಿ ಮಧ್ಯಪ್ರದೇಶದ ಮೊದಲ ಹಾಗೂ ಭಾರತದ ಎರಡನೇ ಸೌರ ನಗರವನ್ನು ರೈಸನ್ ಜಿಲ್ಲೆಯ ಸಾಂಚಿಯಲ್ಲಿ ನಿರ್ಮಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ವಿಶ್ವವಿಖ್ಯಾತ ಪ್ರವಾಸಿ ತಾಣ ಸಾಂಚಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಲಿದ್ದಾರೆ.

ಸಾಂಚಿಯಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಸೋಲಾರ್ ಸಿಟಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು
ಸೋಲಾರ್ ಸಿಟಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಕನಸಿನ ಯೋಜನೆಯಾದ ಆತ್ಮ ನಿರ್ಭರ ಭಾರತ್ ಅಡಿಯಲ್ಲಿ ಮಧ್ಯಪ್ರದೇಶದ ಮೊದಲ ಹಾಗೂ ಭಾರತದ ಎರಡನೇ ಸೌರ ನಗರವನ್ನು ರೈಸನ್ ಜಿಲ್ಲೆಯ ಸಾಂಚಿಯಲ್ಲಿ ನಿರ್ಮಿಸಲಾಗಿದೆ. ಇಂದು ಸಂಜೆ 4 ಗಂಟೆಗೆ ವಿಶ್ವವಿಖ್ಯಾತ ಪ್ರವಾಸಿ ತಾಣ ಸಾಂಚಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಲಿದ್ದಾರೆ. ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸಿಕೊಂಡಾಗ ಹೆಚ್ಚುತ್ತಿರುವ ತಾಪಮಾನ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು. ಇಂದು ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿಕೊಂಡು ನೀರು, ವಾಯು, ಸೂರ್ಯ, ಕಲ್ಲಿದ್ದಿಲು ಹೀಗೆ ಹಲವು ನೈಸರ್ಗಿಕ ಸಂಪನ್ಮೂಲಗಳ ಮೂಲಶಕ್ತಿಯನ್ನು ಉತ್ಪಾದಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಆದರೆ ಅದರ ಸಮರ್ಪಕ ಬಳಕೆಯಾಗುತ್ತಿಲ್ಲ.

3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

ಸಾಂಚಿಯಲ್ಲಿ ದೇಶದ ಮೊದಲ ಸೋಲಾರ ಸಿಟಿಯನ್ನು ನಿರ್ಮಿಸಲಾಗುತ್ತಿದೆ. ಸಾಂಚಿಯ ನಾಗೋರಿ ಗ್ರಾಮದ ಗುಡ್ಡದ ಮೇಲೆ ಅಳವಡಿಸಿರುವ ದೊಡ್ಡ ಫಲಕಗಳು ಈಗ ಸಂಪೂರ್ಣ ವಿದ್ಯುತ್ ಪೂರೈಕೆಗೆ ಸಿದ್ಧವಾಗಿವೆ. ಸುಮಾರು 18 ಕೋಟಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೋಲಾರ್ ಸಿಟಿ 3 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ಇದರಿಂದ ಸಾಂಚಿ ನಗರವು ಪ್ರಕಾಶಿಸುವುದಲ್ಲದೆ, ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ.

ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟನೆ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೆಲಿಕಾಪ್ಟರ್ ಮೂಲಕ ಸಾಂಚಿ ಗ್ರಾಮ ತಲುಪಲಿದ್ದು, ಸಾಂಚಿ ಸ್ತೂಪದ ಮೇಲೆ ನಿರ್ಮಿಸಲಾದ ವ್ಯೂ ಪಾಯಿಂಟ್​ನಿಂದ ಕಾರಿನಲ್ಲಿ ಸೌರ ನಗರವನ್ನು ವೀಕ್ಷಿಸಲಿದ್ದಾರೆ.

ಗುಲ್ಗಾಂವ್ ಹಳ್ಳಿಯಲ್ಲೂ ಸೋಲಾರ್ ಸ್ಥಾವರ ಸ್ಥಾಪನೆ

ಅದೇ ಸಮಯದಲ್ಲಿ ಈ ಯೋಜನೆಯ ಡಿಜಿಎಂ ನವನೀತ್ ತಿವಾರಿ ಮಾತನಾಡಿ, ಸಾಂಚಿಯಲ್ಲಿ 3 ಮೆಗಾವ್ಯಾಟ್ ವಿದ್ಯುತ್ ಒದಗಿಸುವ ಸೋಲಾರ್ ಪ್ಲಾಂಟ್ ಕೂಡ ಶೀಘ್ರದಲ್ಲೇ ಸಿದ್ಧವಾಗಲಿದೆ. ಅಂದಾಜು 49 ಕೋಟಿ ರೂ. ವೆಚ್ಚದಲ್ಲಿ ಎರಡೂ ಸ್ಥಾವರಗಳು ಸಿದ್ಧಗೊಳ್ಳಲಿವೆ. ಅದರಲ್ಲಿ ಸಾಂಚಿ ಸ್ಥಾವರವನ್ನು 18 ಕೋಟಿ 75 ಲಕ್ಷ ರೂ,ಗೆ ನಿರ್ಮಿಸಲಾಗಿದೆ.

ಸಾಂಚಿ ಸೋಲಾರ್ ಸಿಟಿಯು ವಾರ್ಷಿಕವಾಗಿ ಸುಮಾರು 13747 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಸುಮಾರು 2.3 ಲಕ್ಷ ವಯಸ್ಕ ಮರಗಳಿಗೆ ಸಮನಾಗಿರುತ್ತದೆ. ಇದರೊಂದಿಗೆ ಸರ್ಕಾರ ಮತ್ತು ನಾಗರಿಕರ ಇಂಧನ ಸಂಬಂಧಿತ ವೆಚ್ಚದಲ್ಲಿ ವಾರ್ಷಿಕವಾಗಿ 7 ಕೋಟಿ ರೂ.ಗಿಂತ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉಳಿತಾಯವಾಗುತ್ತದೆ. ಹವಾಮಾನ ಬದಲಾವಣೆಯ ಅಡ್ಡ ಪರಿಣಾಮಗಳಂತಹ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನೆಟ್ ಝೀರೋ ಇಂಡಿಯಾದ ಪ್ರತಿ ರಾಜ್ಯದಲ್ಲೂ ಸೌರ ನಗರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ.

ಬ್ಯಾಟರಿ ಚಾಲಿತ ಇ-ರಿಕ್ಷಾಗಳು

ಬ್ಯಾಟರಿ ಚಾಲಿತ ಇ-ರಿಕ್ಷಾಗಳು ಮತ್ತು ಕಸದ ವಾಹನಗಳು ಸಹ ನಗರದಲ್ಲಿ ಓಡುತ್ತವೆ. ಇ-ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ.
ಸಾಂಚಿಯಲ್ಲಿ ಪರಿಸರ ಸ್ನೇಹಿ ಸೌಲಭ್ಯಗಳ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಬ್ಯಾಟರಿ ಚಾಲಿತ ಇ-ರಿಕ್ಷಾಗಳು ಮತ್ತು ಕಸದ ವಾಹನಗಳು ಸಹ ನಗರದಲ್ಲಿ ಓಡುತ್ತವೆ. ಇ-ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ.

ಸೋಲಾರ್ ಸಿಟಿ ಬಗ್ಗೆ ಮಾಹಿತಿ

ಸೋಲಾರ್ ನಗರವೆಂದರೆ ನಗರದ ಬಯಲು ಅಥವಾ ಬೆಟ್ಟದ ಪ್ರದೇಶಗಳಲ್ಲಿ ಸೋಲಾರ ಪ್ಯಾನೆಲ್​ಗಳನ್ನು ನೆಟ್ಟು ಅದರಿಂದ ಆ ಸುತ್ತಮುತ್ತಲಿನ ಪ್ರದೇಶಕ್ಕೆ ಬೇಕಾದ ವಿದ್ಯುತ್​ ಅನ್ನು ಉತ್ಪಾದಿಸಲಾಗುತ್ತದೆ. ಸಾಂಚಿಯ ಬೆಟ್ಟದ ಮೇಲೆ ನಿರ್ಮಿಸಲಾದ ಸುಮಾರು 5.5 ಹೆಕ್ಟೇರ್ ಸೋಲಾರ್ ಪ್ಯಾನೆಲ್​ಗಳು ಸಾಂಚಿ ನಗರದ ಅವಶ್ಯಕತೆಗೆ ಅನುಸಾರವಾಗಿ ವಿದ್ಯುತ್ ಉತ್ಪಾದಿಸುತ್ತದೆ. ಸಾಂಚಿ ನಗರಕ್ಕೆ 2 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದ್ದು, ಸೌರ ವ್ಯವಸ್ಥೆಯಿಂದ 3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

ಸಾಂಚಿಯಿಂದ ಸಾಲಮತ್​ಪುರ ಗ್ರಿಡ್ಗೆ ಸೌರಶಕ್ತಿ ಪೂರೈಕೆಯಾಗಲಿದ್ದು, ಅಲ್ಲಿಂದ ಸಾಂಚಿಯ ಪ್ರತಿ ಮನೆಗೆ ವಿದ್ಯುತ್ ಕಂಪನಿ ವಿದ್ಯುತ್ ಪೂರೈಕೆ ಮಾಡಲಿದೆ. ಸಾಂಚಿ ಸೋಲಾರ್ ಸಿಟಿಯು ವಾರ್ಷಿಕವಾಗಿ ಸುಮಾರು 13 ಸಾವಿರದ 747 ಟನ್ ಇಂಗಾದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ಸರಿಸುಮಾರು 2.3 ಲಕ್ಷ ಮರಗಳಿಗೆ ಸಮನಾಗಿರುತ್ತದೆ.

ಸೌರಶಕ್ತಿ ಬಳಕೆ

ಎಲ್ಲಾ ನಗರಗಳಲ್ಲಿ ಹೆಚ್ಚು ಬಳಕೆಯಾಗುವ ಶಕ್ತಿಗಳಲ್ಲಿ ವಿದ್ಯುತ್ ಶಕ್ತಿ ಒಂದು, ಹಾಗೆಯೇ ನಾವು ವಿದ್ಯುತ್​ನ್ನು ವ್ಯಯ ಮಾಡುತ್ತಿದ್ದೇವೆ, ಅದಕ್ಕೆ ಪರ್ಯಾಯವಾಗಿ ಉಚಿತವಾಗಿ ದೊರಕುವ ಶಕ್ತಿ ಸೌರಶಕ್ತಿ ಬೀದಿ ದೀಪಗಳನ್ನು ನಗರದ ರಸ್ತೆಯುದ್ದಕ್ಕೂ ಸ್ಥಾಪಿಸುವುದರಿಂದ ಸರ್ಕಾರಕ್ಕಾಗುವ ಹೊರೆಯನ್ನು ಕಡಿಮೆ ಮಾಡಬಹುದು.

ಇದುವರೆಗೂ ದೇಶದಲ್ಲಿ 55ಕ್ಕೂ ಹೆಚ್ಚು ಸೋಲಾರ್ ನಗರಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರಲ್ಲಿ ರಾಜ್ಯದ ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳು ಸ್ಥಾನ ಪಡೆದುಕೊಂಡಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ