AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಪೋಸ್ಟ್: ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಅಂದ್ರೆ ಏನು ಗೊತ್ತಾ?

ಟರ್ಕಿಶ್ ಭಾಷೆಯಲ್ಲಿ 'ಇಂದಿರಾ ಗಾಂಧಿ' ಎಂದರೆ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಳ್ಳುವುದು ಎಂಬ ವೈರಲ್ ಪೋಸ್ಟ್ ಸತ್ಯ. 'ಇಂದಿರ್ಮೆಕ್' ಎಂಬ ಮೂಲ ಪದದಿಂದ ಬಂದಿರುವ ಈ ಆಡುಮಾತಿಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿಗೂ ನೇರ ಸಂಬಂಧವಿಲ್ಲ. ಉಚ್ಚಾರಣೆಯ ಹೋಲಿಕೆಯಿಂದಾಗಿ ಈ ಪದ ರೂಢಿಯಾಗಿದೆ. 2014ರಲ್ಲಿ ಟರ್ಕಿ ವಿಪಕ್ಷಗಳು ಭ್ರಷ್ಟಾಚಾರದ ವಿರುದ್ಧ ಈ ಪದ ಬಳಸಿದ್ದವು. ಇದು ಭಾಷಾಶಾಸ್ತ್ರದ ಕುತೂಹಲಕರ ಸಂಗತಿ.

ವೈರಲ್ ಪೋಸ್ಟ್: ಟರ್ಕಿಶ್ ಭಾಷೆಯಲ್ಲಿ 'ಇಂದಿರಾ ಗಾಂಧಿ' ಅಂದ್ರೆ ಏನು ಗೊತ್ತಾ?
ಕೀರ್ತನಾImage Credit source: X Account-Abhijit Iyer
ನಯನಾ ರಾಜೀವ್
|

Updated on: Jun 19, 2026 | 2:18 PM

Share

ನವದೆಹಲಿ, ಜೂನ್ 19: ಒಂದೊಂದು ಪದಕ್ಕೆ ಒಂದೊಂದು ಭಾಷೆಯಲ್ಲಿ ಒಂದೊಂದು ಅರ್ಥವಿರುತ್ತದೆ. ಹಾಗೆಯೇ ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು ಗೊತ್ತಾ. ಸಂಪೂರ್ಣ ಮಾಹಿತಿ ಇಲ್ಲಿದೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅಭಿಜಿತ್ ಐಯ್ಯರ್ ಎಂಬುವವರು ಕೀರ್ತನಾ ಎಂಬುವವರ ಪೋಸ್ಟ್ ಹಂಚಿಕೊಂಡಿದ್ದು​ ವೈರಲ್ ಆಗಿದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಎಂದರೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು, ಕಳ್ಳತನ ಮಾಡುವುದು ಅಥವಾ ವಂಚಿಸುವುದು ಎಂದರ್ಥ ಎಂದು ಹೇಳಿದ್ದಾರೆ. ಈ ಪೋಸ್ಟ್ ರಾಜಕೀಯ ವಲಯ ಹಾಗೂ ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕೀರ್ತನಾ ಎಂಬುವವರು ತಮ್ಮ ಸ್ನೇಹಿತರ ಜತೆ ಮಾತನಾಡುವಾಗ ಇಂದಿರಾ ಗಾಂಧಿ ಎಂಬ ಪದ ಬಳಸಿದ್ದರಂತೆ, ಆಗ ಇಂದಿರಾ ಗಾಂಧಿ ಎನ್ನುವ ಪದದ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಆಕೆಯನ್ನು ಅವರು ಕೇಳಿದ್ದರಂತೆ, ಆಗ ಅವರು ಭಾರತದ ಮಾಜಿ ಪ್ರಧಾನಿ ಎಂದು ಹೇಳಿದಾಗ, ಇಲ್ಲ ಇಲ್ಲ ನಾವು ಮಾತನಾಡುತ್ತಿರುವುದು ವ್ಯಕ್ತಿ ಬಗ್ಗೆ ಅಲ್ಲ ವ್ಯವಸ್ಥೆ ಬಗ್ಗೆ ಇಂದಿರಾ ಗಾಂಧಿ ಎಂದರೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಎಂದರ್ಥ ಎಂದು ಹೇಳಿದ್ದರಂತೆ.

70 ಹಾಗೂ 80ನೇ ದಶಕದಲ್ಲಿ ಈ ಪದ ಬಳಕೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಪದ ಬಳಸುತ್ತಿದ್ದರೂ ಆ ಹೆಸರಿನ ವ್ಯಕ್ತಿ ಇದ್ದಾರೆ ಎಂದು ಟರ್ಕಿಯ ಬಹುತೇಕ ಜನರಿಗೆ ತಿಳಿದಿರಲಿಲ್ಲ. 2014ರಲ್ಲಿ ಟರ್ಕಿಯ ವಿಪಕ್ಷವು ಇಂಡಿರಾ ಗಾಂಧಿ ಮೆಮೋರಿಯಲ್ ವೀಕ್ ಅನ್ನು ಆರಂಭಿಸಿತ್ತು. ಆಗಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಆಂದೋಲನ ಅದಾಗಿತ್ತು. ಪೊಲೀಸರು ಬಂದು ಬ್ಯಾನರ್​ ಅನ್ನು ಕಿತ್ತು ಹಾಕಿದ್ದರು. ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಏನಿದು ಅಭಿಯಾನ ಎಂದು ಪ್ರಶ್ನೆ ಮಾಡಿದ್ದರು.

ವಿಡಿಯೋ

ಭಾಷಾ ತಜ್ಞರು ಮತ್ತು ಡಿಕ್ಷನರಿಗಳ ಪ್ರಕಾರ, ಈ ವೈರಲ್ ಪೋಸ್ಟ್‌ ಸುಳ್ಳಲ್ಲ, ಟರ್ಕಿಶ್ ಭಾಷೆಯ ಆಡುಭಾಷೆಯಲ್ಲಿ ನಿಜವಾಗಿಯೂ ‘ಇಂದಿರಾ ಗಾಂಧಿ’ ಎಂಬ ಪದವನ್ನು ಬಳಸಲಾಗುತ್ತದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರ್ಮೆಕ್’ (İndirmek) ಎಂದರೆ ಒಂದು ವಸ್ತುವನ್ನು ಕೆಳಗಿಳಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಎಂದರ್ಥ.

ಕಾಲಾನಂತರದಲ್ಲಿ ಟರ್ಕಿಯ ಯುವಕರು ಮತ್ತು ಅಲ್ಲಿನ ಆಡುಭಾಷೆಯಲ್ಲಿ, ಯಾರಾದರೂ ಹಣವನ್ನು ಲಪಟಾಯಿಸಿದರೆ ಅಥವಾ ಕಳ್ಳತನ ಮಾಡಿದರೆ ಅದನ್ನು ತಮಾಷೆಯಾಗಿ ‘ಇಂದಿರಾ ಗಾಂಧಿ’ (İndira gandi) ಎಂದು ಕರೆಯಲು ಆರಂಭಿಸಿದರು.

ಭಾರತದ ನಂಟಿದೆಯೇ?: ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನೇ ಹೋಲುತ್ತದೆಯಾದರೂ, ಟರ್ಕಿಶ್ ಭಾಷೆಯ ಮೂಲ ಪದಕ್ಕೂ ಭಾರತದ ರಾಜಕಾರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದರೆ, ಕೇವಲ ಉಚ್ಚಾರಣೆಯ ಹೋಲಿಕೆಯಿಂದಾಗಿ ಭಾರತೀಯ ನೆಟ್ಟಿಗರು ಇದನ್ನು ರಾಜಕೀಯ ವ್ಯಂಗ್ಯಕ್ಕೆ ವ್ಯಾಪಕವಾಗಿ ಬಳಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ