ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಮಹಾರಾಷ್ಟ್ರಕ್ಕೆ ಬಂತು ಆಕ್ಸಿಜನ್ ಎಕ್ಸ್​ಪ್ರೆಸ್

|

Updated on: Apr 23, 2021 | 12:37 PM

Oxygen Express: ಇದೇ ಮೊದಲ ಬಾರಿ ಆಕ್ಸಿಜನ್ ಎಕ್ಸ್​ಪ್ರೆಸ್ ಗುರುವಾರ ವಿಶಾಖಪಟ್ಟಣಂನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸಾಗಿಸಿದೆ.ಆಂಧ್ರ ಪ್ರದೇಶದ ರಾಷ್ಟ್ರೀಯ ಇಸ್ಪತ್ ನಿಗಮ್ ( ಆರ್‌ಐಎನ್‌ಎಲ್) ನಿಂದ ಗುರುವಾರ ಆಕ್ಸಿಜನ್ ಟ್ಯಾಂಕರ್ ಹೊತ್ತು ಈ ರೈಲು ಮಹಾರಾಷ್ಟ್ರಕ್ಕೆ ಹೊರಟಿತ್ತು.

ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಮಹಾರಾಷ್ಟ್ರಕ್ಕೆ ಬಂತು ಆಕ್ಸಿಜನ್ ಎಕ್ಸ್​ಪ್ರೆಸ್
ಆಕ್ಸಿಜನ್ ಎಕ್ಸ್ ಪ್ರೆಸ್
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ ರೋಗಿಗಳು ಆಕ್ಸಿಜನ್ ಲಭಿಸದೆ ಸಂಕಷ್ಟಕ್ಕೀಡಾಗಿರುವ ಹೊತ್ತಲ್ಲಿ ಇದೇ ಮೊದಲ ಬಾರಿ ಆಕ್ಸಿಜನ್ ಎಕ್ಸ್​ಪ್ರೆಸ್ ಗುರುವಾರ ವಿಶಾಖಪಟ್ಟಣಂನಿಂದ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸಾಗಿಸಿದೆ.ಆಂಧ್ರ ಪ್ರದೇಶದ ರಾಷ್ಟ್ರೀಯ ಇಸ್ಪತ್ ನಿಗಮ್ ( ಆರ್‌ಐಎನ್‌ಎಲ್) ನಿಂದ ಗುರುವಾರ ಆಕ್ಸಿಜನ್ ಟ್ಯಾಂಕರ್ ಹೊತ್ತು ಈ ರೈಲು ಮಹಾರಾಷ್ಟ್ರಕ್ಕೆ ಹೊರಟಿತ್ತು. ಮಹಾರಾಷ್ಟ್ರದಿಂದ 7 ಖಾಲಿ ಟ್ಯಾಂಕರ್​ಗಳು ಇಂದು ಬೆಳಗ್ಗೆ ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪತ್ ನಿಗಮ್ ತಲುಪಿದೆ. ಬೆಳಗ್ಗಿನಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (LMO) ಇದಕ್ಕೆ ತುಂಬಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಗುರುವಾರ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ಪ್ರತಿ ಟ್ಯಾಂಕರ್‌ಗೆ 15 ಟನ್‌ಗಳಷ್ಟು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ತುಂಬಿದೆ ಮತ್ತು ಸಂಜೆ ರೈಲು ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಪೂರ್ವ ಕರಾವಳಿ ರೈಲ್ವೆಯ ವಾಲ್ಟೇರ್ ವಿಭಾಗ ಮತ್ತು ಆರ್‌ಐಎನ್‌ಎಲ್ ಅಧಿಕಾರಿಗಳು ಜಂಟಿ ಪ್ರಯತ್ನದಿಂದ ಯೋಜನೆಯನ್ನು ಯಶಸ್ವಿಗೊಳಿಸಿದರು. ಕೊವಿಡ್ ಪ್ರಕರಣಗಳು ಏರಿಕೆಯಾಗಿರುವ ಈ ಹೊತ್ತಲ್ಲಿ ಇಂದು ಪ್ರಯೋಜನಕಾರಿ ಆಗಿದೆ ಎಂದು ರೈಲ್ವೆ ಹೇಳಿದೆ.


ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಆರ್‌ಐಎನ್‌ಎಲ್​ನಿಂದ ಹೊರ ಬರಲು ಸಿದ್ಧವಾಗಿರುವ ರೈಲಿನ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ದ್ರವ ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ತುಂಬಿದ ಮೊದಲ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು ವೈಜಾಗ್‌ನಿಂದ ಮಹಾರಾಷ್ಟ್ರಕ್ಕೆ ತೆರಳಿದೆ. ರೈಲ್ವೆ ಅಗತ್ಯ ಸಮಯದಲ್ಲಿ ಸರಕುಗಳನ್ನು ಸಾಗಿಸುವ ಮೂಲಕ ಮತ್ತು ಎಲ್ಲಾ ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹೊಸತನವನ್ನು ಮೈಗೂಡಿಸಿಕೊಂಡು ತುರ್ತು ಸಮಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.


ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಉತ್ಪಾದಿಸುವ ಉಕ್ಕಿನ ಸ್ಥಾವರಗಳಿಂದ ಆಕ್ಸಿಜನ್  ರೈಲು ಮೂಲಕ ಆಕ್ಸಿಜನ್ ಸಾಗಿಸುತ್ತಿದೆ.

ರೈಲ್ವೆ ಅಗತ್ಯ ಸರಕುಗಳನ್ನು ಸಾಗಿಸುತ್ತದೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಸಹ ಇದೇ ರೀತಿ ಅಗತ್ಯ ವಸ್ತುಗಳನ್ನು ಸಾಗಿಸಿದ್ದು ತುರ್ತು ಸಂದರ್ಭಗಳಲ್ಲಿ ರಾಷ್ಟ್ರದ ಸೇವೆಯನ್ನು ಮುಂದುವರೆಸಿದೆ. ಈ ಬಾರಿ ದೇಶದ ವಿವಿಧ ಭಾಗಗಳಿಗೆ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ಮೂಲಕರೋಗಿಗಳಿಗೆ ಮತ್ತು ವಿವಿಧ ಆಸ್ಪತ್ರೆಗಳಿಗೆ ಸಹಾಯ ಮಾಡುತ್ತದೆ ಎಂದು ರೈಲ್ವೆ ಹೇಳಿದೆ.

ಈ ಕಾರ್ಯವನ್ನು ನಿರ್ವಹಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಚೇತನ್ ಶ್ರೀವಾಸ್ತವ ನೇತೃತ್ವದ ವಾಲ್ಟೇರ್ ತಂಡವನ್ನು ಜನರಲ್ ಮ್ಯಾನೇಜರ್ ವಿದ್ಯಾ ಭೂಷಣ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ:  ಆಕ್ಸಿಜನ್ ಸಿಗುತ್ತಿಲ್ಲ ಎಂದ ವ್ಯಕ್ತಿಯಲ್ಲಿ ಹೀಗೆ ಕೇಳಿದ್ರೆ ಕಪಾಳಕ್ಕೆ ಎರಡೇಟು ಸಿಗುತ್ತದೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್

(India’s Oxygen Express train made its first run on Thursday from Visakhapatnam to Maharashtra)