ತುರ್ತು ಪರಿಸ್ಥಿತಿ ವೇಳೆ ಇಂದಿರಾಗಾಂಧಿ ನಮ್ಮನ್ನು ಜೈಲಿಗೆ ಹಾಕಿದರು, ಆದರೆ ನಿಂದಿಸಿಲ್ಲ: ಲಾಲು ಪ್ರಸಾದ್

|

Updated on: Jun 29, 2024 | 6:24 PM

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಹೇರಿದ ತುರ್ತು ಪರಿಸ್ಥಿತಿ ಬಗ್ಗೆ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ ಲಾಲು ಪ್ರಸಾದ್, ನನ್ನ ಸಹೋದ್ಯೋಗಿಗಳು ಮತ್ತು ನನಗೆ ಇಂದು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಅನೇಕ ಬಿಜೆಪಿ ಮಂತ್ರಿಗಳನ್ನು ಗೊತ್ತಿಲ್ಲ. ಇಂದು ನಮಗೆ ಸ್ವಾತಂತ್ರ್ಯದ ಮೌಲ್ಯದ ಕುರಿತು ಉಪನ್ಯಾಸ ನೀಡುವ ಮೋದಿ, ಜೆಪಿ ನಡ್ಡಾ ಮತ್ತು ಪ್ರಧಾನಿಯವರ ಇತರ ಕೆಲವು ಸಚಿವ ಸಹೋದ್ಯೋಗಿಗಳ ಬಗ್ಗೆ ನಾವು ಕೇಳಿಯೇ ಇರಲಿಲ್ಲ ಎಂದಿದ್ದಾರೆ.

ತುರ್ತು ಪರಿಸ್ಥಿತಿ ವೇಳೆ ಇಂದಿರಾಗಾಂಧಿ ನಮ್ಮನ್ನು ಜೈಲಿಗೆ ಹಾಕಿದರು, ಆದರೆ ನಿಂದಿಸಿಲ್ಲ: ಲಾಲು ಪ್ರಸಾದ್
ಲಾಲು ಪ್ರಸಾದ್ ಯಾದವ್
Follow us on

ದೆಹಲಿ ಜೂನ್ 29: 1975-77ರ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಆಗಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಅನೇಕ ನಾಯಕರನ್ನು ಜೈಲಿಗೆ ಹಾಕಿದ್ದರೂ ಅವರು ಎಂದಿಗೂ ನಿಂದಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಶನಿವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಆರ್ ಜೆಡಿ ಮುಖ್ಯಸ್ಥರು ತಾವು ಮತ್ತು ಪತ್ರಕರ್ತ ನಳಿನ್ ವರ್ಮಾ ಬರೆದ “The Sangh Silence in 1975” ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ. ಆಗಿನ ಪ್ರಧಾನಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ಅವರು ರಚಿಸಿದ್ದ ಸಂಚಾಲಕ ಸಮಿತಿಗೆ ನಾನು ಸಂಚಾಲಕನಾಗಿದ್ದೆ. ನಾನು 15 ತಿಂಗಳಿಗೂ ಹೆಚ್ಚು ಕಾಲ ಭದ್ರತಾ ಕಾಯಿದೆ (ಮಿಸಾ) ಅಡಿಯಲ್ಲಿ ಜೈಲಿನಲ್ಲಿದ್ದೆ” ಎಂದು ಲಾಲು ಪ್ರಸಾದ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

“ ಇಂದು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಅನೇಕ ಬಿಜೆಪಿ ಮಂತ್ರಿಗಳನ್ನು ನನ್ನ ಸಹೋದ್ಯೋಗಿಗಳಿಗಾಗಲೀ ಮತ್ತು ನನಗಾಗಲೀ ಗೊತ್ತೇ ಇಲ್ಲ. ಇಂದು ನಮಗೆ ಸ್ವಾತಂತ್ರ್ಯದ ಮೌಲ್ಯದ ಕುರಿತು ಉಪನ್ಯಾಸ ನೀಡುವ ಮೋದಿ, ಜೆಪಿ ನಡ್ಡಾ ಮತ್ತು ಪ್ರಧಾನಿಯವರ ಇತರ ಕೆಲವು ಸಚಿವ ಸಹೋದ್ಯೋಗಿಗಳ ಬಗ್ಗೆ ನಾವು ಕೇಳಿಯೇ ಇರಲಿಲ್ಲ.

ಲಾಲು ಅವರ ಟ್ವೀಟ್


ಇಂದಿರಾಗಾಂಧಿ ಅವರು ಆ ಕಾಲದ ಹಲವು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದ್ದರು. ಆದರೆ ಅವರು ಎಂದಿಗೂ ಅವರನ್ನು ನಿಂದಿಸಲಿಲ್ಲ ಎಂದು ಬಿಹಾರದ ಮಾಜಿ ಸಿಎಂ ಹೇಳಿದ್ದಾರೆ.

ಇಂದಿರಾಗಾಂಧಿ ನಮ್ಮಲ್ಲಿ ಅನೇಕರನ್ನು ಜೈಲಿಗೆ ಹಾಕಿದರು. ಆದರೆ ಅವರು ಎಂದಿಗೂ ನಮ್ಮನ್ನು ನಿಂದಿಸಲಿಲ್ಲ. ಆಕೆಯಾಗಲಿ ಅಥವಾ ಆಕೆಯ ಮಂತ್ರಿಗಳಾಗಲಿ ನಮ್ಮನ್ನು “ರಾಷ್ಟ್ರವಿರೋಧಿ” ಅಥವಾ “ದೇಶದ್ರೋಹಿ” ಎಂದು ಕರೆಯಲಿಲ್ಲ. ನಮ್ಮ ಸಂವಿಧಾನದ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆಯನ್ನು ಅಪವಿತ್ರಗೊಳಿಸಲು ಆಕೆ ಬಿಡಲಿಲ್ಲ. 1975 ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ, ಆದರೆ 2024 ರಲ್ಲಿ ವಿರೋಧ ಪಕ್ಷವನ್ನು ಯಾರು ಗೌರವಿಸುವುದಿಲ್ಲ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.

ಜೂನ್ 25, 1975 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 21 ತಿಂಗಳ ತುರ್ತು ಪರಿಸ್ಥಿತಿಯನ್ನು ಹೇರಿದರು. ಇದನ್ನು ಮಾರ್ಚ್ 21, 1977 ರಂದು ಹಿಂತೆಗೆದುಕೊಳ್ಳಲಾಯಿತು. ನಂತರದ ಸಾರ್ವತ್ರಿಕ ಚುನಾವಣೆಗಳಲ್ಲಿ, ಇಂದಿರಾ ಗಾಂಧಿಯವರು ಅಧಿಕಾರ ಕಳೆದುಕೊಂಡು, ಜನತಾ ಪಕ್ಷದ ಸರ್ಕಾರವು ಅಧಿಕಾರಕ್ಕೆ ಬಂದಿತು. ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ಇಬ್ಬರೂ ಕ್ರಮವಾಗಿ ರಾಯ್ಬರೇಲಿ ಮತ್ತು ಅಮೇಠಿಯಿಂದ ಚುನಾವಣೆಯಲ್ಲಿ ಸೋತರು.

ಇದನ್ನೂ ಓದಿ: NEET ವಿವಾದ; ಕಾಂಗ್ರೆಸ್ ಚರ್ಚೆ ಬಯಸುವುದಿಲ್ಲ, ಅವರಿಗೆ ಅವ್ಯವಸ್ಥೆ ಮಾತ್ರ ಬೇಕು: ಧರ್ಮೇಂದ್ರ ಪ್ರಧಾನ್

ಆದಾಗ್ಯೂ, ಭಿನ್ನ ಪಕ್ಷಗಳ ಮೈತ್ರಿ 1979 ರಲ್ಲಿ ಕುಸಿಯಿತು. ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 353 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಮರಳಿತು. ಇಂದಿರಾ ಗಾಂಧಿ ಮತ್ತೊಮ್ಮೆ ಪ್ರಧಾನಿಯಾದರು ಮತ್ತು 1984 ರಲ್ಲಿ ಅವರ ಹತ್ಯೆಯಾಗುವವರೆಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Sat, 29 June 24